ಚಿಕ್ಕಮಗಳೂರು ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಆಶಯದ ಭಾವೈಕ್ಯತೆಯ ಪ್ರಗತಿಪರ ಸಂಘಟನೆಗಳ ಸಮಾಲೋಚನ ಕಾರ್ಯಕ್ರಮ ನಡೆಯಿತು.
ಎದ್ದೇಳು ಕರ್ನಾಟಕ ಗೌಸ್ ಮೊಹಿದ್ದೀನ್ ಮಾತನಾಡಿ, “ಭಾರತದಲ್ಲಿ ಸಮಾನ ಶಿಕ್ಷಣ ಸಮಾನ ಆರ್ಥಿಕತೆ ಅಂದರೆ ಭೂಮಿ ಹಕ್ಕು ದೊರಕಿದೆಯೆ ಎಂದು ಗತಕಾಲವನ್ನು ಒಮ್ಮೆ ನೋಡಬೇಕಾಗಿದೆ. ಡಾ. ಅಂಬೇಡ್ಕರ್ ಅವರು ಸತತವಾಗಿ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನ ರಾತ್ರಿ ಹಗಲು ಶ್ರಮವಹಿಸಿ ಜಾತಿ ಧರ್ಮಗಡಿ ಭಾಷೆ ವರ್ಣ ಲಿಂಗ, ಮೇಲು-ಕೀಳುಗಳಿಂದ ಹೊರಬರಲು ಅಖಂಡ ಭಾರತಕ್ಕೆ ಉತ್ತಮವಾದ ಸಂವಿಧಾನವನ್ನು ಬರೆದು ಜಗತ್ತಿಗೆ ಪರಿಚಯಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.
“ಇಂತಹ ಪ್ರಜಾಪ್ರಭುತ್ವದಲ್ಲಿ ಈಗ ಏನಾಗುತ್ತಿದೆ, ಈ ದೇಶಕ್ಕೆ ಸ್ವಾತಂತ್ರ್ಯ ಬೇಕು ಇಂಗ್ಲೀಷರಿಂದ ಮುಕ್ತಿಬೇಕು ಎಂದು ನಿರಂತರವಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯನ್ನು ಕೊಲೆ ಮಾಡಿದ್ದು ಯಾರು? ಬಡವರಿಗೆ ಭೂಮಿ ಹಕ್ಕು ಕೊಟ್ಟಂತಹ ಇಂದಿರಾಗಾಂಧಿಯನ್ನು ಕೊಲೆ ಮಾಡಿದ್ದು ಯಾರು? ಹಾಗೂ ವಿಚಾರವಾದಿಗಳಾದಂತ ಗೋವಿಂದ ಪನ್ಸಾರೇ, ಎನ್ ಎನ್ ಕಲಬುರಗಿ ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ್ದು ಯಾರು? ಮನುಷ್ಯ ಮನುಷ್ಯರಲ್ಲಿ ಜಾತಿ ದೇವರು, ಧರ್ಮದ ಹೆಸರಿನಲ್ಲಿ ಅದೆಷ್ಟು ಪ್ರಾಣ ಕಳೆದು ಹೋಯಿತು ಅದೆಷ್ಟು ತಾಯಂದಿರು ಹೆತ್ತ ಹೊಟ್ಟೆಯ ಮೇಲೆ ಕೈ ಇಟ್ಟು ಆಳುತ್ತಿದ್ದಾರೆ” ಎಂದು ಹೇಳಿದರು.
