ಹೊಸ ಎಲ್ಲಾಪುರ ಗ್ರಾಮದಲ್ಲಿ ರುದ್ರಭೂಮಿ ಸಂಪೂರ್ಣ ಹದಗೆಟ್ಟಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ಮೃತಪಟ್ಟವರನ್ನು ಹೂಳಲು ಜಾಗವಿಲ್ಲದಂತಾಗಿದೆ. ರುದ್ರಭೂಮಿಯನ್ನು ಹದ್ದುಬಸ್ತು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ.
ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಶಕುಂತಲಾ ವಾಲಿಕಾರ, “ಹೊಸ ಎಲ್ಲಾಪುರದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದಲ್ಲಿ ಮೃತಪಟ್ಟವರನ್ನು ಹೂಳಲು ಜಾಗವೇ ಇಲ್ಲದಂತಾಗಿದೆ. ಇರುವ ಸ್ಮಶಾನ ಸ್ಥಳವನ್ನು ಹದ್ದುಬಸ್ತು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಗೌರಮ್ಮ, ನಿಂಗಮ್ಮ ಬೆನ್ನಪ್ನವರ್, ಚೆನ್ನಮ್ಮ ಮಾದರ್, ಸಾವಕ್ಕ ಆಡಿನ್, ಭಾರತಿ ಗೋಸಾವಿ, ಜಾನಕಿ, ಫಾರಿದ ಖಾನ್, ಬಾಯಿ ಬಸಂತಿ ಗೋಸಾವಿ, ಲೀಲಾ ಬಾನು, ಗಂಗವಾ ರತ್ನವ್ವ, ಮಲೆದಿ ಶಾಂತವ, ಮಲ್ಲೇ ಡಿ ಬೇಗಂ, ಮಂಜುಳಾ ಶೇಖವ್ವ, ತಳವಾರ್ ಗಿರಿಜವ್ವ, ಹುಬ್ಬಳ್ಳಿ ನೀಲವ್ವ, ತಳವಾರ್ ಮೈನಾ, ಜಮುನಾ ಗೋಸಾವಿ ಸೇರಿದಂತೆ ಹಲವರು ಇದ್ದರು.