ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಸೌಭಾಗ್ಯಮ್ಮ ಆಯ್ಕೆಯಾಗಿದ್ದಾರೆ.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಘಟಕದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಸೌಭಾಗ್ಯಮ್ಮ, ಉಪಾಧ್ಯಕ್ಷರಾಗಿ ಸಾಕಸಂದ್ರ ಶಂಕರಮ್ಮ, ಹಾಗಲವಾಡಿ ಲತಾಮಣಿ, ಪುರ ಮಂಜುಳಾ ಹಾಗೂ ತೊಗರಿಗುಂಟೆ ಲಲಿತಮ್ಮ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮಾರಶೆಟ್ಟಿಹಳ್ಳಿ ರಾಧಾ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಮಂಚಲದೊರೆ ನರಸಮ್ಮ ಇವರುಗಳನ್ನು ಆಯ್ಕೆ ಮಾಡಿ ಅಧಿಕೃತ ಘೋಷಣೆ ಮಾಡಲಾಗಿದೆ.
ಮಹರ್ಷಿ ವಾಲ್ಮೀಕಿ ನಾಯಕ ಮಹಿಳಾ ಸಂಘದ ನೂತನ ಅಧ್ಯಕ್ಷರಾದ ಸೌಭಾಗ್ಯಮ್ಮ ಈ ವೇಳೆ ಮಾತನಾಡಿ, ಕಳೆದ ಹತ್ತಾರು ವರ್ಷದಿಂದ ಸಮಾಜದ ಸಂಘಟನೆ ಕೆಲಸ ಮಾಡಿದ್ದೇನೆ. ಜವಾಬ್ದಾರಿ ಹೆಚ್ಚಾದ ಈ ಸಮಯದಲ್ಲಿ ನಮ್ಮದು ಹಿಂದುಳಿದ ಸಮುದಾಯವಾಗಿದೆ, ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಿ ತಾಲೂಕಿನ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ಕೆಲಸ ಮಹಿಳಾ ಘಟಕ ಮಾಡಲಿದೆ. ಈ ನಿಟ್ಟಿನಲ್ಲಿ ಪದಾಧಿಕಾರಿಗಳ ಆಯ್ಕೆಯಾಗಿ ಹೋಬಳಿವಾರು ನಿರ್ದೇಶಕರ ಆಯ್ಕೆ ಸದ್ಯದಲ್ಲೇ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಎ.ನರಸಿಂಹಮೂರ್ತಿ, ಜಿ.ಎನ್.ಅಡವೀಶ್, ರಾಮಚಂದ್ರಪ್ಪ, ಡಿ.ದೇವರಾಜ್, ಹೇರೂರು ನಾಗರಾಜ್, ರಾಘವೇಂದ್ರ, ಜಿ.ಎಲ್.ರಂಗನಾಥ್, ಲಕ್ಷ್ಮಣ್ಣಪ್ಪ ಇತರರು ಇದ್ದರು.