ಹಾವೇರಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್‌ ಆಗ್ರಹ

Date:

Advertisements

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾವೇರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ.

ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ಸಂಘಟನೆಯ ಮುಖಂಡ ಉಡಚಪ್ಪ, “ಎಸ್‌.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾಯಿದೆಯಲ್ಲಿನ ಕಲಂ 7(ಡಿ) ರಾಜ್ಯ ಸರ್ಕಾರವು ರದ್ದುಗೊಳಿಸಿದ್ದು, ಈ ಕುರಿತು ಕೂಡಲೆ ಸರ್ಕಾರಿ ಆದೇಶ ಹೊರಡಿಸಬೇಕು” ಎಂದರು.

ಸದರಿ ಕಲಂನಿಂದಾಗಿ ಕಳೆದ ದಶಕದಲ್ಲಿ ಸುಮಾರು 70,000 ಕೋಟಿ ದುರ್ಬಳಕೆ ಆಗಿದ್ದ ಅನುದಾನವನ್ನು ರಾಜ್ಯಸರ್ಕಾರವು ಪರಿಶಿಷ್ಟರಿಗೆ ಮರು ಮಂಜುರಾತಿ ಮಾಡಬೇಕು. ಕಲಂ 7 (ಎ) (ಬಿ) (ಸಿ) ಪ್ರಕಾರ ಸದರಿ ಅನುದಾನವನ್ನು ಪರಿಶಿಷ್ಟರನ್ನು ಹೊರತುಪಡಿಸಿ ಅನ್ಯ ಜಾತಿಗಳು ಮತ್ತು ಅನ್ಯ ಧರ್ಮದವರಿಗೆ ದುರ್ಬಳಕೆ ಮಂಜೂರಾತಿ ಮಾಡಬಾರದು ಎಂದು ಹೇಳಿದರು.

Advertisements

ಹೈ-ಕೋರ್ಟ ಮತ್ತು ಸುಪ್ರಿಂ ಕೋರ್ಟಗಳು ಪಿ.ಟಿ.ಸಿ.ಎಲ್ ಕಾಯ್ದೆಗೆ ವ್ಯತಿರಿಕ್ತವಾಗಿ ತೀರ್ಪುಗಳನ್ನು ನೀಡಿದ್ದು, ಇದರಿಂದಾಗಿ ಸಾವಿರಾರು ಪರಿಶಿಷ್ಟರು ಸಾವಿರಾರು ಎಕರೆ ಭೂಮಿಯನ್ನು ರಾಜ್ಯದಲ್ಲಿ ಕಳೆದಕೊಂಡು ಭೂ ಹೀನರಾಗಿದ್ದಾರೆ. ಅಂತೆ ಕಾಯಿದೆ ಕಲಂ3 (1) (ಬಿ) ಮತ್ತು ಕಲಂ 4 ಇವುಗಳಿಗೆ ತಿದ್ದುಮಡಿ ಮಾಡಬೇಕು. ಕಲಂ3 (1) (ಬಿ)ನಲ್ಲಿರುವ ʼಗ್ರಾಂಟೆಡ್ ಲ್ಯಾಂಡ್ʼ ಪದವನ್ನು ಕೈ ಬಿಟ್ಟು ಬದಲಾಗಿ ʼಸರನ್ ಲ್ಯಾಂಡ್ʼ ಪದವನ್ನು ತಿದ್ದುಪಡಿ ಮಾಡಬೇಕು. ತೋಟಿ ಅಥವಾ ತಳವಾರಿಕೆ ಅಥವಾ ಕುಲವಾಡಿಕೆ ಜಮೀನುಗಳನ್ನು ಸದರಿ ಕಾಯಿದೆಗೆ ಅನ್ವಯಿಸಲು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳು

  1. KREIS ವಸತಿ ಕಾಲೇಜುಗಳಲ್ಲಿ 2 ವರ್ಷ ಉಚಿತ ನೀಟ್/ಸಿ.ಇ.ಟಿ/ಕ್ಲಾಟ್ ತರಬೇತಿಗಳನ್ನು ನೀಡಬೇಕು. ಮತ್ತು ಹೊಸದಾಗಿ ಕಾಮರ್ಸ ಆರಂಭಿಸಬೇಕು.
  1. ರಾಜ್ಯ ಸರ್ಕಾರವು ಹೊರಮೂಲ ಗುತ್ತಿಗೆ ಉದ್ಯೋಗ ಯೋಜನೆಯಲ್ಲಿ (ಔಟ್ ಸೋರ್ಸ್) ಪ.ಜಾತಿ ಮತ್ತು ಪ.ಪಂಗಡ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಿ ಸರ್ಕಾರಿ ಆದೇಶ ಹೊರಡಿಸಬೇಕು.
  1. Good & Services procurement ಪ. ಜಾತಿ ಮತ್ತು ಪ. ಪಂಗಡ 1 ಲಕ್ಷದವರೆಗೂ ಮೀಸಲಾತಿ ನೀಡಿದ ಸರ್ಕಾರದ ಆದೇಶ ಸಂಖ್ಯೆ SWD 34 BCA 2004 ದಿ: 10-03-2005ಕ್ಕೆ ತಿದ್ದುಪಡಿ ಮಾಡಿ ಗರಿಷ್ಟ ಮಟ್ಟ 50 ಲಕ್ಷಕ್ಕೆ ಏರಿಸಿ ಪರಿಶಿಷ್ಟರಿಗೆ ಸ್ವಯಂ ಉದ್ಯೋಗಸ್ಥರ ಸಂಖ್ಯೆ ಹೆಚ್ಚು ಮಾಡಬೇಕು.
  2. ಬುದ್ಧ ಪೂರ್ಣೆಮೆಗೆ ರಾಜ್ಯ ಸರ್ಕಾರ ರಜೆ ಘೋಷಿಸಬೇಕು.7. ಚಂದ್ರಗುಪ್ತ ಮೌರ್ಯ/ಸಾಮ್ರಾಟ್ ಅಶೋಕ ಮೌರ್ಯ/ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನವನ್ನು (ರಜೆ ರಹಿತ) ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಬೇಕು.
  3. ಭಾರತದ ಮೂಲನಿವಾಸಿ/ನಾಗ ಜನಾಂಗವು ವಿದೇಶಿ ಆರ್ಯ ಜನಾಂಗದ ದಬ್ಬಾಳಿಕೆ ವಿರುದ್ಧ ಹೋರಾಡಿ ಮೊದಲ ಬಾರಿಗೆ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಕ್ರವರ್ತಿ ಸಾಮ್ರಾಟ್ ಚಂದ್ರಗುಪ್ತ ಮೌರ್ಯರ ಸಮಾದಿಯು ಕರ್ನಾಟಕ ರಾಜ್ಯದಲ್ಲಿದ್ದು ಅಲ್ಲಿ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಿಸಲು 50 ಕೋಟಿ ಅನುದಾನವನ್ನು ಮಂಜೂರು ಮಾಡಬೇಕು.
  1. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಛೇರಿಯಾದ ಅಂಬೇಡ್ಕರ್ ಸ್ಪೂರ್ತಿ ಸೌಧ ಕಟ್ಟಡವನ್ನು ನೂತನವಾಗಿ ವಿಕಾಸಸೌಧದ ಆವರಣದಲ್ಲಿ ತುರ್ತಾಗಿ ನಿರ್ಮಿಸಬೇಕು.
  2. ರಾಜ್ಯಾದ್ಯಂತ ಮನೆ ರಹಿತ /ನಿವೇಶನ ರಹಿತ/ಭೂ ರಹಿತರಿಗೆ ಮಂಜೂರು ಮಾಡಬೇಕು.
  1. ರಾಜ್ಯದಲ್ಲಿ ಬೆಂಗಳೂರು ಮತ್ತು ಹಾಸನ ಸೇರಿದಂತೆ 10 ಊರುಗಳಿಗೆ ಡಾ.ಬಿ.ಆರ್. ಅಂಬೇಡ್ಕರವರು ಬೇಟಿ ನೀಡಿ ಭಾಷಣ ಮಾಡಿದ್ದು ಅಲ್ಲೆಲ್ಲ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಕೊಂಚ ಅನುದಾನ ಮತ್ತು ಸರ್ಕಾರಿ ಭೂಮಿ ಮಂಜೂರು ಮಾಡಿದ್ದು ಸಾಲದು. ಅಂತೆ ತಲಾ ಊರಿಗೆ ಹೆಚ್ಚುವರಿಯಾಗಿ 10 ಕೋಟಿ ಅನುದಾನ (ಒಟ್ಟಾರೆ 100 ಕೋಟಿ). ಹೆಚ್ಚುವರಿಯಾಗಿ 10 ಎಕರೆ ಸರ್ಕಾರಿ ಭೂಮಿ (ಒಟ್ಟಾರೆ 100 ಎಕರೆ), ಮಂಜೂರು ಮಾಡಬೇಕು.
  1. ಯು.ಜಿ.ಸಿ ಮತ್ತು ಭಾರತ ಸರ್ಕಾರದ ನೂತನ ನಿಯಮದಂತೆ ಏಕಕಾಲದಲ್ಲಿ ಎರಡು ಪದವಿಗಳ ವ್ಯಾಸಾಂಗಕ್ಕೆ ಎಲ್ಲರಿಗೂ ಅವಕಾಶ ನೀಡಿದ್ದು, ಶ್ರೀಮಂತರು 2ಡಿಗ್ರಿಗಳಿಗೂ ಶುಲ್ಕ ಪಾವತಿಸಿ ತಮ್ಮ Employbility ವೃದ್ಧಿಸಿಕೊಳ್ಳುತ್ತಿದಾರೆ. ಅಂತ ಬಡ ಪರಿಷಿಷ್ಟರಿಗೆ ಎರಡನೆಯ ಡಿಗ್ರಿ ಪಡೆಯಲು ರಾಜ್ಯ ಸರ್ಕಾರವು ಕಾಲೇಜು ಶುಲ್ಕ ಸಂಪೂರ್ಣವಾಗಿ ಮಂಜೂರು ಮಾಡಬೇಕು ಕೇಂದ್ರದ ಪಾಲನ್ನು ರಾಜ್ಯ ನಿರೀಕ್ಷಿಸಬಾರದು.
  1. ಸ.ಕ.ಇ ಹಾಸ್ಟೇಲ್ ವಿದ್ಯಾರ್ಥಿಗಳ ಮಾಸಿಕ ಬೋಜನ ವೆಚ್ಚವನ್ನು ಬೆಲೆಏರಿಕೆ ಮತ್ತು ಹಣದುಬ್ಬರ ಹಿನ್ನಲೆಯಲ್ಲಿ ರೂ 2500ಕ್ಕೆ ಏರಿಸಬೇಕು ಮತ್ತು ಬಡ ಪರಿಷಿಷ್ಟ ಕಾಲೇಜು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತಿತರ ಮೂಲಭೂತ ಸಲಕರಣೆ ಮಂಜೂರ ಮಾಡಬೇಕು.
  1. ಬಡತನದ ಪರಿಷಿಷ್ಟರಿಗೆ ಕಾಲೇಜು ಡ್ರಾಪ್‌ ಔಟ್ಲ ಸಂಖ್ಯೆ ಹೆಚ್ಚಾಗಿದೆ ಇವರನ್ನು ಪದವೀದಾರರಾಗಿ ಮಾಡಿ Employbility ಬಡ ಪರಿಷಿಷ್ಟರನ್ನು ಪದವೀದರರನ್ನಾಗಿಸಲು Special admission drive ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ಮತ್ತು ಕೆಂದ್ರದ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು ಜತೆ ಸ.ಕ ಇಲಾಖೆ ಮತ್ತು ಗ್ರಾಮಪಂಚಾಯತಗಳ ಜಂಟಿ. ಕಾಂತರಾಜ್ ಅಧ್ಯಕ್ಷತೆಯ ಆಯೋಗದ ಜಾತಿ ಸಮೀಕ್ಷೆ ವರದಿ ಸ್ವೀಕರಿಸಿ, ಅಂಗೀಕರಿಸಿ, ಅನುಷ್ಟಾನಗೊಳಿಸಬೇಕು.
  2. ಪರಿಶಿಷ್ಟರ ನಿರುದ್ಯೋಗ ಭತ್ಯ ಜಾರಿಯಾಗಿದ್ದು ಅದನ್ನು ದುಪ್ಪಟ್ಟು ಮಾಡಬೇಕು.ವಿಷಯ:ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಶಾಕ್ಸ್ ಸರಬರಾಜು ಮಾಡುವ ಕುರಿತು

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಸರ್ಕಾರದಿಂದ ವಿತರಿಸುವ ಶೂ ಮತ್ತು ಶಾಕ್ಸ್ ಗಳನ್ನು ನೇರವಾಗಿ ಡಾ. ಬಾಬು ಜಗಜೀವನರಾವ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಟ್ರೇನಿಂಗ ಸರ್ಟಿಫಿಕೇಟ್ ಪಡೆದ ಪಲಾನುಭವಿಗಳಿಗೆ ಶೂ ವಿತರಿಸಲು ಅವಕಾಶ ಕಲ್ಪಿಸಬೇಕು.

ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯಗಳು

  1. ಕೇಂದ್ರ ಸರ್ಕಾರವು ಸಂಗ್ರಹಿಸಿದ ತೆರಿಗೆ ಪೈಕಿ ರಾಜ್ಯಕ್ಕೆ ನ್ಯಾಯ ಬದ್ಧವಾಗಿ ಅನುದಾನ ನೀಡಿ.
  2. ಕೋಮುವಾದ, ಜಾತಿವಾದ ರದ್ದುಪಡಿಸಲೀ

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು, ಸದಸ್ಯರು, ದಲಿತ ಮುಖಂಡರು, ಹೋರಾಟಗಾರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X