ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?

Date:

Advertisements
ತೆರಿಗೆ ಹಂಚಿಕೆ ಮತ್ತು ಅನುದಾನ ಬಿಡುಗಡೆಗೆ ಸಂಬಂಧಿಸಿಂತೆ ಕೇಂದ್ರ ಸರ್ಕಾರದ ಹಣಕಾಸು ಸಚಿವರಿಂದ ಇಲ್ಲಿಯವರೆಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಕ್ಕಿಲ್ಲ. ಅನುದಾನವೂ ಹರಿದು ಬಂದಿಲ್ಲ. ಬದಲಿಗೆ ಬಿಜೆಪಿ ಪ್ರತ್ಯೇಕತೆಯ ಕೂಗು ಎಬ್ಬಿಸಿ, ತಮಾಷೆ ನೋಡುತ್ತಿದೆ. ಅಸಲಿ ವಿಷಯವನ್ನು ಮರೆಮಾಚುತ್ತಿದೆ. ಕೇಂದ್ರದ ಈ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?

‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಇದೇ ಫೆ. 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಸಚಿವ ಸಂಪುಟವನ್ನು ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೂರುವುದು ಎಂದರೇನು? ಪ್ರಧಾನಿ ಮೋದಿಯವರ ವಿರುದ್ಧ ಟೀಕೆಗಿಳಿಯುವುದು ಎಷ್ಟು ಸರಿ?

ಬಿಜೆಪಿ ನಾಯಕರು ಹೀಗೂ ಯೋಚಿಸಬಹುದು. ಅದನ್ನು ಗೋದಿ ಮೀಡಿಯಾ ತನಗೆ ಬೇಕಾದಂತೆ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ನಡೆಯನ್ನು ದೇಶ ದ್ರೋಹದ ನಡೆಯನ್ನಾಗಿ ಬಿಂಬಿಸಲೂಬಹುದು.

Advertisements

ಇದು ಕೊಂಚ ಅತಿಯಾಯಿತು ಎನ್ನಿಸಬಹುದು. ಆದರೆ, ದೇಶದಲ್ಲಿ ನಡೆಯುತ್ತಿರುವ ಸದ್ಯದ ಸ್ಥಿತಿ ಇದಕ್ಕಿಂತಲೂ ಘನ ಘೋರವಾಗಿದೆ. ದೇಶದಲ್ಲಿರುವುದು ಪ್ರಜಾಪ್ರಭುತ್ವವೇ ಎನ್ನುವಷ್ಟು ಅನುಮಾನ ಹುಟ್ಟಿಸಿದೆ. ಪ್ರಜಾಪ್ರಭತ್ವದಲ್ಲಿ ನೆರಳಲ್ಲಿ ಸರ್ವಾಧಿಕಾರ ಗರಿಗೆದರಿ ನಿಂತಿದೆ.

ಕೇಂದ್ರ ಬಜೆಟ್ ಕುರಿತು ಸಂಸದ ಡಿ.ಕೆ ಸುರೇಶ್, ಆ ತಕ್ಷಣಕ್ಕೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಪ್ರತ್ಯೇಕತೆಯ ಮಾತುಗಳನ್ನು ಆಡಿರಬಹುದು. ಆ ಮಾತುಗಳನ್ನು, ಸುರೇಶ್ ಅಲ್ಲ, ಯಾರು ಆಡಿದರೂ ಅದನ್ನು ಖಂಡಿಸಬೇಕು. ಅದರಲ್ಲಿ ಅನುಮಾನವಿಲ್ಲ. ಆದರೆ, ಆ ಮಾತಿನ ಹಿಂದಿನ ನೋವನ್ನು, ಅನ್ಯಾಯವನ್ನು, ಉದ್ದೇಶವನ್ನು ಅರ್ಥ ಮಾಡಿಕೊಳ್ಳದೆ ಹೋದರೆ, ಒಕ್ಕೂಟ ವ್ಯವಸ್ಥೆಗೆ ಬೆಲೆ ಇದೆಯೇ? ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿರುವ ಪ್ರಶ್ನಿಸುವ, ಪ್ರತಿಭಟಿಸುವ ಅವಕಾಶವನ್ನು ದಮನ ಮಾಡಿದಂತಲ್ಲವೇ?

ಡಿಕೆ ಸುರೇಶ್ ಅವರ ಮಾತಿನ ಹಿಂದಿನ ಸತ್ಯಸಂಗತಿಯನ್ನು ಮರೆಮಾಚುವ ಬಿಜೆಪಿ ನಾಯಕರು ಮತ್ತು ಗೋದಿ ಮೀಡಿಯಾದ ಪತ್ರಕರ್ತರು, ಪ್ರತ್ಯೇಕತೆಯ ಮಾತನ್ನು ಮುನ್ನೆಲೆಗೆ ತಂದು, ಅವರನ್ನು ನೇಣುಗಂಬಕ್ಕೇರಿಸಿದ್ದಾಗಿದೆ. ಸದನದ ಹೊರಗೆ ಮಾತನಾಡಿದ್ದನ್ನು, ಸದನದೊಳಗೆ ಚರ್ಚಿಸುವ ನಾಟಕವೂ ನಡೆದುಹೋಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ, ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅಮಾನತು ಮಾಡುವ, ಗಡಿಪಾರು ಮಾಡುವ ಮಟ್ಟಕ್ಕೂ ಹೋಗಿದೆ. ಅಷ್ಟೇ ಅಲ್ಲ, ಅವರನ್ನು ಅವಾಚ್ಯವಾಗಿ ನಿಂದಿಸಿದ್ದೂ ಆಗಿದೆ.

