ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಏಳು ಜನ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹1,52,50,000 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸರು ಭೇದಿಸಿರುವ ಹಲವು ಪ್ರಕರಣಗಳ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು, “ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ 7 ಜನರನ್ನು ಬಂಧಿಸಿದ್ದು, ಅವರಲ್ಲಿ 3 ಭಾರತೀಯ ಮತ್ತು 4 ವಿದೇಶಿ ಮೂಲದ ಡ್ರಗ್ ಪೆಡ್ಲರ್ ಗಳಾಗಿದ್ದಾರೆ” ಎಂದು ಹೇಳಿದ್ದಾರೆ.
”ಮಾದಕ ವಸ್ತುಗಳಾದ 92.19 ಗ್ರಾಂ ತೂಕದ 219 ಎಕ್ಸ್‌ಟೆಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್, 130 ಗ್ರಾಂ ತೂಕದ ಚರಸ್, 100.88 ಗ್ರಾಂ ತೂಕದ ಕೊಕೇನ್, ಒಂದು ದ್ವಿಚಕ್ರವಾಹನ ಮತ್ತು ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
‘ವರ್ಕ್ ಫ್ರಮ್ ಹೋಮ್’ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ
ಸಾರ್ವಜನಿಕರಿಗೆ ‘ವರ್ಕ್ ಫ್ರಮ್ ಹೋಮ್’ ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಅಂತರಾಜ್ಯ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಅಪರಾಧಿಗಳನ್ನು ಬಂಧಿಸಿದ್ದಾರೆ.
“ಈ ವೇಳೆ ತಿಳಿದುಬಂದ ಅಂಶವೇನೆಂದರೆ, ಈ ಪ್ರಕರಣಗಳಂತೆಯೆ ಭಾರತದಾದ್ಯಂತ ಒಟ್ಟು 2,143 ಪ್ರಕರಣಗಳು ಎನ್.ಸಿ.ಆರ್.ಪಿ ಪೋರ್ಟಲ್‌ನಲ್ಲಿ ದಾಖಲಾಗಿವೆ ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಅದರಲ್ಲಿ 135 ಪ್ರಕರಣಗಳು ಬೆಂಗಳೂರು ನಗರದ ವ್ಯಾಪ್ತಿಗೆ ಸೇರಿವೆ. 2,143 ಪ್ರಕರಣಗಳಲ್ಲಿ ವಂಚಿಸಿದ್ದ ಹಣದ ಒಟ್ಟು ಮೌಲ್ಯ ₹158,094,159 ಕೋಟಿ ಎಂದು ಕಂಡುಬಂದಿದೆ” ಎಂದಿದ್ದಾರೆ.
The Crime Branch (East) of CCB arrested a rowdy sheeter for violation of externment order issued by DCP East, residing unlawfully in the city since 24/04/2023. The accused faces charges in 2 murder cases, 2 attempted murder cases, and 4 other offenses.#WeServeWeProtect… pic.twitter.com/gb8Jm7UnOo
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) January 30, 2024
“ಅದರಲ್ಲಿ ₹62,83,080 ಲಕ್ಷ ಹಣವನ್ನು 30 ವಿವಿಧ ಬ್ಯಾಂಕ್ ಖಾತೆಗಳಿಂದ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ನಾನಾ ಕಂಪನಿಯ 11 ಮೊಬೈಲ್, 2 ಲ್ಯಾಪ್‌ಟಾಪ್, 15 ಸಿಮ್ ಕಾರ್ಡ್, 3 ಬ್ಯಾಂಕ್ ಚೆಕ್ ಬುಕ್ ಹಾಗೂ ಇದಕ್ಕೆ ಸಂಬಂಧಪಟ್ಟಂತಹ ಇತರೆ ದಾಖಲಾತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ರೌಡಿಶೀಟರ್‌ಗಳ ಗಡಿಪಾರು
“ಸಿಸಿಬಿಯ ಸಂಘಟಿತ ಅಪರಾಧ ದಳದ (ಪೂರ್ವ) ಅಧಿಕಾರಿಗಳು 2023ರ ಏಪ್ರಿಲ್ 24 ರಿಂದ ಒಂದು ವರ್ಷದ ಅವಧಿಗೆ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಉಲ್ಲಂಘಿಸಿ, ಬೆಂಗಳೂರು ನಗರದ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ರೌಡಿಶೀಟರ್‌ನನ್ನು ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ಕೋಟಿ ಮೌಲ್ಯದ ನಿಷೇಧಿತ ಇ-ಸಿಗರೇಟ್ ಪತ್ತೆ: ಬಂಧನ
“ವಶಕ್ಕೆ ಪಡೆದ ರೌಡಿಶೀಟರ್‌ನ ವಿರುದ್ದ 2 ಕೊಲೆ, 2 ಕೊಲೆಯತ್ನ ಹಾಗೂ 4 ಇತರೆ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರಿಗೆ ಸುರಕ್ಷಿತವಾದ ವಾತಾವರಣವನ್ನು ನಿರ್ಮಿಸುವಲ್ಲಿ ಮತ್ತು ಅನ್ಯಾಯದ ವಿರುದ್ದ ಕಾನೂನು ಕ್ರಮಗಳನ್ನು ಜಾರಿಗೊಳಿಸುವಲ್ಲಿ ಪೊಲೀಸರು ಬದ್ದರಾಗಿರುತ್ತಾರೆ” ಎಂದು ಹೇಳಿದ್ದಾರೆ.
ಚಿನ್ನಾಭರಣ ದೋಚಿದ್ದ ಅಂತರ ರಾಜ್ಯ ದರೋಡೆಕೋರರ ಬಂಧನ
“ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲೆರಿ ಅಂಗಡಿಯೊಂದರಲ್ಲಿ ಚೆನ್ನೈ ಬ್ರಾಂಚ್‌ನ ಬ್ಯೂರೊ ಆಫ್ ಸ್ಟ್ಯಾಂಡರ್ಡ್ ಅಧಿಕಾರಿಗಳೆಂದು ಹೇಳಿಕೊಂಡು, ಜ್ಯುವೆಲೆರಿ ಅಂಗಡಿಯಲ್ಲಿ ಹಾಲ್‌ಮಾರ್ಕ್ ಪರಿಶೀಲನೆಗೆಂದು ಬಂದು, ಚಿನ್ನಾಭರಣಗಳನ್ನು ದೋಚಿದ್ದ ಕುಖ್ಯಾತ ಅಂತರ ರಾಜ್ಯದ 4 ಜನ ದರೋಡೆಕೋರರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಅವರುಗಳಿಂದ 1 ಕೆ.ಜಿ 248 ಗ್ರಾಂ ತೂಕದ ₹85 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಜ್ಯುವೆಲೆರಿ ಅಂಗಡಿಯ ಡಿ.ವಿ.ಆರ್‌ನ್ನು ಹಾಗು ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸದಾಕೆಯನ್ನು ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತನಿಖಾಧಿಕಾರಿಯವರು ಆಕೆಯ ವಶದಿಂದ ಸುಮಾರು ₹30 ಲಕ್ಷ ಬೆಲೆಬಾಳುವ 523 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.