ಗದಗ ಜಿಲ್ಲಾಡಳಿತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಮಮ್ಮ ಮರೆಣ್ಣವರ ಚಾಲನೆ ನೀಡಿದರು.
ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಶರಣಬಸಪ್ಪ ಹಳೇಮನಿ, “ಸಂವಿಧಾನ ಜಾಗೃತಿ ಜಾಥಾ ಎಂದರೆ ನಮ್ಮೆಲ್ಲರ ರಕ್ಷಣೆ ಮಾಡುವ ಸಂವಿಧಾನ ಸ್ಥಬ್ಧ ಚಿತ್ರಗಳನ್ನೊಳಗೊಂಡ ರಥ. ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕಸನಕ್ಕೆ ಸಂವಿಧಾನ ಸಾಕ್ಷಿಯಾಗಿದೆ” ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಎಮ್ ಬಡಿಗೇರ ಮಾತನಾಡಿ, “ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸಿಸುವ ಸ್ತಬ್ದ ಚಿತ್ರವನ್ನು ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಆ ಮೂಲಕ ಸಂವಿಧಾನ ಕುರಿತು ಸಾರ್ವಜನಿಕರಿಗೆ ಸಂವಿಧಾನದ ಮಹತ್ವ ತಿಳಿಸುವ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ” ಎಂದರು.
ಈ ಸಂದರ್ಭದಲ್ಲಿ , ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎಚ್ ಕೆ ಅರಳಿಕಟ್ಟಿ .ಗ್ರಾ.ಪಂ. ಉಪಾಧ್ಯಕ್ಷರಾದ ಈರಮ್ಮ ಮುದಿಗೌಡ್ರ.ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮುತ್ತು ರಾಯರಡ್ಡಿ.ಸದಸ್ಯರಾದ ಜಡಿಯಪ್ಪಗೌಡ್ರ ಚನ್ನಪ್ಪಗೌಡ್ರ. ಶೋಭಾ ಕೋಣನ್ನವರ. ನಿರ್ಮಲಾ ತಳವಾರ.ಶಂಕ್ರಮ್ಮ ಚಲವಾದಿ. ಬಾಪು ಹಿರೇಗೌಡ್ರ. ಹೆಸ್ಕಾಮ್ ಎಇಇ.ಎಚ್ ಎಮ್ ಖುದಾವಂದ್.ಕಾಲೇಜು ಪ್ರಾಚಾರ್ಯರಾದ ಎಸ್ ವ್ಹಿ ದಂಡನಾಯ್ಕರ.ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜು ಶಿಕ್ಷಕರಾದ ಪಕ್ಕಿರೇಶ ಅಂಗಡಿ ಸಂವಿಧಾನ ಕುರಿತ ಜಾಗೃತಿ ಉಪನ್ಯಾಸ ನೀಡಿದರು.ಶೃಷ್ಟಿ ಕಲಾ ತಂಡದವರಿಂದ ಡಾ.ಅಂಬೇಡ್ಕರ ರವರ ಕ್ರಾಂತಿ ಗೀತೆ ಪ್ರಸ್ತುತ ಪಡಿಸಿದರು. ಬಿ ಎಪ್ ಭಿಮಣ್ಣವರ.ಕಾರ್ಯಕ್ರಮ ನಿರೂಪಣೆ ಮಾಡಿದರು.