ತುಮಕೂರು ಜಿಲ್ಲೆಯಾದ್ಯಂತ ಶುಕ್ರವಾರ ಮಹಾತ್ಮ ಗಾಂಧಿ ಮನರೇಗಾ ದಿನಾಚರಣೆಯನ್ನು ಕಾಮಗಾರಿ ಸ್ಥಳಗಳಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಿದರು.
ಕೂಲಿ ಕಾರ್ಮಿಕರ ಜೊತೆ ತುಮಕೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ಮನರೇಗಾ ಸಿಬ್ಬಂದಿ ಕೇಕ್ ಕತ್ತರಿಸುವುದರ ಮೂಲಕ ಸಂಭ್ರಮಿಸಿದರು.
ಕೂಲಿ ಕಾರ್ಮಿಕರಿಗೆ ಸನ್ಮಾನ: ಮನರೇಗಾ ಯೋಜಯಡಿ 100 ದಿನಗಳು ಪೂರೈಸಿದ ಕೂಲಿಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯ ಸ್ಥಳದಲ್ಲಿ ಮನರೇಗಾ ದಿನವನ್ನು ಆಚರಿಸಲಾಗಿದ್ದು, ಕೆಲವು ಕಡೆ ಕೂಲಿ ಕಾರ್ಮಿಕರಿಗೆ ಟೀ ಶರ್ಟ್ ಮತ್ತು ಟೋಪಿಗಳನ್ನು ವಿತರಿಸಿದರು.
ಸಸಿ ನೆಡುವ ಕಾರ್ಯಕ್ರಮ: ಗುಬ್ಬಿ, ತುಮಕೂರು, ಕೊರಟಗೆರೆ, ಶಿರಾ ತಾಲೂಕು ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮನರೇಗಾ ದಿನದ ಅಂಗವಾಗಿ ಸಸಿ ನೆಟ್ಟು ಸಂಭ್ರಮಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಡಗು | ಬಾಳುಗೋಡಿನ ಜನರ ಗೋಳಿಗೆ ಸ್ಪಂದಿಸಿದ ಮಾನವ ಹಕ್ಕುಗಳ ಆಯೋಗ; ದಶಕಗಳ ನಂತರ ಕುಡಿಯುವ ನೀರು
ತುಮಕೂರು ಜಿಲ್ಲಾ ಪಂಚಾಯತಿ ಸಿಇಒ ಪ್ರಭು ಜಿ ಮಾತನಾಡಿ, “ಮನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು, ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರುವರಿ 2ರಂದು ಮನರೇಗಾ ದಿನವನ್ನು ಆಚರಿಸಲಾಗುತ್ತದೆ. ಯೋಜನೆಯಡಿ ಒಂದು ಆರ್ಥಿಕ ವರ್ಷದಲ್ಲಿ ಅಕುಶಲ ಕೂಲಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ನೀಡಿಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಜಮೀನುಗಳಲ್ಲಿ ನೀವೇ ಕೆಲಸ ಮಾಡುವುದರಿಂದ ಮನರೇಗಾ ಯೋಜನೆಯಡಿ ಪ್ರತಿ ದಿನಕ್ಕೆ ₹316 ಕೂಲಿ ದೊರೆಯುತ್ತದೆ. ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ಕೆಲಸ ಮಾಡಿಕೊಂಡು ಬದುಕುತ್ತಿವೆ” ಎಂದರು.