ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ಶೇ.34 ರಷ್ಟು ಏರಿಕೆಯಾಗಿದೆ.
ಚೈಲ್ಡ್ ರೈಟ್ ಸಂಸ್ಥೆ ಈ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, “ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ-ಪುಟ್ಟ ಕಾರಣಗಳಿಗೆ ಮನೆ ಬಿಟ್ಟು ತೆರಳುತ್ತಿದ್ದಾರೆ. ರಿಮೋಟ್ ಕೊಟ್ಟಿಲ್ಲ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿಲ್ಲ, ತಂದೆ-ತಾಯಿ ಜಗಳ ಕಿರಿಕಿರಿಗೆ ಮಕ್ಕಳು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಿದ್ದಾರೆ” ಎಂದು ಹೇಳಿದೆ.
“ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಪೋಷಕರು ಕಡಿಮೆ ಮಾಡಿದ್ದಾರೆ. ಮನಸ್ಸಿನ ದುಗುಡ ಹೇಳಿಕೊಳ್ಳಲಾರದೆ ಮಕ್ಕಳಿಗೆ ಒತ್ತಡ ಹೆಚ್ಚಾಗಿದೆ. ಕೌಟುಂಬಿಕ ಒತ್ತಡದಿಂದ ಮಕ್ಕಳು ಹೆಚ್ಚಾಗಿ ಮನೆ ಬಿಡುತ್ತಿದ್ದಾರೆ” ಎಂದು ಚೈಲ್ಡ್ ರೈಟ್ ಸಂಸ್ಥೆ ತಿಳಿಸಿದೆ.
“ಮಕ್ಕಳನ್ನು ಟ್ರೇಸ್ ಮಾಡುವುದು ಕಷ್ಟಕರವಾಗಿದೆ. 100% ಪೈಕಿ ಕೇವಲ 85% ಮಕ್ಕಳು ಮಾತ್ರ ಪತ್ತೆಯಾಗಿದ್ದಾರೆ. ಇನ್ನುಳಿದ ಮಕ್ಕಳು ನಾಪತ್ತೆಯಾಗಿದ್ದಾರೆ. ಕಳೆದ ವರ್ಷ ಇದರ ಸಂಖ್ಯೆ ಕೂಡ ಶೇಕಾಡ 58% ಏರಿಕೆಯಾಗಿದೆ” ಎಂದಿದೆ.
- 2020ರಲ್ಲಿ 1,557 ಮಕ್ಕಳು ನಾಪತ್ತೆಯಾಗಿದ್ದರು. ಈ ಪೈಕಿ 421 ಗಂಡು, 1136 ಹೆಣ್ಣು ಮಕ್ಕಳಿದ್ದರು. ಆದರೆ, ಈ ಮಕ್ಕಳಲ್ಲಿ ಇನ್ನು 21 ಗಂಡು, 37 ಹೆಣ್ಣು ಮಕ್ಕಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
- 2021ರಲ್ಲಿ 2,118 ಮಕ್ಕಳು ನಾಪತ್ತೆಯಾಗಿದ್ದರು. ಈ ಪೈಕಿ 488 ಗಂಡು, 1,630 ಹೆಣ್ಣುಮಕ್ಕಳಿದ್ದರು. ಇದರಲ್ಲಿ 28 ಗಂಡು, 64 ಹೆಣ್ಣು ಮಕ್ಕಳ ಇನ್ನೂ ಪತ್ತೆ ಆಗಿಲ್ಲ.
- 2022 ಹಾಗೂ 2023ರಲ್ಲಿ 5,144 ಮಕ್ಕಳು ನಾಪತ್ತೆಯಾಗಿದ್ದರು. ಈ ಮಕ್ಕಳ ಪೈಕಿ 934 ಮಕ್ಕಳನ್ನ ಪತ್ತೆ ಮಾಡಬೇಕಾಗಿದೆ.
- 347 ಗಂಡು ಹಾಗೂ 853 ಹೆಣ್ಣು ಮಕ್ಕಳು ಸೇರಿ ಒಟ್ಟು 1,200 ನಾಪತ್ತೆ ಪ್ರಕರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಬೇಕಾಗಿದೆ.