ವಯಸ್ಸಾದರೂ ತನಗೆ ಮದುವೆ ಮಾಡಿಲ್ಲ, ಸಾರಾಯಿ ಕುಡಿಯಲು ಹಣ ನೀಡುತ್ತಿಲ್ಲ ಎಂದ ಮಗ ಸಿಟ್ಟಿಗೆದ್ದು ತಾಯಿಯನ್ನೇ ಕೊಂದ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.
ತೆಲಂಗಾಣ ಗಡಿಗೆ ಹೊಂದಿಕೊಂಡ ಪೋಚಾವರಂ ಎಂಬ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದ ಘಟನೆಯಲ್ಲಿ ಶೋಭಾ ಅಂಜಪ್ಪ ಬ್ಯಾಗೇರಿ (45) ಕೊಲೆಯಾದ ತಾಯಿ ಎಂದು ತಿಳಿದು ಬಂದಿದೆ.
“ಮನೆಯಲ್ಲಿ ತಾಯಿ, ಮಗ ಇಬ್ಬರೇ ವಾಸಿಸುತ್ತಿದ್ದರು, ಕುಡಿದು ದಿನಾಲೂ ಜಗಳ ಮಾಡುತ್ತಿದ್ದ ಮಗ ನಿನ್ನೆ ತಡರಾತ್ರಿ ಕುಡಿದು ಕಟ್ಟಿಗೆಯಿಂದ ಹೊಡೆದು ತಾಯಿಗೆ ಕೊಲೆ ಮಾಡಿದ್ದಾನೆ. ಕೊಲೆಗೈದ ಮಗ ಅನೀಲಕುಮಾರ ಅಂಜಪ್ಪ (23) ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ತಂಡ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ” ಎಂದು ಪಿಎಸ್‌ಐ ವೆಂಕಟೇಶ ನಾಯಕ ಈದಿನ.ಕಾಮ್ ಜತೆಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರ ವಿರೋಧ; ಪ್ರೇಮಿಗಳಿಬ್ಬರು ಆತ್ಮಹತ್ಯೆ
ಈ ಸಂಬಂಧ ಚಿಂಚೋಳಿ ತಾಲೂಕಿನ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.