ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಒಂದು ವೇಳೆ, ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದರೆ, ಪ್ರಮಾಣವಚನ ಸ್ವೀಕಾರ ಮಾಡಲು ನಿರಾಕರಿಸುತ್ತೀರಾ ಎಂದು ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಟ್ವೀಟರ್‌ನಲ್ಲಿ ಮೋದಿ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. #ByeByeModi ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ನೆಟ್ಟಿಗರ #ByeByeModi ಅಭಿಯಾನವನ್ನು ಬೆಂಬಲಿಸಿರುವ ಕಾಂಗ್ರೆಸ್, ಮಾಜಿ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಮೇಲೆ ಪದೇ ಪದೇ ಮೋದಿ ವಾಗ್ದಾಳಿ ನಡೆಸುವುದನ್ನು ಕಟುವಾಗಿ ಟೀಕಿಸಿದೆ. ‘ಮೋದಿ ಅವರು ಹೇಳುತ್ತಿರುವ ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಪಡೆಯಲು ಬಿಜೆಪಿ ಬಯಸುವುದಾದರೆ, ಅವರು ತಮ್ಮ ವಾಕ್ಚಾತುರ್ಯವನ್ನು ಮತ್ತಷ್ಟು ತೀಕ್ಷ್ಣಗೊಳಿಸಬೇಕಾಗಿದೆ’ ಎಂದು ಹೇಳಿದೆ.
ಟ್ವೀಟ್‌ನಲ್ಲಿ ಮೋದಿ ವಿರುದ್ಧ ಪೊಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ದೇಶದಲ್ಲಿ ಕೇವಲ ಎರಡು ಜಾತಿಗಳಿವೆ – ಶ್ರೀಮಂತರು ಮತ್ತು ಬಡವರು – ಎಂದು ಪ್ರಧಾನಿ ಆಗಾಗ್ಗೆ ಹೇಳುತ್ತಾರೆ. ಆದರೆ, ಇಂದು ಸಂಸತ್ತಿನಲ್ಲಿ ಅವರು ತಮ್ಮನ್ನು ‘ದೊಡ್ಡ ಒಬಿಸಿ’ಯೆಂದು ಬಣ್ಣಿಸಿಕೊಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
“ಯಾರನ್ನು ಚಿಕ್ಕವರು ಮತ್ತು ಇನ್ನೊಬ್ಬರನ್ನು ದೊಡ್ಡವರು ಎಂದು ಪರಿಗಣಿಸುವ ಈ ಮನಸ್ಥಿತಿಯನ್ನು ಬದಲಾಯಿಸುವುದು ಮುಖ್ಯವಾಗಿದೆ. ಅದು ಒಬಿಸಿಗಳು, ದಲಿತರು ಅಥವಾ ಬುಡಕಟ್ಟು ಜನಾಂಗದವರಾಗಿರಲಿ, ಅವರ ಜನಸಂಖ್ಯೆಯನ್ನು ಲೆಕ್ಕ ಹಾಕದೆ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲಾಗುವುದಿಲ್ಲ” ಎಂದಿದ್ದಾರೆ.
“ಮೋದಿಜಿ ಅವರು ತಾವು ಒಬಿಸಿ ಎಂದು ಸಮುದಾಯಗಳ ಬಗ್ಗೆ ತುಂಬಾ ಮಾತನಾಡುತ್ತಾರೆ. ಆದರೆ, ಅವರು ಜಾತಿ ಗಣತಿಗೆ ಯಾಕೆ ಹೆದರುತ್ತಾರೆ” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
प्रधानमंत्री इस बीच अक्सर कह रहे थे देश में सिर्फ दो जातियां हैं – अमीर और गरीब, मगर आज संसद में उन्होंने खुद को ‘सबसे बड़ा OBC’ बताया।
किसी को छोटा और किसी को बड़ा समझने की इस मानसिकता को बदलना ज़रूरी है।
OBC हों, दलित हों या आदिवासी, बिना गिनती के उन्हें आर्थिक और सामाजिक…
— Rahul Gandhi (@RahulGandhi) February 5, 2024
“ಕಾಂಗ್ರೆಸ್ ಹೆಸರು ಹೇಳದೆ ಪ್ರಧಾನಿ ಮೋದಿಗೆ ನಿದ್ದೆ ಮಾಡಲು ಸಾಧ್ಯವಿಲ್ಲ. ದೇಶದಕ್ಕಾಗಿ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಮೋದಿ ಅವರರಲ್ಲಿ ಕೇಳಲು ಬಯಸುತ್ತೇನೆ – ನಿಮ್ಮ ಪಕ್ಷದಿಂದ ಅಥವಾ ನಿಮ್ಮ ರಾಜಕೀಯ ಹಿರಿಯರು ದೇಶದ ಸ್ವಾತಂತ್ರ್ಯ, ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆಯೇ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು “‘ಅತಿದೊಡ್ಡ ಒಬಿಸಿ’ ಎಂದು ಹೆಮ್ಮೆಪಡುವ ಮೂಲಕ, ಮೋದಿ ಅವರು ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಂಗಗಳಲ್ಲಿ ಒಬಿಸಿಗಳ ಕಡಿಮೆ ಪ್ರಾತಿನಿಧ್ಯದ ಕಟು ವಾಸ್ತವವನ್ನು ತಳ್ಳಿಹಾಕುತ್ತಿದ್ದಾರೆ. ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ” ಎಂದು ಹೇಳಿದ್ದಾರೆ.
