ಚೆನ್ನಮ್ಮನ ಕೆಚ್ಚೆದೆಯ ಹೋರಾಟವನ್ನು ನೆನೆಯಲು ಫೆ.21 ರಂದು ಕಿತ್ತೂರಿನಲ್ಲಿ ಜಾಥಾ

Date:

Advertisements

ರಾಣಿ ಚೆನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು 1824ರಲ್ಲಿ ಮೊಳಗಿಸಿ ಇಂದಿಗೆ ಎರಡು ನೂರು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ದೇಶಾದ್ಯಂತ ರಾಣಿ ಚೆನ್ನಮ್ಮ ಅವರ ಪ್ರತಿರೋಧದ ವರ್ಷಾಚರಣೆಯನ್ನು ಮಾಡಲಿದ್ದು, ಕರ್ನಾಟಕದ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಕೆಚ್ಚೆದೆಯ ಹೋರಾಟವನ್ನು ನೆನೆಯಲು ಮತ್ತು ಸ್ಪೂರ್ತಿ ಪಡೆಯಲು ಫೆಬ್ರುವರಿ 21ರಂದು ಕಿತ್ತೂರಿನಲ್ಲಿ ಜಾಥಾ ನಡೆಯಲಿದೆ.

ಮಹಿಳಾ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮ ಸಮಾಜಕ್ಕಾಗಿ ಹೋರಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳು ಸೇರಿ ಈ ಕಾರ್ಯಕ್ರಮ ನಡೆಸಲು ಒಟ್ಟುಗೂಡಿದ್ದಾರೆ.

ನಮ್ಮ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಸಂರಕ್ಷಿಸುವುದಕ್ಕಾಗಿ ಮತ್ತು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದಕ್ಕಾಗಿ ಭಾರತದ ಎಲ್ಲ ಮೂಲೆಗಳಿಂದ ಮಹಿಳೆಯರು ಈ ಜಾಥಾದಲ್ಲಿ ಪಾಲ್ಗೋಳ್ಳಲು ಕಿತ್ತೂರಿಗೆ ಬರುತ್ತಿದ್ದಾರೆ. ‘ನಾನೂ ರಾಣಿ ಚೆನ್ನಮ್ಮ ರಾಷ್ಟ್ರೀಯ ಆಂದೋಲನಕ್ಕೆ‘ ಫೆ.21ರಂದು ಕಿತ್ತೂರಿನಲ್ಲಿ ಬೆಳಿಗ್ಗೆ 9 ಗಂಟೆಗೆ ಚಾಲನೆ ಸಿಗಲಿದೆ. ಈ ವೇಳೆ, ಇಡೀ ಭಾರತದ ಮಹಿಳೆಯರು “ಕಿತ್ತೂರು ಘೋಷಣೆಯನ್ನು” ಮೊಳಗಿಸಿ ಬಿಡುಗಡೆ ಮಾಡಿ ಸ್ವೀಕರಿಸುತ್ತಾರೆ.

Advertisements

ಕಿತ್ತೂರು ರಾಣಿ ಚೆನ್ನಮ್ಮಳ ಧೀರೋದ್ಧತ ಇತಿಹಾಸ

ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಸಿಡಿದೆದ್ದು ಪ್ರತಿರೋಧ ತೋರಿದ ಕಿತ್ತೂರು ರಾಣಿ ಚೆನ್ನಮ್ಮ 1778 ಅಕ್ಟೋಬರ್ 23 ರಂದು ಬೆಳಗಾವಿ ಸಮೀಪದ ಪುಟ್ಟಹಳ್ಳಿ ಕಾಕತಿಯಲ್ಲಿ ಧೂಳಪ್ಪಗೌಡರು-ಪದ್ಮಾವತಿ ದಂಪತಿಗಳಿಗೆ ಜನಿಸಿದರು. ಈಕೆಯ ತಂದೆ ಧೂಳಪ್ಪಗೌಡರು, ಚಿಕ್ಕವಯಸ್ಸಿನಲ್ಲೇ ಚೆನ್ನಮ್ಮನಿಗೆ ಕತ್ತಿವರಸೆ, ಕುದುರೆ ಸವಾರಿ ಮತ್ತು ಬಿಲ್ಲುವಿದ್ಯೆಗಳನ್ನು ಕಲಿಸಿದರು. ಕಿತ್ತೂರಿನ ರಾಜಮನೆತನದ ದೇಸಾಯಿ ಮಲ್ಲಸರ್ಜರೊಂದಿಗೆ 15ನೆಯ ವಯಸ್ಸಿನಲ್ಲಿ ವಿವಾಹ ನೆರವೇರಿಸಿದರು. ಈ ಮೊದಲೆ ಮಲ್ಲಸರ್ಜ ದೇಸಾಯಿ ಅವರಿಗೆ ರುದ್ರಮ್ಮ ಎಂಬಾಕೆಯೊಂದಿಗೆ ವಿವಾಹವಾಗಿ ಶಿವಲಿಂಗರುದ್ರಸರ್ಜ ಎಂಬ ಒಬ್ಬ ಮಗನಿದ್ದನು.

