ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಮನೆ ಮತ್ತು ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ನಡೆದಿದೆ.
ತೋರಣಗಟ್ಟೆ ಗ್ರಾಮದ ಬಡಪ್ಪ ಎಂಬುವವರ ಮನೆಯಲ್ಲಿ ಜನವರಿ 31ರಂದು ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಬಡಪ್ಪ ಅವರು ಅಂದು ದೇವರಿಗೆ ದೀಪ ಹಚ್ಚಿ, ಬಳಿಕ ಮನೆಯ ಬಾಗಿಲು ಹಾಕಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು.
ಈ ವೇಳೆ, ದೀಪದಿಂದ ಆಕಸ್ಮಿಕಾಗಿ ಬೆಂಕಿ ಯಾವುದೋ ಬಟ್ಟಗೆ ತಗುಲಿದೆ. ಬೆಂಕಿ ಜ್ವಾಲೆಗೆ ಇಡೀ ಮನೆ ಹೊತ್ತಿ ಉರಿದಿದೆ.
ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬಟ್ಟೆ, ದಾಖಲೆಗಳು, ಮನೆಯಲ್ಲಿದ್ದ ವಸ್ತುಗಳು, ಧಾನ್ಯ ಸೇರಿದಂತೆ ಎಲ್ಲವೂ ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಜಗಳೂರು ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕೆರೆ ಮಿತ್ರ ಮತ್ತು ಹಸಿರು ಮಿತ್ರರಾಗಿ ನೋಂದಾಯಿಸಿಕೊಳ್ಳಲು ಅವಧಿ ವಿಸ್ತರಣೆ
ಬಡಪ್ಪ ಅವರು ಅಗ್ನಿ ಅವಘಡದಿಂದ ಆದ ನಷ್ಟಕ್ಕೆ ಪರಿಹಾರ ನೀಡಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಸದ್ಯ ಪರಿಸರ ವಿಕೋಪ ನಿಧಿಯಿಂದ ಪರಿಹಾರ ನೀಡುವ ಭರವಸೆಯನ್ನು ತಾಲೂಕು ದಂಡಧಿಕಾರಿಗಳು ನೀಡಿದ್ದಾರೆ.