ಶಿವಮೊಗ್ಗ ಜಿಲ್ಲೆ ಎಸಿ ಸತ್ಯನಾರಾಯಣ ಅವರು ತಮ್ಮ ತಂಡದೊಂದಿಗೆ ಜಿಲ್ಲೆಯ ಮಲವಗೊಪ್ಪ ಗ್ರಾಮಕ್ಕೆ ಸರ್ವೆ ಕಾರ್ಯ ನಡೆಸಲು ಬಂದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನೋಟಿಸ್ ನೀಡಿಲ್ಲ, ಪ್ರಕಟಣೆ ಮಾಡಿಲ್ಲ ಆಟೋ ಅನೌನ್ಸ್ ಮಾಡದೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂದಿರುವುದು ತರವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಸಂಬಂಧ ಮಲವಗೊಪ್ಪ ಸರ್ವೆ ನಂಬರ್ 50 52 73 ಹಾಗೂ ಇತರೆ ಸರ್ವೆ ಕಾರ್ಯ ಇಟ್ಟಿದ್ದು, ಈ ನಂಬರ್‌ಗಳಲ್ಲಿ ಯಾರ್ಯಾರು ಒತ್ತುವರಿ ಮಾಡಿದ್ದಾರೆ. ಭೂಮಿಯನ್ನು ಹೆಚ್ಚಿಸಿಕೊಂಡಿರುವ ಮಾಹಿತಿ ಪಡೆಯುವ ಸಲುವಾಗಿ ಸರ್ವೆ ಕಾರ್ಯ ಮಾಡಿದ್ದೂ, ಈ ಸಂಬಂಧ ಸಾರ್ವಜನಿಕರು ಪ್ರಕಟಣೆ ಮಾಡಿ ಅಂತ ತಿಳಿಸಿದ್ದೆವು. ಆದರೆ ಅಲ್ಲಿ ನಮಗೆ ಮಾಹಿತಿ ಇಲ್ಲದ ಕಾರಣ ಪ್ರತಿಯೊಬ್ಬರಿಗೂ ಪ್ರತ್ಯೇಕ ನೋಟಿಸ್ ಕೊಡುವುದಕ್ಕೆ ಆಗಿಲ್ಲ. ಸಾರ್ವಜನಿಕರು ಏನು ತಿಳಿಸಿದ್ದಾರೋ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿಯವರು ಹೇಗೆ ಮಾರ್ಗದರ್ಶನ ನೀಡುತ್ತಾರೋ ಹಾಗೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹಾಗೂ ನ್ಯಾಯಾಲಯದ ಆದೇಶದವನ್ನು ಪಾಲನೆ ಮಾಡಬೇಕಾಗುತ್ತೆ. ಹಾಗೆ ಶೀಘ್ರದಲ್ಲಿ ಪುನಃ ಸರ್ವೆ ಮಾಡಿ ಸಾರ್ವಜನಿಕರೆಲ್ಲರಿಗೂ ಏನು ಅನುಕೂಲ ಮಾಡಿಕೊಡುವುದಕ್ಕೆ ಏನು ಅನುಕೂಲ ಇದೆಯೋ ಅದನ್ನು ಮಾಡಿಕೊಡುತ್ತೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಎಸಿ ಸತ್ಯನಾರಾಯಣ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸದಾಶಿವಪುರ, ಬೆಳಕಲು, ಮಲವಗೊಪ್ಪ, ಹರಿಗೆ ಮತ್ತು ನಿದಿಗೆ ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದೂ ನ್ಯಾಯಾಲಯ ಇಂತಿಚ್ಟೇ ಸರ್ವೆ ಮಾಡುವಂತೆ ಆದೇಶ ತಿಳಿಸಿದ್ದು, ಆ ಪ್ರಕಾರ ಮಾಡುತ್ತಿದ್ದು ಪಿಟಿಷನ್ ಪ್ರಕಾರ ಯಾರ್ಯಾರ್ ಮಾಡಲು ತಿಳಿಸಿದ್ದಾರೆ. ಆ ಪ್ರಕಾರ ಮಾಡಲು ಪ್ರಯತ್ನ ನಡೆಯುತ್ತಿದೆ. ಆದರೆ ಸಾರ್ವಜನಿಕರು ಹೇಳಿರುವ ಪ್ರಕಾರ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮಾರ್ಗದರ್ಶನ ರೀತಿ ಮಾಡುತ್ತೇವೆ. ಇದು ನ್ಯಾಯಾಲಯದ ಆದೇಶವಾಗಿರುವುದರಿಂದ ಅದರಂತೆ ಮಾಡುತ್ತಿದ್ದೇವೆ. ಸದ್ಯಕ್ಕೆ ಸರ್ವೆ ನಿಲ್ಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಮಲವಗೊಪ್ಪ ಗ್ರಾಮಸ್ಥರು ಈ.ದಿನ.ಕಾಮ್‌ಗೆ ಮಾತನಾಡಿ, “ನಾವು 40 ರಿಂದ 50 ವರ್ಷಕ್ಕೂ ಅಧಿಕ ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದು, ಮನೆ ಕಂದಾಯ ನೀರಿನ ಕಂದಾಯ ಸರ್ಕಾರದ ಎಲ್ಲವನ್ನೂ ಮಾಡಿಕೊಂಡು ಬಂದಿದ್ದೇವೆ. ಈಗ ಇಷ್ಟು ವರ್ಷ ಇಲ್ಲದೆ ಏಕಾಏಕಿ ಹೀಗೆ ಬಂದು ಸರ್ವೆ ಮಾಡಿ ಅತಿಕ್ರಮ ಮಾಡಿಕೊಂಡಿರುವವರು ತೆರವು ಮಾಡಬೇಕೆನ್ನುವುದು ಎಷ್ಟು ಸರಿ?. ಹೀಗೆ ಏನಾದರು ಮಾಡಿದ್ದೆ ಆದರೆ ನಾವು ವಿಷ ಕುಡಿದೋ ಇಲ್ಲ, ಸಾಯುವ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಅಧಿಕಾರಿ, ಸಿಬ್ಬಂದಿಗಳಿಗೆ ದೀರ್ಘಾವಧಿ ರಜೆಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ಮಂಜೂರಾತಿ ಕಡ್ಡಾಯ
“ಶುಗರ್ ಫ್ಯಾಕ್ಟರಿ ಜಾಗ ಇದು ಒತ್ತುವರಿಯಾಗಿದೆ ಎಂದು ಈಗ ಹೇಳುತ್ತಿದ್ದಾರೆ. ಅದರೆ, ನಾವು ಶುಗರ್ ಫ್ಯಾಕ್ಟರಿ ಆಗುವ ಮುಂಚೆಯಿಂದಲೂ ವಾಸ ಇದ್ದೇವೆ. ಹೀಗಾಗಿ ಇದು ರಾಜಕೀಯ ಪ್ರೇರಿತವಾಗಿದೆ. ಈ ನಡೆಯನ್ನು ಕೈ ಬಿಡಬೇಕು. ಇಲ್ಲವಾದರೆ ನಾವು ಹೋರಾಟ ನಡೆಸಬೇಕಾಗಿದೆ” ಎಂದು ಎಚ್ಚರಿಕೆ ನೀಡಿದರು.
ಸದ್ಯಕ್ಕೆ ಅಧಿಕಾರಿಗಳು ಸರ್ವೆ ಕಾರ್ಯವನ್ನು ನಿಲ್ಲಿಸಿದ್ದು, ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಸರ್ವೆ ಮಾಡುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.