ಸಂತ ಸೇವಾ ಲಾಲ್ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸರ್ವಜ್ಞ ಅವರ ಜಯಂತಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಕಟ್ಟುನಿಟ್ಟಾಗಿ ಎಲ್ಲ ಇಲಾಖೆ ಮತ್ತು ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಎಂದು ಶಿರಹಟ್ಟಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಧಿಕಾರಿ ಶರಣಯ್ಯ ಕುಲಕರ್ಣಿ ಮತ್ತು ಗ್ರೇಡ್ ಟು ತಹಶೀಲ್ದಾರ್ ಮಂಜುನಾಥ ಅಮಾಸಿ ಸೂಚಿಸಿದರು.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.
“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಜಾತ್ಯತೀತ ಮನಸ್ಥತಿಯಲ್ಲಿ ಎಲ್ಲರೂ ಬದುಕುತ್ತಿದ್ದೆವೆ. ಹಾಗಾಗಿ ನಾಡಿನ ದಾರ್ಶನಿಕರ ಜಯಂತಿಯನ್ನು ಸರ್ಕಾರದ ಆದೇಶ ಇದೆ ಎಂದು ಕಾಟಾಚಾರಕ್ಕೆ ಕೇವಲ ಪೂಜೆ ಮಾಡುವುದರ ಮೂಲಕ ಆಚರಿಸುವುದಕ್ಕಿಂತ ಅಂತಹ ದಾರ್ಶನಿಕರ ಬದುಕು ಚಿಂತನೆ, ವಿಚಾರ, ಅವರ ಆದರ್ಶ, ಸರಳತೆ ಸಾಮಾಜಿಕ ಮಾರ್ಗದರ್ಶನಗಳನ್ನು ಪುಸ್ತಕ (ಒಂದು ಚಿಕ್ಕ ಕಿರೂ ಒತ್ತಿಗೆ)ದಲ್ಲಿ ತಂದು ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಬೇಕು. ಈ ಮೂಲಕ ಎಲ್ಲ ದಾರ್ಶನಿಕರ ಜಯಂತಿಯಂದು ಅ ದಾರ್ಶನಿಕರ ಕುರಿತು ಉಪನ್ಯಾಸಕರ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಸುವಂತ ಕೆಲಸ ಮಾಡಬೇಕು. ಇದನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣಾಧಿಕಾರಿಗಳು ಬಹಳ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಸಮಾಜದ ಮುಖಂಡರೊಬ್ಬರೊಬ್ಬರು ವಿನಂತಿಸುವ ಮೂಲಕ ಸಲಹೆ ನೀಡಿದರು.
ತಾಲೂಕಿನ ಬೇರೆ ಬೇರೆ ಅಧಿಕಾರಿಗಳ ಅಥವಾ ಸಿಬ್ಬಂದಿಯ ಅನುಪಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸುವುದರ ಜೊತೆಗೆ ತಾಲೂಕು ಪಂಚಾಯತ್ ಅಧಿಕಾರಿಯು ಪೂರ್ವಭಾವಿ ಸಭೆಗೆ ಹಾಜರಾಗದಿರುವುದನ್ನ ಕಂಡು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸ್ಮಶಾನ ಭೂಮಿ ಹದ್ದುಬಸ್ತು ಮಾಡಲು ಆಗ್ರಹ
ಶಿರಹಟ್ಟಿ ಸಮಾಜ ಕಲ್ಯಾಣ ಸಹಾಯ ನಿರ್ದೇಶಕರು ಶರಣಯ್ಯ ಕುಲಕರ್ಣಿ, ಶಿರಹಟ್ಟಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮರಿಯಪ್ಪ ಮುಂದಿನಮನಿ, ತೋಟಗಾರಿ ಇಲಾಖೆ ಅಧಿಕಾರಿಗಳು ಸುರೇಶ ಕಂಬಾರ, ಕೃಷಿ ಮುನಗೋಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.