ರಾಯಚೂರು | ಸೌಹಾರ್ದ ಪರಂಪರೆಯ ಅಭಿಯಾನದ ಮೂಲಕ ಮಾನವ ಸರಪಳಿ

Date:

Advertisements

ದೇಶದಲ್ಲಿ ತತ್ವಪದಕಾರರು, ಕವಿಗಳು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಕ್ರಿಯಾ ಶೀಲರು, ಸಮಾನತೆ ಮತ್ತು ಸಹಿಷ್ಣುತೆಯ ಆದರ್ಶ ಮಾದರಿಗಳನ್ನು ಬಿತ್ತಿ ಬೆಳೆದಿದ್ದಾರೆ. ಆದರೆ ಇತ್ತೀಚಿನ ಕೆಲವು ಅಹಿತಕರ ಘಟನೆಗಳು ನಮ್ಮ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುತ್ತಿವೆ ಎಂದು ಸೌಹಾರ್ದ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದರು.

ಸೌಹಾರ್ದ ಸಂಘಟನೆಗಳು, ವಿವಿಧ ಪ್ರಗತಿಪರ, ಜನಪರ ಸಂಘಟನೆಗಳು, ಸಮಾನ ಮನಸ್ಕರು ವತಿಯಿಂದ ಸೌಹಾರ್ದ ಪರಂಪರೆಯ ಅಭಿಯಾನದ ಮೂಲಕ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೌಹಾರ್ದತಾ ಮಾನವ ಸರಪಳಿ ರಚಿಸಿದವೇಳೆ ಮಾತನಾಡಿದರು.

“ದ್ವೇಷದ ದಾಹವನ್ನು ಹೆಚ್ಚಿಸುತ್ತಿವೆ. ಮಾನವೀಯ ಮೌಲ್ಯಗಳನ್ನು ಮಣ್ಣು ಮಾಡುತ್ತಿವೆ. ಆದರೂ ನಮ್ಮ ಮಣ್ಣಿನಲ್ಲಿ ಸೌಹಾರ್ದದ ಬೆಳೆ ಹಾಳಾಗುವುದಿಲ್ಲ. ಬದಲಾಗಿ ಬೆಂಕಿಯನ್ನು ಬೆಳಕಾಗಿಸುತ್ತದೆ. ಕೆಂಡವನ್ನೂ ಕರುಳಾಗಿಸುತ್ತದೆ. ಇಂಥ ಪರಂಪರೆಯ ಭರವಸೆಯನ್ನು ಬಿತ್ತರಿಸುವುದು ಎಲ್ಲ ಮಾನವೀಯ ಮನಸ್ಸುಗಳ ನೈತಿಕ ಹೊಣೆಯಾಗಿದೆ” ಎಂದರು.

Advertisements

“ನಮ್ಮ ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಸಮಾನತೆಯ ಅಂಶಗಳನ್ನು ಸೌಹಾರ್ದದ ಸಕಾರಾತ್ಮಕ ಸಾಧನವಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು ಇಂದು ಎಂದಿಗಿಂತ ಹೆಚ್ಚು ಅಗತ್ಯವಾಗಿದೆ. ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವುದು ಹೇಗೆ ಸಂವಿಧಾನ ವಿರೋಧಿಯೆಂದು ಸಾರ್ವಜನಿಕರಿಗೆ ಮತ್ತಷ್ಟು ಮನದಟ್ಟು ಮಾಡಬೇಕಾಗಿದೆ” ಎಂದು ತಿಳಿಸಿದರಿ.

“ನಮ್ಮ ದೇಶದಲ್ಲಿ ಸೌಹಾರ್ದತೆಯ ಗಟ್ಟಿ ಪರಂಪರೆಯಿದೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಈ ಸೌಹಾರ್ದ ಪರಂಪರೆಯು ಸಂಕುಚಿತ ಸವಾಲುಗಳನ್ನು ಮೆಟ್ಟಿ ಮುಂದುವರೆಯುತ್ತ ಬಂದಿದೆ. ಹೀಗೆ ಮುಂದುವರೆಯುತ್ತ, ವಿವಿಧ ಧರ್ಮಗಳ ಜನಸಮುದಾಯಗಳ ನಡುವೆ ಭಾವನಾತ್ಮಕ ಬೆಸುಗೆಯಾಗುತ್ತಾ ಬಂದ ಸೌಹಾರ್ದ ಸಂವೇದನೆಗೆ ಧಕ್ಕೆ ತರಲು ಯಾವುದೇ ಧರ್ಮ ಮೂಲದವರು ಪ್ರಯತ್ನಿಸಿದರೂ ಅದನ್ನು ವಿರೋಧಿಸಬೇಕಾಗುತ್ತದೆ. ಇಲ್ಲದಿದ್ದರೆ ಜನಸಾಮಾನ್ಯರು ನಮ್ಮಲ್ಲಿ ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಕಾಣುತ್ತಾರೆ. ಕೆಲವು ಹಿತಾಸಕ್ತಿಗಳು ಧರ್ಮದ ಹೆಸರಿನಲ್ಲಿ ಜನಸಮುದಾಯದ ನಡುವೆ ಕಂದಕ ಮೂಡಿಸುತ್ತ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತಿರುವಾಗ, ಜನಸಮುದಾಯಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡುವುದು ನಮ್ಮ ಅಭಿಯಾನದ ಉದ್ದೇಶವಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ; ಪ್ರಮೋದ್ ಮಧ್ವರಾಜ್

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರ ಹನುಮಾನ, ಚಾಮರಸ ಮಾಲೀ ಪಾಟೀಲ್, ವೆಂಕಟೇಶ ಬೇವಿನಬೆಂಚಿ, ಕರಿಯಪ್ಪ ಅಚ್ಚೊಳ್ಳಿ, ಹೆಚ್.ಪದ್ಮಾ, ಡಿ ಎಸ್ ಶರಣಬಸವ, ಕೆ ಜಿ ವೀರೇಶ, ಪ್ರವೀಣ್ ರೆಡ್ಡಿ ಗುಂಜಳ್ಳಿ, ಬಷೀರ್ ಅಹ್ಮದ್, ಖಾಜಾ ಅಸ್ಲಾ ಪಾಷಾ, ಸುಲೋಚನಾ, ಜಾನ್ ವೆಸ್ಲಿ, ಗೋಕುರಮ್ಮ, ಆಂಜನೇಯ ಸೇರಿದಂತೆ ಇತರರು ಇದ್ದರು.

ವರದಿ : ಹಫೀಜುಲ್ಲ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X