“ಮುಖ್ಯವಾಗಿ, ಅವರು ರಾಷ್ಟ್ರವ್ಯಾಪಿ ಜಾತಿ ಗಣತಿಯ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಅದು ಎಲ್ಲ ಸಂಸ್ಥೆಗಳಲ್ಲಿ ಒಬಿಸಿಗಳ ಕಡಿಮೆ ಪ್ರಾತಿನಿಧ್ಯದ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ” ಎಂದಿದ್ದಾರೆ.
“ಪ್ರಧಾನಮಂತ್ರಿಯವರು ಸಾಮಾಜಿಕ ನ್ಯಾಯದ ವಿಚಾರವನ್ನು ಯಾಕೆ ತಿರಸ್ಕರಿಸುತ್ತಿದ್ದಾರೆ. ಸತ್ಯವೆಂದರೆ ಆರ್‌ಎಸ್‌ಎಸ್‌ನ ಜಾತಿವಾದಿ ಮನಸ್ಥಿತಿಯಲ್ಲಿ ತರಬೇತಿ ಪಡೆದ ಯಾರಾದರೂ ಅರ್ಥಪೂರ್ಣ ಸಾಮಾಜಿಕ ನ್ಯಾಯವನ್ನು ಎಂದಿಗೂ ನೀಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.
By boasting about himself as the ‘biggest OBC’, PM Modi has done nothing but dismissed the stark reality of complete under-representation of OBCs in all walks of life, including the Union Government.
More importantly, he also dismissed the demand for a nationwide caste census…
— K C Venugopal (@kcvenugopalmp) February 5, 2024
ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡಿ, “ಪ್ರಧಾನಿಯವರು ಕಾಂಗ್ರೆಸ್ ಅನ್ನು ಹೆಚ್ಚಾಗಿ ಗುರಿ ಮಾಡಿಕೊಂಡಿದ್ದಾರೆ. ಅವರು ನಮ್ಮ ಬಗ್ಗೆ ಎಷ್ಟು ಚಿಂತಿತರಾಗಿದ್ದಾರೆಂದರೆ, ಅವರು ತಮ್ಮ ಇಡೀ ಭಾಷಣವನ್ನು ಕಾಂಗ್ರೆಸ್‌ಗೆ ಮೀಸಲಿಟ್ಟಿದ್ದಾರೆ. ಅವರು ಅನೇಕ ವರ್ಷಗಳಿಂದ ಈ ವಿಷಯಗಳನ್ನು ಪುನರಾವರ್ತಿಸುತ್ತಿದ್ದಾರೆ. ನೆಹರೂಜಿ 60 ವರ್ಷಗಳ ಹಿಂದೆ ನಿಧನರಾದರು. ಆದರೂ ಮೋದಿ ಅವರು ನೆಹರೂ ಅವರ ಬಗ್ಗೆ ಈಗಲೂ ಟೀಕೆ ಮುಂದುವರೆಸಿದ್ದಾರೆ. ನಾವು ಈ ‘ನಾಮದಾರ-ಕಾಮದಾರ’ ಸಾಲನ್ನು ಕೇಳಿದ್ದೇವೆ. ‘ಪರಿವಾರ-ವಾದ’ವನ್ನು ನಾವು ಹಲವಾರು ಬಾರಿ ಕೇಳಿದ್ದೇವೆ” ಎಂದಿದ್ದಾರೆ.