“ಸರ್ವಧರ್ಮ, ಸಮಾನತೆ, ಸಾರ್ವಭೌಮತ್ವ ಸಂವಿಧಾನದ ಹೆಸರಿನಲ್ಲಿ ಗೆದ್ದು ಬಂದ ಮೋದಿ ಸರ್ಕಾರ ದಶವರ್ಷಕ್ಕೆ ಕಾಲಿಟ್ಟಿದೆ. 2014ರಲ್ಲಿ ಎಲ್ಲರಿಗೂ ಆರ್ಥಿಕ ನೆರವು ಕಪ್ಪು ಹಣ ಹೊರ ದೇಶದಿಂದ ತಂದು ಇಲ್ಲಿಯ ಪ್ರಜೆಗಳ ಖಾತೆಗೆ ಹಂಚುವುದು, ನಿರುದ್ಯೋಗಿಗಳಿಗೆ 2 ಕೋಟಿ ಉದ್ಯೋಗ, ಸಮಾನ ಶಿಕ್ಷಣ ಹಾಗೂ ಸರ್ವರಿಗೂ ಸಮಾನತೆ ನೀಡುವ ಭರವಸೆಯಿಂದ ಗೆದ್ದು ಬಂದ ಸರ್ಕಾರ ಮಾಡಿದ್ದಾದರೂ ಏನು? ನರೇಂದ್ರ ಮೋದಿಯು ಗೆದ್ದಾಗ ರೈತರ ಸಾಲ, ರೈತರನ್ನು ಉದ್ದಾರ ಮಾಡುತ್ತೇನೆ ಹಾಗೂ ಅವರ ಬೆಂಬಲವಾಗಿರುತ್ತೇವೆಂದು ಹೇಳಿದರು. ಆದರೆ ಏನು ಆಗಲಿಲ್ಲ. ಹೊರ ದೇಶದಲ್ಲಿ ಕಪ್ಪು ಹಣವನ್ನು ತರುತ್ತೇನೆಂದು ಹೇಳಿದರು. ಆದರೆ ವಿಜಯ ಮಲ್ಯ ಇನ್ನಿತರ ಬಂಡವಾಳ ಶಾಹಿಗಳು ನಮ್ಮ ದೇಶದ ಹಣವನ್ನು ದೋಚಿ ಹೋಗಿದ್ದಾರೆ. ಅಂಬಾನಿ, ಅದಾನಿ ಅವರಿಗೆ ದೇಶದ ಸರ್ಕಾರಿ ಸ್ವತ್ತನ್ನು ಮಾರಿದ್ದಾರೆ” ಎಂದರು.
“ಚುನಾವಣೆ ಮೊದಲೇ ಎನ್‌ಆರ್‌ಸಿಸಿಎ ಜಾರಿ ಮಾಡಿ ಮುಸ್ಲಿಂ ಅವರನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದಾರೆ. ಶೇ. 20ರಷ್ಟು ಕೋಮುವಾದಿಗಳ ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಚುನಾವಣೆಗೋಸ್ಕರ ಪ್ರಧಾನಮಂತ್ರಿಯವರು ಪುಲ್ವಾಮಾ ದಾಳಿ ಮಾಡಿದರು. ಈಗ ರಾಮ ರಾಮ ಎಂದು ರಾಮಮಂದಿರ ನಿರ್ಮಾಣ ಮಾಡಿ ಅವರ ಗೆಲುವಿಗಾಗಿ ಅನೇಕ ಬಡಜನರ ಪ್ರಾಣ ಹಿಂಡುತ್ತಿದ್ದಾರೆ ಹಾಗೂ ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಎದ್ದೇಳು ಕರ್ನಾಟಕ ಗೌಸ್ ಮೊಹಿದ್ದೀನ್ ಮಾತಾಡಿದ್ದಾರೆ.
“ಅಬ್ದುಲ್ ಕಲಾಂ ಅವರು ಚೂರಿ, ಚಾಕು ಈ ದೇಶದ ಪ್ರತಿಯೊಬ್ಬ ಬಡವ ಅಥವಾ ಶ್ರೀಮಂತರಿರಲಿ ಮೊದಲು ಶಿಕ್ಷಣ ಕಲಿಯಬೇಕೆಂದು ಹೇಳಿದ್ದಾರೆ. ಖಡ್ಗಕ್ಕಿಂತ ಲೇಖನದಿಂದ ಈ ದೇಶ ಹಾಗೂ ಮನುಷ್ಯನನ್ನು ಬದಲು ಮಾಡಲು ಸಾಧ್ಯ. ದತ್ತಾತ್ರೇಯ ಸ್ವಾಮೀಜಿ ಹಾಗೂ ಬಾಬಾ ಬುಡನ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಕಾಫಿ ಬಿತ್ತನೆಯನ್ನು ವಿದೇಶದಿಂದ ತಂದು ಇಲ್ಲಿ ಬಿತ್ತನೆ ಮಾಡಿ ಇಡೀ ದೇಶಕ್ಕೆ ಹೆಸರು ತಂದರು” ಎಂದು ಹೇಳಿದರು.