ರಾಜ ಮಲ್ಲಸರ್ಜ ದೇಸಾಯಿ ಅವರು 1816 ರಲ್ಲಿ ಮರಣಹೊಂದಿದರು. ಚೆನ್ನಮ್ಮನ ಮಗ ಅತೀ ಚಿಕ್‌ಕ ವಯಸ್ಸಿನಲ್ಲೇ 1824ರ ಮೊದಲ ಯುದ್ಧದಲ್ಲಿ ಸಾವಿಗೀಡಾದನು. ಹಿರಿಯ ಹೆಂಡತಿಯ ಮಗ ಶಿವಲಿಂಗರುದ್ರಸರ್ಜರಿಗೆ ಪಟ್ಟಕಟ್ಟಿದರು. ಆದರೆ ಅನಾರೋಗ್ಯದ ಕಾರಣ ಮಕ್ಕಳಿರದ ಆತ ಬಲುಬೇಗನೆ ಮರಣ ಹೊಂದಿದರು. ಅದಕ್ಕೂ ಮೊದಲೇ ಮುಂದಾಲೋಚನೆಯಿಂದ ಚೆನ್ನಮ್ಮ ಆತನಿಗೆ ಶಿವಲಿಂಗಸರ್ಜ ಎಂಬುವವರನ್ನು ದತ್ತು ಪಡೆಯುವಂತೆ ನೋಡಿಕೊಂಡಿದ್ದರು.

ಶಿವಲಿಂಗರುದ್ರಸರ್ಜ ಸಾವಿಗೀಡಾದ ಸಂದರ್ಭವನ್ನು ಕಾಯುತ್ತಿದ್ದ ಬ್ರಿಟಿಷರು ಕಿತ್ತೂರನ್ನು ಕಬಳಿಸಲು ಹೊಂಚು ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕಿತ್ತೂರನ್ನು ಬ್ರಿಟಿಷರಿಂದ ರಕ್ಷಿಸುವ ಹೊಣೆಗಾರಿಕೆಯನ್ನು ರಾಣಿ ಚೆನ್ನಮ್ಮ ತೆಗೆದುಕೊಳ ಬೇಕಾಯಿತು. ಚೆನ್ನಮ್ಮ ದತ್ತು ಮೊಮ್ಮೊಗ ಶಿವಲಿಂಗಸರ್ಜನನ್ನು ಪಟ್ಟದಲ್ಲಿ ಕೂರಿಸಿದಾಗ ಹದ್ದಿನಂತೆ ಕಾಯುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ ಕಿತ್ತೂರನ್ನು ಕಬಳಿಸಲು ಧಾರವಾಡದಿಂದ ಶರಣಾಗುವಂತೆ ರಾಣಿ ಚೆನ್ನಮ್ಮನಿಗೆ ಮಿ.ಡಾಲ್ ಹೌಸಿ ಆರಂಭಿಸಿದ ದತ್ತೆಕ ನಿಷೇಧ (Doctrine of Lapse) ಪ್ರಕಾರ ಆದೇಶ ಕಳುಹಿಸಿತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶ್ರೀರಾಮನ ಕಟೌಟ್ ಬಿದ್ದು ಪಾದಚಾರಿಗಳಿಗೆ ಗಾಯ: ಶಾಸಕ ರಘು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು

ಇದನ್ನು ಸಹಿಸದ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಸೈನ್ಯವನ್ನು ಸಜ್ಜು ಮಾಡಿ ಬ್ರಿಟಿಷರ ಮೇಲೆ 1824 ರಲ್ಲಿ ಯುದ್ಧ ಮಾಡಿದಳು. ಯುದ್ಧದಲ್ಲಿ ಥ್ಯಾಕರೆಯನ್ನು ಕೊಂದು ಕಿತ್ತೂರು ಜಯಸಾಧಿಸಿತು. ರಾಣಿ ಚೆನ್ನಮ್ಮ ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಭಾರತದಲ್ಲಿ ಹೋರಾಡಿದ ಮೊಟ್ಟಮೊದಲ ಮಹಿಳಾ ಹೋರಾಟಗಾರರ ಪಟ್ಟಿಯಲ್ಲಿ ಬರುತ್ತಾಳೆ. ಕರ್ನಾಟಕದ ಜನಪದರಲ್ಲಿ ಅವರಿಗೆ ಸದಾ ಗೌರವ, ಅಭಿಮಾನದ ಸ್ಥಾನವಿದೆ. ವೀರರಾಣಿ ಎಂದೇ ಎಲ್ಲರೂ ಆಕೆಯನ್ನು ನೆನೆಯುತ್ತಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ರಾಣಿ ಚೆನ್ನಮ್ಮನಿಗೆ ಒಂದು ಸ್ಥಿರವಾದ ಸ್ಥಾನವಿದೆ. ನಿರ್ಭಯ ವೀರಾಗ್ರಣಿಯಾದ ಚೆನ್ನಮ್ಮ ಇಂದಿಗೂ ಸ್ವಾತಂತ್ರ್ಯಪ್ರಿಯಳಾಗಿ ಬ್ರಿಟಿಷರಿಗೆ ನೀಡಿದ ಪ್ರತಿರೋಧದ, ಆತ್ಮಗೌರವದ ಹೆಗ್ಗುರುತಾಗಿ ನಿಲ್ಲುತ್ತಾಳೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

Download Eedina App Android / iOS

X