“ಮೋದಿ ಭಾಷಣ ದಣಿದ ಹಳೆಬರನ್ನು ಪದೇ ಪದೇ ಟೀಕಿಸುವ ಪುನರಾವರ್ತನೆಯಾಗಿದೆಯೇ ಹೊರತು, ಬೇರೇನೂ ಇಲ್ಲ. ನಾನು ಹೇಳಲೇಬೇಕು, ಮೋದಿಜಿ ಅವರು ತಾವು ಗೆಲ್ಲುತ್ತೇವೆಂದು ಹೇಳುತ್ತಿರುವ ಸಂಖ್ಯೆಯ ಅರ್ಧದಷ್ಟು ಸಮೀಪಕ್ಕೆ ಬರಬೇಕಾದರೆ ಅವರ ವಾಕ್ಚಾತುರ್ಯವನ್ನು ತೀಕ್ಷ್ಣಗೊಳಿಸಬೇಕು” ಎಂದು ತರೂರ್ ಹೇಳಿದ್ದಾರೆ.
“ಬಿಜೆಪಿ 370ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರೆ ಮೋದಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸುತ್ತಾರೆಯೇ. ಬಿಜೆಪಿಯ ಈ ರೀತಿಯ ಕನಸು ಯಾವಾಗಲೂ ವಿಫಲವಾಗಿದೆ. 2004ರಲ್ಲಿ ‘ಭಾರತ ಹೊಳೆಯುತ್ತಿದೆ’ (ಇಂಡಿಯಾ ಶೈನಿಂಗ್) ಎಂದಿದ್ದರು. ಅದು ವಿಫಲವಾಯಿತು. ಈಗ, ಇದು ಭಾರತ ಹೊಳೆಯುವ 2ನೇ ಭಾಗ ಆಗಲಿದೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮಾಣಿಕಂ ಟ್ಯಾಗೋರ್ ಕೇಳಿದ್ದಾರೆ.
ಇಂದಿರಾ ಗಾಂಧಿ ಮತ್ತು ನೆಹರೂ ಅವರನ್ನು ಉಲ್ಲೇಖಿಸದೆ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಎಂದಿಗೂ ಕೊನೆಗೊಳಿಸುವುದಿಲ್ಲ. ಅವರ ಬ್ರೆಡ್ ಮತ್ತು ಬೆಣ್ಣೆಯು ಇಂದಿರಾ ಗಾಂಧಿ ಮತ್ತು ನೆಹರು ಮೇಲೆ ಇರುತ್ತದೆ ಎಂಬುದು ನಮಗೆ ಗೊತ್ತಿದೆ” ಎಂದು ಟ್ಯಾಗೋರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೇಂದ್ರ ಸರ್ಕಾರದ ವಿರುದ್ಧ #SouthTaxMovement ‘ಎಕ್ಸ್’ ಅಭಿಯಾನ; ಸಿಎಂ ಸಿದ್ದರಾಮಯ್ಯ ಬೆಂಬಲ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿಯಾಗಿ ಸಂಸತ್ತಿನಲ್ಲಿ ಮೋದಿಜಿ ಅವರ ಕೊನೆಯ ಭಾಷಣವಿದು ಎಂಬುದಾಗಿ ದೇಶದ ಯುವಜನರು ಹೇಳುತ್ತಿದ್ದಾರೆ” ಎಂದಿದ್ದಾರೆ.
“#ByeByeModi ನಂಬ.1 ನಲ್ಲಿ ಟ್ರೆಂಡ್ ಆಗುತ್ತಿದೆ. ಜನರು ಈಗ ನಿಮ್ಮ ಹೇಳಿಕೆಗಳನ್ನು ಕೇಳಲು ಬೇಸತ್ತಿದ್ದಾರೆ. ‘ಮೋದಾನಿ’ ಯುಗವು ಕೊನೆಗೊಳ್ಳಲಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ್ದ ಮೋದಿ, “ವಿರೋಧ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವ ಧೈರ್ಯ ಕಳೆದುಕೊಂಡಿವೆ. ದೀರ್ಘ ಕಾಲ ವಿರೋಧ ಪಕ್ಷದ ಪೀಠದಲ್ಲಿಯೇ ಇರಇವೆ. ನಾನು ದೇಶದ ಮನಸ್ಥಿತಿಯನ್ನು ಅಳೆಯಬಲ್ಲೆ, ಖಂಡಿತವಾಗಿಯೂ ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಮತ್ತು ಬಿಜೆಪಿಗೆ ಕನಿಷ್ಠ 370 ಸ್ಥಾನಗಳನ್ನು ಪಡೆಯಲಿದೆ. ಮೂರನೇ ಅವಧಿಗೆ ಎನ್‌ಡಿಎ ಸರ್ಕಾರ ರಚನೆಯಾಗಲಿದೆ” ಎಂದು ಹೇಳಿದ್ದರು.