ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದೆ. ಬಡವರು, ದೀನದಲಿತ, ರೈತರು, ಜನಸಾಮಾನ್ಯರಿಗೆ ಬಜೆಟ್ ವಿರುದ್ಧವಾಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದ ಬಜೆಟ್ ಇದು ಎಂದು ಕೆಪಿಸಿಸಿ ವೈದ್ಯರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರವಿಕುಮಾರ ಬಿರಾದಾರ ಹೇಳಿದ್ದಾರೆ.
ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರವು ಅವರು, “ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ನೀರಾವರಿ ಯೋಜನೆಗಳಾಗಲಿ, ಇನ್ನಿತರ ಯೋಜನೆಗಳನ್ನಾಗಲಿ ನೀಡಿಲ್ಲ. ರೈತರ ಗೊಬ್ಬರ ಮೇಲಿನ ಸಬ್ಸಿಡಿ ಕಡಿತಗೊಳಿಸಿ ಗೊಬ್ಬರ ಬೆಲೆ ಏರಿಕೆ ಮಾಡಿ ರೈತನ ಬೆನ್ನೆಲುಬು ಮುರಿದಿದ್ದಾರೆ. ಬಂಡವಾಳ ಶಾಹಿಗಳ ತೆರಿಗೆ ಕಡಿಮೆ ಮಾಡಿ ಬಡ ಜನರ ತೆರಿಗೆ ಹೆಚ್ಚಿಗೆ ಮಾಡಿದ್ದಾರೆ ಅಲ್ಲದೇ ಆದಾಯ ತೆರಿಗೆಯಲ್ಲೂ ಯಾವುದೇ ಬದಲಾವಣೆ ಮಾಡದೇ ಇರುವದು ನೌಕರರಿಗೆ ನಿರಾಸೆ ಮೂಡಿಸಿದೆ” ಎಂದು ಹೇಳಿದ್ದಾರೆ.
“ಎಲ್ಲ ಯೋಜನೆಗಳನ್ನು ಉತ್ತರ ಭಾರತದವರಿಗೆ ನೀಡಿ, ಅತೀ ಹೆಚ್ಚು ತೆರಿಗೆ ನೀಡುವ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಳಿಕೆ ಮಾಡುವತ್ತ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ” ಎಂದು ಕಿರಿಕಾರಿದ್ದಾರೆ.
“ದೇಶದ ಸಾಲವನ್ನು 18 ಲಕ್ಷ ಹೆಚ್ಚುವರಿ ಮಾಡಿ,2014 ರಲ್ಲಿ 54 ಲಕ್ಷ ಕೊಟ್ಟಿಯಿದ್ದ ಸಾಲವನ್ನು ಸುಮಾರು 163 ಲಕ್ಷ ಕೋಟಿಗೆ ಏರಿಸಿದ್ದಾರೆ. ಮೋದಿ ತಮ್ಮ ಅಧಿಕಾರಾವಾಧಿಯ 9 ವರ್ಷಗಳಲ್ಲಿ ಸುಮಾರು 118ಲಕ್ಷ ಕೋಟಿ ಹೆಚ್ಚುವರಿವಿಪರೀತ ಸಾಲ ಮಾಡಿದ್ದಾರೆ” ಎಂದು ಹೇಳಿದರು.