ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಶಾಲೆ ಆವರಣದಲ್ಲಿರುವ ಮಾತೇ ಸಾವಿತ್ರಿಬಾಯಿ ಪುಲೆ ರಂಗವೇದಿಕೆಯಲ್ಲಿ ಕೊಳ್ಳೇಗಾಲ ತಾಲೂಕಿನ ಮುಸ್ಲಿಂ ಬಾಂಧವರು ಬುಧವಾರದಂದು (ಜ.31) 75ನೇ ಸಂವಿಧಾನ ದಿನಾಚರಣೆ ಮತ್ತು ಜನ ಜಾಗೃತಿ ಸಮಾವೇಶ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಂವಿಧಾನ ಓದು ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು ಸಂವಿಧಾನ ಪೀಠಿಕೆ ಹೇಳುವುದರ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಲಿತ ಮತ್ತು ಮೈನರಿಟಿ ಸೇನೆ ರಾಜ್ಯದ್ಯಕ್ಷ ಎ.ಜೆ. ಖಾನ್ ಮಾತನಾಡಿ, ಭಾರತ ದೇಶವನ್ನು ಕಟ್ಟಿ ಬೆಳೆಸಿದ ಮೂಲನಿವಾಸಿಗಳು ನಾವು. ದೇಶದ ಜಾತಿವಾದಿಗಳ ಸೇವಕರಲ್ಲ ನಾವುಗಳು ಇತಿಹಾಸವನ್ನು ನೋಡಿದಾಗ ಹಿಂದಿನ ಕಾಲದಿಂದಲೂ ಕೂಡ ಬುದ್ಧರ ಜೊತೆ ಬಾಬಾಸಾಹೇಬರ ಜೊತೆ ಸಾವಿತ್ರಿ ಬಾಯಿಪುಲೆ ಅವರ ಜೊತೆ ಮುಸಲ್ಮಾನ ಸಮುದಾಯದ ಜನರು ಜೊತೆ ಜೊತೆಯಾಗಿ ನಿಂತು ಕೆಲಸ ಮಾಡಿದ್ದಾರೆ. ಸಮ ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ.
ಹಿಂದೆ ನಮ್ಮ ಪೂರ್ವಜರು ದಲಿತರೇ ಆಗಿದ್ದೇವು ಕಾರಣಾಂತರಗಳಿಂದ ಸವರ್ಣಿಯರು ನೀಡುತ್ತಿದ್ದ ಕಿರುಕುಳ, ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ತಾಳಲಾರದೆ ಮುಸ್ಲಿಮರಾಗಿದ್ದಾರೆ ಮತ್ತು ಕ್ರೈಸ್ತರಾಗಿದ್ದಾರೆ. ಇತಿಹಾಸ ತೆಗೆದು ನೋಡಿದರೆ ನಾವೆಲ್ಲ ಮೂಲ ದಲಿತರು ಮುಸಲ್ಮಾನರು ಮತ್ತು ದಲಿತರ ರಕ್ತ ಒಂದೇ ಆಗಿದೆ. ಮಾತೇತ್ತಿದರೆ ಮನುವಾದಿಗಳು ಮುಸಲ್ಮಾನರು ಬೇರೆಯವರು ಹೊರಗಡೆಯವರು ಡಿಎನ್ಎ ಚೆಕ್ ಮಾಡಿ ಅಂತ ಹೇಳ್ತಾರೆ. ಆದರೆ, ಅವರ ಡಿಎನ್ಎ ಚೆಕ್ ಮಾಡಿದರೆ ವಿದೇಶದಿಂದ ದನ ಮೇಯಿಸಲು ಬಂದವರು ಯಾರು ಭಾರತದ ಮೂಲನಿವಾಸಿಗಳು ಯಾರು ಅಂತ ಗೊತ್ತಾಗುತ್ತದೆ ಎಂದರು.
