ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಮತ್ತು ಗುಜರಾತ್ ಪೊಲೀಸರು ಖ್ಯಾತ ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಮುಂಬೈನಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಮುಫ್ತಿ ಸಲ್ಮಾನ್ ಅವರನ್ನು ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಈ ಮಾಹಿತಿ ಅರಿತ ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ಬೆಂಬಲಿಗರು ಠಾಣೆಯ ಹೊರಗೆ ಜಮಾಯಿಸಿದ್ದರು.
ಈ ವೇಳೆ ಮೌಲ್ವಿಗಳು ಪೊಲೀಸ್ ಠಾಣೆಯ ಒಳಗಿನಿಂದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಪ್ರತಿಭಟನೆ ಮಾಡದಂತೆ ಕೇಳಿಕೊಂಡರು.
#WATCH | Mumbai: Maulana Mufti Salman Azhari who was arrested in a hate speech case requested his supporters not to protest and said, “…Neither am I a criminal, nor have I been brought here for committing a crime. They are doing the required investigation and I am also… https://t.co/rQHuf6LNK1 pic.twitter.com/7a8vZ32O46
— ANI (@ANI) February 4, 2024
“ನಾನೇನೂ ಕ್ರಿಮಿನಲ್ ಅಲ್ಲ. ಅಥವಾ ಅಪರಾಧ ಎಸಗಿದ್ದಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿಲ್ಲ. ಅವರು ಅಗತ್ಯವಿರುವ ತನಿಖೆಯನ್ನು ಮಾಡುತ್ತಿದ್ದಾರೆ ಮತ್ತು ನಾನು ಸಹ ಅವರಿಗೆ ಸಹಕರಿಸುತ್ತಿದ್ದೇನೆ. ನಾನು ತಪ್ಪು ಮಾಡಿದ್ದರೆ ಬಂಧಿಸಲಿ. ಯಾರೂ ಕೂಡ ಪ್ರಚೋದನೆಗೊಳಗಾಗಡಬೇಡಿ. ಶಾಂತಿ ಕಾಪಾಡಿ” ಎಂದು ಮುಫ್ತಿ ಸಲ್ಮಾನ್ ಅಝ್ಹರಿ ಹೇಳಿದ್ದಾರೆ.
ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ಗುಜರಾತ್ ನ ಜುನಾಗಢದಲ್ಲಿ ದ್ವೇಷಭಾಷಣ ಮಾಡಿದ್ದರು ಎಂಬ ಆರೋಪ ಮುಫ್ತಿ ಸಲ್ಮಾನ್ ಅಝರಿ ಅವರ ಮೇಲೆ ಹೊರಿಸಲಾಗಿದೆ.
ಇದನ್ನು ಓದಿದ್ದೀರಾ? ಬೃಹತ್ ಸಾಲದ ಹೊರೆ; ಖಾಸಗಿ ಕಾರ್ಯಕ್ರಮಕ್ಕೂ ಸರ್ಕಾರಿ ಹಣ ಬಳಸಿದ ಅಸ್ಸಾಂ ಸಿಎಂ
ಅಝರಿ ಮತ್ತು ಇತರ ಇಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜುನಾಗಢ ಬಿ. ಡಿವಿಷನ್ ಠಾಣೆಯ ಬಳಿ ಅಝರಿ ಅವರು ಜನವರಿ 31ರಂದು ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಈ ಭಾಷಣದ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸ್ಥಳೀಯ ಸಂಘಟಕ ಮುಹಮ್ಮದ್ ಯೂಸುಫ್ ಮಲೀಕ್ ಮತ್ತು ಅಝೀಮ್ ಹಬೀಬ್ ವಡೇದರ ವಿರುದ್ಧವೂ ಐಪಿಸಿ ಸೆಕ್ಷನ್ 153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.