“ಸಮೀರ್ ಅಹಮ್ಮದ್ ಅವರು 3 ಬಾರಿ ಶಾಸಕರು ಹಾಗೂ ಸಚಿವರಾಗಿದ್ದಾರೆ. ಆದರೂ ಅವರು ಸೌಹಾರ್ದದಲ್ಲಿ ಭಾಗಿಯಾಗುತ್ತಿದ್ದರು. ಮೊದಲೆಲ್ಲ ಯಾವುದೇ ಜಾತಿ ಭೇದವಿಲ್ಲದೆ ಜನರು ಬದುಕುತ್ತಿದ್ದರು. ಇತ್ತೀಚೆಗೆ ಜಾತಿಯೆಂಬುದನ್ನು ಮಧ್ಯ ಇಟ್ಟುಕೊಂಡು ರಾಜಕೀಯ ಕುತಂತ್ರಕ್ಕೆ ಯುವ ಜನರಲ್ಲಿ ವಿಷದ ಬೀಜ ಬಿತ್ತಿ ನಮ್ಮೆಲ್ಲರನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಕನ್ನಡ ರಕ್ಷಣ ವೇದಿಕೆ ಜಿಲ್ಲಾ ಸಂಚಾಲಕ ಪ್ರಸನ್ನ ಮಾತಾಡಿದರು.
“ಎದ್ದೇಳು ಕರ್ನಾಟಕ ಯುವಕರನ್ನು ಮೊದಲು ಅವರು ತಿಳುವಳಿಕೆಯ ಅರಿವು ಮುಖ್ಯವಾಗಿದೆ. ಅಂಬೇಡ್ಕರ್ ಸಂವಿಧಾನ ,ಕಾನೂನು ಅಂದರೆ ಏನೆಂದು ತಿಳಿಸಬೇಕಿದೆ. ಯುವ ಪೀಳಿಗೆಯವರು ಕೋಮುವಾದಿಗಳಾಗುತ್ತಿದ್ದಾರೆ. ಎಲ್ಲೋ ತಂದಿರುವ ಅಕ್ಕಿ ತಂದು ಅಕ್ಷತೆ ಎಂದು ಕೊಡುತ್ತಾರೆ. ಜಾತಿ ಧರ್ಮ ತಂದು ದೇವರು ಭಕ್ತಿಯೆಂಬ ಜನರಲ್ಲಿ ಭಯ ಪಡಿಸುತ್ತಾ ಬಂದಿದ್ದಾರೆ. ನಮಗೆ ಉದ್ಯೋಗ ಮುಖ್ಯ, ದೇಶ ಕಾಪಡೋದು ಹಾಗೂ ಮಹಿಳೆಯರನ್ನು ಜಾಗೃತಿ ಮೂಡಿಸಬೇಕಾಗಿದೆ” ಎಂದು ದಸಂಸ ಮುಖಂಡ ಹೊನ್ನಪ್ಪ ಹೇಳಿದರು.
“ಹಿಂದುತ್ವದ ಹೆಸರಿನಲ್ಲಿ ದೇಶ, ಬಂದುತ್ವ, ಸಂವಿಧಾನವನ್ನು ಹಾಳುಮಾಡುತ್ತಿದ್ದಾರೆ. ದೇಶದ ಭದ್ರತಾ ನಾಶ ಮಾಡುವವರು ಈಗ ಆಡಳಿತ ಚುಕ್ಕಾಣಿಯಾಗಿದ್ದಾರೆ. ಯಡೂರಪ್ಪನ ಮಗ ವಿಜಯೇಂದ್ರ ಅಧಿಕಾರಕ್ಕೋಸ್ಕರ ಬೇರೆಯೊಬ್ಬರಿಗೆ ಕೇಸು ದಾಖಲು ಮಾಡುತ್ತಾರೆ. ಮುಸ್ಲಿಮರನ್ನು ಯಾವಾಗಲೂ ಅಪರಾಧಿ ಸ್ಥಾನಕ್ಕೆ ತಂದೆಳೆಯುತ್ತಿದ್ದಾರೆ. ಆರ್‌ಎಸ್‌ಎಸ್ ಇರುವುದೇ ಸುಳ್ಳಿನ ಸಾಮ್ರಾಜ್ಯ ಕಟ್ಟೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿ ಕೊಡದೆ ಎಲ್ಲರೂ ಜಾತಿ ಭೇದ ಮರೆತು ಒಗ್ಗಟ್ಟಾಗಿ ಹೋರಾಟ ಮಾಡೋಣ” ಎಂದು ಎಸ್‌ಡಿಪಿಐ ಸೆಕ್ರೆಟರಿ ಗೌಸ್ ಮುನೀರ್ ಹೇಳಿದರು.
“ಅನಂತ್ ಕುಮಾರ್ ಹೆಗಡೆ ಅವರೇ, ಅಂಬೇಡ್ಕರ್ ಬರೆದಿರುವ ಸಂವಿಧಾನ ಬದಲಾಯಿಸುತ್ತೇವೆಂದು ಹೇಳಿದ್ದಾರೆ. ರಾಮ ಮಂದಿರವನ್ನು ಏನು ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಮ ಮಂದಿರವನ್ನೇ ಬ್ಲಾಸ್ಟ್ ಮಾಡುವ ಸಾಧ್ಯತೆ ಇದೆ. ಹಿಂದೆ ಏನು ನಡೆಯಿತು ಅನ್ನುವುದನ್ನು ಅದನ್ನೇ ಹೇಳುತ್ತಾ ಕುಳಿತುಕೊಂಡರೆ ಏನೂ ಪ್ರಯೋಜನವಿಲ್ಲ. ಮುಂದೆ ಏನು ಮಾಡಬೇಕು ಯಾವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಗಮನ ಹರಿಸಬೇಕು” ಎಂದರು.
“ನಮ್ಮ ಪ್ರಪಂಚದಲ್ಲಿ ಚುನಾವಣೆ ನಡೆಯದೇ ಇರುವ ದೇಶಗಳಿವೆ. ಚುನಾವಣೆಯ ವರ್ಗೀಕರಣಕ್ಕೆ
ಸಂವಿಧಾನದ ಉಳಿವಿಗಾಗಿ ನಾವು ಚುನಾವಣೆಯಲ್ಲಿ ಬದಲಾವಣೆ ತರಬೇಕಿದೆ. ಡಿಲಿಮಿಟೇಶನ್ ಅನ್ನು ವಿಲೀನಗೊಳಿಸಬೇಕಿದೆ. ಅಂಬೇಡ್ಕರ್ ಕುಟುಂಬಕ್ಕೆ ಕುತ್ತು ಬಂದಿದೆ. ಈಗ ನಮಗೆನೇ ಕುತ್ತು ಬರುವ ಸಾಧ್ಯತೆ ಇದೆ. ನಮಗೆ ಆ ಪಕ್ಷ ಈ ಪಕ್ಷ ಅಂತಲ್ಲ ಕೋಮು ಗಲಭೆ ಉಂಟುಮಾಡುತ್ತಿದ್ದಾರೆ. ಕಾಂಗ್ರೆಸ್ ಅವರು ಒಳ್ಳೆ ಪಕ್ಷ ಅಂತ ಅಲ್ಲ, ಅಲ್ಲೂ ಕೂಡ ಭ್ರಷ್ಟರಿದ್ದಾರೆ. ಆದರೆ, ಕೊಲೆಗಾರರಿಂದ ತಪ್ಪಿಸಿಕೊಳ್ಳಲು ನಾವು ಈ ಕೆಲಸ ಮಾಡಬೇಕಿದೆ. ಈ ಸಲ ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಕಾಂಗ್ರೆಸ್ ಸೋತಿದೆ” ಎಂದು ಹೇಳಿದರು.