ಜೊತೆಗೆ ಮೊನ್ನೆಯಷ್ಟೇ ನಡೆದ ಮಂದಿರ ಉದ್ಘಾಟನೆಯನ್ನು ಸರ್ಕಾರದ ಕಾರ್ಯಕ್ರಮದಂತೆ ಬಿಂಬಿಸಿ ಮಾಡಿದ್ದಾರೆ ಮತ್ತು ಜನವರಿ 22 ನಮ್ಮ ದೇಶಕ್ಕೆ ಬಾಬಾಸಾಹೇಬರು ಸಂವಿಧಾನವನ್ನು ಬರೆದು ನಿರ್ಣಯ ಮಾಡಿದ ದಿನದಂದೆ ಮಂದಿರ ಉದ್ಘಾಟನೆ ಮಾಡಿದ್ದಾರೆ ಎಂದರೆ, ಇದರ ಹಿಂದೆ ಎಂತಹ ಷಡ್ಯಂತ್ರ ಇರಬಹುದು ಎಂಬುದನ್ನು ನಾವು ಗಮನಿಸಬೇಕು. ಹಾಗಾಗಿ ನಾವೆಲ್ಲರೂ ಸಂವಿಧಾನದ ಸಂಪುಟಗಳನ್ನು ಓದಬೇಕು ಬಾಬಾಸಾಹೇಬರ ವಿಚಾರದಾರೆಗಳನ್ನು ತಿಳಿದುಕೊಂಡು ನಮ್ಮ ದೇಶದ ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾವುಗಳು ಅಲ್ಪ ಸಂಖ್ಯಾತರಾಗಿ ಉಳಿದರೆ ನಮ್ಮ ಮೇಲೆ ದೌರ್ಜನ್ಯ ದಬ್ಬಾಳಿಕೆ ತಪ್ಪಿದ್ದಲ್ಲ ನಾವು ಬಹು ಸಂಖ್ಯಾತರಾಗಲು ಸಾಧ್ಯ ಇದೆ ನಾವೆಲ್ಲ ದಲಿತರು ಮತ್ತು ಶೋಷಿತ ಸಮುದಾಯಗಳ ಜೊತೆ ಸೇರಿ ಒಗ್ಗಟ್ಟಾಗಿ ಸೇರಿ ನಮ್ಮ ದೇಶದ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳೋಣ ಮತ್ತು ನಾಲ್ವಡಿ ಕೃಷ್ಣ ರಾಜ ಒಡೆಯರ ಭಾವಚಿತ್ರ ಮುಸಲ್ಮಾನರು ತಮ್ಮ ಮನೆಯಲ್ಲಿ ಇತ್ತು ಗೌರವಿಸಬೇಕು ಅಂತಹ ವಿಶೇಷ ಕೊಡುಗೆಯನ್ನು ನಮ್ಮ ಸಮುದಾಯಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಹಿಂದೆ ಇದ್ದ ಸರ್ಕಾರ ಮುಸಲ್ಮಾನರ ಶೇ.4 ಮೀಸಲಾತಿಯನ್ನು ರದ್ದೂಗೋಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮುಸಲ್ಮಾನರು ಕಪ್ಪು ಪಟ್ಟಿ ಧರಿಸಿ ಮತದಾನ ಬಹಿಸ್ಕಾರ ಮಾಡಬೇಕು ದಲಿತರು ನಮಗೆ ಸಹಕಾರ ನೀಡುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೆ ಶೇ.14 ಮೀಸಲಾತಿ ನೀಡಬೇಕು. ಜಾತಿಜನಗಣತಿ ವರದಿ ನೀಡಲು ಸರ್ಕಾರಗಳು ಮೀನಾ ಮೇಷ ಹೇನಿಸುತ್ತಿವೆ ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ ಬಾಬಾಸಾಹೇಬರು ನೀಡಿರುವಂತಹ ನಮ್ಮ ಸಂವಿಧಾನ ಬದ್ದ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆದುಕೊಳ್ಳೋಣ.
ಟಿಪ್ಪು ಸುಲ್ತಾನ್,ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿ ಬಾಪುಲೆ,ಮಾನ್ಯವರ್ ಕಾಂನ್ಸಿರಾಮ್, ರವರ ಬಗ್ಗೆ ಬಹಳ ವೈಚಾರಿಕವಾಗಿ ವಿಚಾರ ಮಂಡನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಮ್ಜದ್ ಪಾಷ, ಸಮಿವುಲ್ಲಾ, ಆರೀಫ್ ವುಲ್ಲ, ಆಯಾಜ್ ಕನ್ನಡಿಗ, ಜುನೈದ್ ಉಲ್ಲಾ, ಮತಿನ್, ತವಾಬ್, ಹಜರತ್, ಸೊಹೇಬ್, ಜಕ್ಕವುಲ್ಲ, ಜೆ ನಿಂಗರಾಜು, ನಟರಾಜು, ಕಮಲ್, ಚಿಕ್ಕರಾಜು, ಸರ್ವಧರ್ಮದ ಸಾರ್ವಜನಿಕರು ಉಪಸ್ಥಿತರಿದ್ದರು.