ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ದಲಿತ ಸೇನೆ ತಾಲೂಕು ದಂಡಾಧಿಕಾರಿಗಳ ಮುಖಾಂತರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ, ಎಮ್.ಎ. ಸಿಂದಗಿಕರ್, ರಾಯಚೂರ ಜಿಲ್ಲೆಯ ಸಿರವಾರ ಪಟ್ಟಣದ ಮಟನ್ ಮಾರ್ಕೆಟನಲ್ಲಿರುವ ಸ್ವತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ (ಸರ್ಕಲ್) ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ.
ಸ್ವತಂತ್ರ ಹೋರಾಟಗಾರ ಹಜರತ್ ಟಿಪ್ಪು ಸುಲ್ತಾನ ರವರ (ಸರ್ಕಲ್)ಭಾವಚಿತ್ರಕ್ಕೆ ವಿಕೃತ ಮನಸ್ಸಿನ ಕೆಲವು ಕಿಡಿಗೇಡಿಗಳು ಕೀಳು ಮಟ್ಟದ ರೀತಿಯಲ್ಲಿ ಅವಮಾನ ಮಾಡಿರುವುದು ಖಂಡನಿಯ. ಈ ಕೃತ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಲೇ ಇರುವದು ನಾಚಿಕೆಗೇಡಿನ ಸಂಗತಿ.
ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೋಮು ಗಲಭೆ ಮಾಡಲು ಪ್ರಚೋದನೆ ಮಾಡಿ ಸಮಾಜದ ಸಾಮರಸ್ಯವನ್ನು ಹಾಳು ಮಾಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧನ ಮಾಡಿ ರಾಜ್ಯದಿಂದ ಗಡಿಪಾರು ಮಾಡಬೇಕು. ಇದರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಎಂದು ಆಗ್ರಹಿಸುತ್ತಿದ್ದರು.
ಈ ಪ್ರಕರಣವನ್ನು ಡಿಲೇ ಮಾಡಿದರೆ ದಲಿತ ಸೇನೆಯ ರಾಜ್ಯ ವ್ಯಾಪ್ತಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆಯೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದ.ಸೇ. ಜಿಲ್ಲಾ ಅಧ್ಯಕ್ಷ ಖಾಜು ಹೊಸಮನಿ, ದ. ಸೇ. ತಾಲೂಕು ಅಧ್ಯಕ್ಷ ಬಾಲಕೃಷ್ಣ ಚಲವಾದಿ, ದ.ಸೇ. ನಗರ ಅಧ್ಯಕ್ಷ ದಸ್ತಗೀರ ಆಳಂದ, ದ.ಸೇ. ಯುವ ಮುಖಂಡ ಶಾಹುಸೇನಿ ಬುಕ್ಕದ ಹಾಗೂ ಟೀಪ್ಪು ಸುಲ್ತಾನ್ ಕಮಿಟಿ ತಾಲೂಕು ಅಧ್ಯಕ್ಷ ಮೆಹಿಬೂಬ್ ಆಳಂದ್, ಜಾವೀದ್ ಕರ್ಜಗಿ, ಅಲ್ಲಾಭಷ ಆಳಂದ್, ಟೀಪು ಬೆನ್ನಟ್ಟಿ, ಸಲೀಮ್ ಬಾಗವಾನ, ಅಸ್ಪಾಕ್ ಮಕಂದಾರ್, ಜಾಫರ್ ಇನಾಂದಾರ್, ದಸ್ತಗಿರ್ ಆಳಂದ್, ಇಬ್ರಾಹಿಂ ತಾಂಬೊಳಿ, ಸಲೀಮ್ ಆಳಂದ್, ಮುನ್ನಾ ಬೈರೂಡಗಿ, ಪೈಗಂಬರ್ ಕಲಬುರ್ಗಿ, ಮುಂತಾದವರು ಉಪಸ್ಥಿತರಿದ್ದರು.