- ಮಾಜಿ ಡಿಸಿಎಂ ಆಶೀರ್ವಾದ ಪಡೆದ ಮಾಜಿ ಸಿಎಂ ಪುತ್ರ
- ಏಕಕಾಲಕ್ಕೆ ಎಡೆಯೂರು ದೇವಸ್ಥಾನಕ್ಕೆ ಆಗಮಿಸಿದ್ದ ಗಣ್ಯರು
ತುಮಕೂರು ಜಿಲ್ಲೆಯ ಎಡೆಯೂರು ದೇವಸ್ಥಾನದಲ್ಲಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಕಾಲಿಗೆ ಬಿದ್ದು ನಮಸ್ಕರಿಸಿರುವ ಘಟನೆ ನಡೆದಿದೆ.
ಬಿಜೆಪಿ ಮುಖಂಡ ಬಿ.ವೈ ವಿಜಯೇಂದ್ರ ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆಂದು ಆಗಮಿಸಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಕೂಡ ದೇವರ ದರ್ಶನಕ್ಕೆಂದು ಆಗಮಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ : ಹಾಸನಕ್ಕೆ ಅಭ್ಯರ್ಥಿಯಾದ ಸ್ವರೂಪ್
ಇಬ್ಬರು ಗಣ್ಯರು ದೇವಸ್ಥಾನದ ಮುಂಭಾಗದಲ್ಲಿ ಪರಸ್ಪರ ಎದುರಾದಾಗ ಉಭಯ ಕುಶಲೋಪರಿ ನಡೆಸುತ್ತಾ ಯಡಿಯೂರು ಸಿದ್ದಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಅಲ್ಲಿದ್ದ ಕೆಲವರು ಪರಮೇಶ್ವರ್ ಗೆ ಸನ್ಮಾನ ಮಾಡಲು ಶಾಲನ್ನು ತಂದಿದ್ದರು. ಅದೇ ಶಾಲನ್ನು ಪಡೆದ ಪರಮೇಶ್ವರ್ ವಿಜಯೇಂದ್ರ ಅವರಿಗೆ ಹೊದಿಸಿದರು. ಇದಕ್ಕೆ ತಲೆ ಭಾಗಿದ ವಿಜಯೇಂದ್ರ ಪರಮೇಶ್ವರ್ ಕಾಲಿಗೆ ಬಿದ್ದು ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು.