ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ಮನುವಾದಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಭಾರತೀಯ ದ್ರಾವೀಡ್ ಸೇನಾ ಆಗ್ರಹಿಸಿದೆ. ವಿಜಯಪುರದಲ್ಲಿ ಪ್ರತಿಭಟನೆ ನಡೆಸಿರುವ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ಆರೋಪಿಗಳಿಗೆ ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಾಧೀಶರು ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಪರಶುರಾಮ್ ಲಂಬು, ರಮೇಶ್ ಚಲವಾದಿ, ಪ್ರಶಾಂತ ಹಟ್ಟಿ, ಗೋಪಿ ಚಲುವಾದಿ, ಸೊಮು ಹಟ್ಟಿ, ಕಂಠೀರವ ಮನೆ, ಶ್ರೀಧರ್ ಹಲ್ಯಾಳ, ಮೀನಾಕ್ಷಿ ಅರವಿಂದ, ಗಂಗಾ ಎಸ್ ದೊಡ್ಡಮನಿ, ಕಲ್ಮೇಶ್ ಶಹಪೆಟಿ, ಭೀಮು ಹಂಚಿನಾಳ, ಸಚಿನ್ ಭಜಂತ್ರಿ, ಎನ್ ಭಜರಂಗಿ ಸೇರಿದಂತೆ ಹಲವರು ಇದ್ದರು.