“ನೋಟು ಬ್ಯಾನ್, ಜಿಎಸ್‌ಟಿ, ಅರಣ್ಯ ಕಾಯಿದೆ, ಹಕ್ಕುಪತ್ರ ಈವರೆಗೂ ಕೊಟ್ಟಿಲ್ಲ. ಶೋಭಾ ಕರಂದ್ಲಾಜೆಗೆ ಎಂ ಪಿ ಕ್ಷೇತ್ರಕ್ಕೆ ಅವರಿಗೆ ಎಷ್ಟು ಬಜೆಟ್ ಬಂದಿದೆ. ಏನು ಅಭಿವೃದ್ದಿ ಮಾಡಿದ್ದಾರೆಂದು ಬಹಿರಂಗವಾಗಿ ಜನರ ಮುಂದೆ ಮಾತಾಡಬೇಕು. ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಆಗುವ ಅಪಾಯಗಳಿಗೆ ನಾವೇ ಹೊಣೆಯಾಗುತ್ತೇವೆ. 900 ವರ್ಷ ಹಿಂದಿನ ಮನುವಾದವನ್ನು ನಮಗರಿವಿಲ್ಲದಂತೆ ಜಾರಿ ಮಾಡುತ್ತಿದ್ದಾರೆ” ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ ಎಲ್ ಅಶೋಕ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಪ್ರಚೋದಿಸುವ ಕೆಲಸ ಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ನಡೆಸಲಿ; ಬಿಜೆಪಿಗೆ ಕಾಂಗ್ರೆಸ್ ಸಲಹೆ
2025ರ ಹೊತ್ತಿಗೆ ಸಂವಿಧಾನವನ್ನು ಹಂತ ಹಂತವಾಗಿ ಬದಿಗೆ ಸರಿಸಿ ಮನುವಾದವನ್ನು ಗುಪ್ತವಾಗಿ ತರಲು ಹಾಗೂ ಹಿಂದುತ್ವ ರಾಷ್ಟ್ರ ಮಾಡಲು ಹೊರಟಿದ್ದಾರೆ. ಮೊನ್ನೆ ಮೊನ್ನೆ ಅನಂತ್ ಕುಮಾರ್ ಹೆಗಡೆ ಕೂಡ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಅವರ ಉದ್ದೇಶ ಅಲ್ಪಸಂಖ್ಯಾತರನ್ನು, ಕ್ರೈಸ್ತ, ದಲಿತ, ಶೂದ್ರರನ್ನು, ಮಹಿಳೆಯರನ್ನು ಸಂಪೂರ್ಣವಾಗಿ ತಮ್ಮ ಗುಲಾಮರಾಗಿಟ್ಟುಕೊಳ್ಳುವ ತಂತ್ರಗಾರಿಕೆ ಷಡ್ಯಂತ್ರವಾಗಿದೆ. ಆದ್ದರಿಂದ ನಾವುಗಳು ಅಲ್ಪಸಂಖ್ಯಾತರಿಗೆ ದಲಿತರಿಗೆ ಮಹಿಳೆಯರಿಗೆ ಜೀವಭದ್ರತೆ ಹಿಂದುಳಿದ ವರ್ಗಗಳಿಗೆ ಜೀವನೋಪಾಯಗಳಿಗೆ ಸಮಾಜದಲ್ಲಿ ಸಮಾನತೆಯ ಆದಾಯ, ನಿರುದ್ಯೋಗಿ ಯುವಕರಿಗೆ ಉದ್ಯೋಗ, ಧರ್ಮ ಜಾತಿ ದೇವರು ಎಂಬುದನ್ನು ಬದಿಗಿಟ್ಟು ಸೂರು, ನೀರು ಭೂಮಿ ಮುಂತಾದ ಮೂಲಸೌಕರ್ಯ ನೀಡುವಂತಹ ಒಟ್ಟಾರೆ ಗಾಂಧಿ ಬಯಸಿದ ಸ್ವಾತಂತ್ರ ಡಾ. ಅಂಬೇಡ್ಕರ್ ಶ್ರಮದ ಸಂವಿಧಾನ ಉಳಿವಿಗಾಗಿ ಕೋಮುವಾದಿಗಳನ್ನು ಸೋಲಿಸಬೇಕು” ಎಂದು ಹೇಳಿದರು.
ಹೌದು ಏಳಬೇಕು ನಾವು ಕನ್ನಡಿಗರು; ಎದ್ದೇಳಲೇಬೇಕು ನಾವು ಕನ್ನಡಿಗರು. ಕನ್ನಡ ಕನ್ನಡಿಗ ಕರ್ನಾಟಕತ್ವಗಳಿಗಾಗಿ ನಾವು ಕನ್ನಡಿಗರು ಎದ್ದೇಳಲೇಬೇಕು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com