ಕರಾವಳಿಗರ ಭಾರೀ ವಿರೋಧವಿದ್ದರೂ ಬೆಂಗಳೂರು – ಮಂಗಳೂರು – ಕಣ್ಣೂರು ರೈಲನ್ನು ಕೇರಳದ ಕೊಯಿಕ್ಕೋಡ್ ವರೆಗೂ ವಿಸ್ತರಣೆ ಮಾಡುವ ದಕ್ಷಿಣ ರೈಲ್ವೆಯ ಪ್ರಸ್ತಾವಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ವಿರೋಧಿಸಿ ಪೋಸ್ಟ್ ಹಾಕಲಾಗುತ್ತಿದೆ. ಬೆಂಗಳೂರು–ಮಂಗಳೂರು – ಕಾರವಾರ ರೈಲು ಮಂಜೂರಾದ ಬಳಿಕ ಕೆಲವೇ ದಿನಗಳಲ್ಲಿ ಅದರ ಕೆಲವು ಬೋಗಿಗಳನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಈ ಪ್ರಸ್ತಾವಕ್ಕೂ ಮಂಗಳೂರಿನ ರೈಲು ಪ್ರಯಾಣಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ, ಕಣ್ಣೂರಿಗೆ ವಿಸ್ತರಣೆ ಆದ ರೈಲು ಇದೀಗ ಕೊಯಿಕ್ಕೋಡ್‌ಗೆ ವಿಸ್ತರಣೆ ಆಗಿದೆ.
ಇದೀಗ ಮತ್ತೆ ಕೇರಳ ಲಾಬಿ ಕೆಲಸ ಮಾಡಿದ್ದು, 2ನೇ ಬಾರಿಗೆ ಬೆಂಗಳೂರು-ಮಂಗಳೂರು ರೈಲನ್ನು ವಿಸ್ತರಣೆ ಮಾಡಲಾಗುತ್ತಿದೆ. ಕಣ್ಣೂರಿಗೆ ವಿಸ್ತರಣೆ ಆದ ರೈಲು ಇದೀಗ ಕೊಯಿಕ್ಕೋಡ್‌ಗೆ ರೈಲು ವಿಸ್ತರಣೆ ಆಗಿದೆ. ಈ ರೈಲು ಕಣ್ಣೂರಿಗೆ ವಿಸ್ತರಣೆ ಆದ ಬಳಿಕ, ಆ ಎಂಟು ಬೋಗಿಗಳಲ್ಲಿ ಕೇರಳದ ಪ್ರಯಾಣಿಕರೇ ತುಂಬಿರುತ್ತಾರೆ. ಈಗ ಕೊಯಿಕ್ಕೋಡ್‌ಗೆ ರೈಲು ವಿಸ್ತರಣೆ ಆದರೆ, ಮಂಗಳೂರಿನ ಜನರು ತಮ್ಮ ಕೋಟಾದ ಮತ್ತಷ್ಟು ಸೀಟು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ರೈಲ್ವೆ ಹೋರಾಟಗಾರರ ಆತಂಕವಾಗಿದೆ.
ದಕ್ಷಿಣ ರೈಲ್ವೆ ಬೆಂಗಳೂರು – ಮಂಗಳೂರು – ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ, ಕರ್ನಾಟಕದ ಕರಾವಳಿ ಭಾಗದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾತ್ರಿ 9.35ಕ್ಕೆ ಹೊರಡುವ ಈ ರೈಲು ಮರುದಿನ ಬೆಳಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಕೊಯಿಕ್ಕೋಡ್ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೊರಟು ಸಂಜೆ 5ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಸಂಜೆ 5.05ಕ್ಕೆ ಹೊರಟು ಬೆಳಗ್ಗೆ 6.35ಕ್ಕೆ ಬೆಂಗಳೂರು ತಲುಪಲಿದೆ. ತಲಶ್ಶೇರಿ, ವಡಗರ ಹಾಗೂ ಕುಯಿಲಾಂಡಿಗಳಲ್ಲಿ ವಾಣಿಜ್ಯ ನಿಲುಗಡೆ ನೀಡುವುದಕ್ಕೂ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
@IRCTCofficial @SWRRLY @GMSRailway @RailMinIndia @nalinkateel What is the necessity for extension of train 16511 route to Koz while there are 2 dedicated trains to the region (16527 & 16565)? Please intervene, this will cause grave inconvenience to travelers of coastal Karnataka.
— Kaushik Prabhu (@kaushikprabhu96) January 31, 2024
ರೈಲ್ವೆ ಇಲಾಖೆ ಕರ್ನಾಟಕದ ಕರಾವಳಿಗೆ ಅನ್ಯಾಯ ಮಾಡಿದೆ. ರೈಲನ್ನು ಕೊಯಿಕ್ಕೋಡ್‌ಗೆ ವಿಸ್ತರಣೆ ಮಾಡಿರುವುದರಿಂದ ಕರ್ನಾಟಕದ ಭಾಗದ ಜನರಿಗೆ ರೈಲಿನಲ್ಲಿ ಸೀಟು ಸಿಗುವುದಿಲ್ಲ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಈಗಲೇ ರೈಲುಗಳು ಕಡಿಮೆ ಇವೆ. ಬೆಂಗಳೂರು-ಮಂಗಳೂರು ನಡುವೆ ಹಾಸನ ಮೂಲಕ ಹೊಸ ರೈಲು ಓಡಿಸಿ, ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಬೇಕು ಎಂದು ಬೇಡಿಕೆ ಇಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಹೊರವಲಯದಲ್ಲಿ 20 ಹೊಸ ಉದ್ಯಾನವನಗಳ ಅಭಿವೃದ್ಧಿಗೆ ಬಿಬಿಎಂಪಿ ಯೋಜನೆ
ರೈಲ್ವೆ ಮಂಡಳಿಯು ದಕ್ಷಿಣ ರೈಲ್ವೆ ಹಾಗೂ ನೈರುತ್ಯ ರೈಲ್ವೆ ವಲಯಗಳಿಗೆ ಜ.23ರಂದು ಪತ್ರ ಬರೆದು, “ಹೊಸ ವೇಳಾಪಟ್ಟಿ ಬಗ್ಗೆ ಆದಷ್ಟು ಬೇಗ ಸೂಕ್ತ ದಿನಾಂಕ ನಿಗದಿಪಡಿಸಿ ಈ ಮಾರ್ಪಾಡನ್ನು ತುರ್ತಾಗಿ ಜಾರಿಗೆ ತರಬೇಕು” ಎಂದು ಸೂಚಿಸಿದೆ.