ಅಸಲಿಗೆ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಸರ್ಕಾರ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಬಜೆಟ್ ಪ್ರಕಾರ, ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣ ನಾಲ್ಕು ಲಕ್ಷ ಕೋಟಿ ರೂಪಾಯಿಗಳು. ರಾಜ್ಯಕ್ಕೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದ ಮೂಲಕ ಬರುವ ಹಣ ನಲವತ್ನಾಲ್ಕು ಸಾವಿರ ಕೋಟಿ ರೂಪಾಯಿಗಳು. ಆದರೆ, ನಮ್ಮ ರಾಜ್ಯಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸುವ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶಕ್ಕೆ ಎರಡು ಲಕ್ಷ ಕೋಟಿಗೂ ಹೆಚ್ಚು ರೂಪಾಯಿಗಳನ್ನು ನೀಡಲಾಗುತ್ತಿದೆ. ಕಮ್ಯುನಿಸ್ಟ್ ಆಡಳಿತವಿರುವ ಕೇರಳವನ್ನು ಕಡೆಗಣಿಸಲಾಗಿದೆ. ತೆರಿಗೆ ಹಂಚಿಕೆಯಲ್ಲಿ ನಮ್ಮ ರಾಜ್ಯವನ್ನು ಹತ್ತನೇ ಸ್ಥಾನಕ್ಕೆ ದೂಡಲಾಗಿದೆ. ಈ ಘೋರ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು, ಉನ್ನತಾಧಿಕಾರಿಗಳು ಕೇಂದ್ರದ ಸಚಿವರನ್ನು ಖುದ್ದಾಗಿ ಕಂಡು, ಕಾನೂನಾತ್ಮಕವಾಗಿಯೇ ಮನವಿ ಸಲ್ಲಿಸಿದ್ದಾರೆ. ವಿನಂತಿಸಿಕೊಂಡಿದ್ದಾರೆ.

ಆದರೆ, ಕೇಂದ್ರ ಸರ್ಕಾರದ ಹಣಕಾಸು ಸಚಿವರಿಂದ ಇಲ್ಲಿಯವರೆಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಕ್ಕಿಲ್ಲ. ಅನುದಾನವೂ ಹರಿದು ಬಂದಿಲ್ಲ. ಬದಲಿಗೆ ಪ್ರತ್ಯೇಕತೆಯ ಕೂಗು ಎಬ್ಬಿಸಿ, ತಮಾಷೆ ನೋಡುತ್ತಿದೆ. ಅಸಲಿ ವಿಷಯವನ್ನು ಮರೆಮಾಚುತ್ತಿದೆ. ಇದು ಬಿಜೆಪಿಗರ ಪಲಾಯನ ರಾಜಕಾರಣಕ್ಕೊಂದು ಅತ್ಯುತ್ತಮ ಉದಾಹರಣೆ.

ಒಕ್ಕೂಟ ವ್ಯವಸ್ಥೆಯಲ್ಲಿರುವ ನಾವು, ನಮ್ಮ ದೇಶದ ಎಲ್ಲ‌ ರಾಜ್ಯಗಳೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂಬುದನ್ನು ಒಪ್ಪಿದ್ದೇವೆ. ಇದನ್ನು ಈ ಹಿಂದಿನ ಕೇಂದ್ರ ಸರ್ಕಾರಗಳು ಪಾಲಿಸಿಕೊಂಡು ಬಂದಿವೆ. ಆದರೆ, ಈಗ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ, ಹಿಂದಿ ರಾಜ್ಯಗಳು ಮತ್ತು ದಕ್ಷಿಣದ ಇತರ ಭಾಷಿಕ ರಾಜ್ಯಗಳ‌ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ಹಿಂದೂ ರಾಷ್ಟ್ರವನ್ನಾಗಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದೆ. ಇದು ಭಾರತದ ಬಹುತ್ವಕ್ಕೆ, ಬಹುಜನ ಸಂಸ್ಕೃತಿಗೆ ಧಕ್ಕೆಯಲ್ಲವೇ?

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಸಂಸದರೂ ಒಗ್ಗೂಡಿ ದನಿ ಎತ್ತಬೇಕಿತ್ತು. ವಿಚಿತ್ರವೆಂದರೆ, ರಾಜ್ಯ ಬಿಜೆಪಿಯ‌ ಇಪ್ಪತ್ತೇಳು ಸಂಸದರು ತಮ್ಮ‌ ಆತ್ಮಗೌರವವನ್ನು ಮೋದಿಯವರಿಗೆ ಅಡ ಇಟ್ಟಂತೆ ಆಡುತ್ತಿರುವುದು, ನಾಚಿಕೆಗೇಡಿನ ಸಂಗತಿ.

ದೇಶದಲ್ಲಿ ಇಂತಹ ಸ್ಥಿತಿ ಎದುರಾಗಿರುವಾಗ ಪ್ರಭುತ್ವವನ್ನು ಪ್ರಶ್ನಿಸುವುದು ತಪ್ಪೇ? ಈ ಬಗ್ಗೆ ದೇಶದ ಮಾನವಂತರು ಹಾಗೂ ಪ್ರಜ್ಞಾವಂತರು ಚಿಂತಿಸುವ ಅಗತ್ಯವಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?

ಪ್ರಧಾನಿ ಮೋದಿಯವರು, ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ...

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

Download Eedina App Android / iOS

X