ಕೇಂದ್ರದ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕಕ್ಕೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಅಂದರೆ ಬಜೆಟ್ ವಿಚಾರದಲ್ಲಿ ಅನುದಾನ ಕೊಡುವ ವಿಚಾರದಲ್ಲಿ ಮೂಲ ಸೌಲಭ್ಯಗಳನ್ನು ಘೋಷಣೆ ಮಾಡುವ ವಿಚಾರದಲ್ಲಿ ಸಂಪೂರ್ಣವಾಗಿ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದಿಂದ ಖಂಡಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಸಂಜಯ್ ದೊಡ್ಡಮನಿ ಅವರು ಗದಗ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದು, “ಕೇಂದ್ರದ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಿಂದ ಕರ್ನಾಟಕಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲಿ ಸುಮಾರು ₹62 ಕೋಟಿ ನಷ್ಟವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಧೋರಣೆ ತೋರುತ್ತಿದ್ದು, ಕರ್ನಾಟಕದಿಂದ ಆಯ್ಕೆಯಾದ 25 ಮಂದಿ ಸಂಸದರು ತಮ್ಮದೇ ಸರ್ಕಾರಕ್ಕೆ ಮತ್ತು ಮೋದಿಯವರಿಗೆ ನಮ್ಮ ಅನುದಾನದ ಬಗ್ಗೆ ರಾಜ್ಯದ ಜನರ ಪರವಾಗಿ ಧ್ವನಿ ಎತ್ತದೆ ನರ ಸತ್ತವರಾಗಿ ರಾಜ್ಯದ ಜನರ ದೃಷ್ಟಿಯಲ್ಲಿ ದುರ್ಬಲರಾಗಿದ್ದಾರೆ. ರಾಜ್ಯದ ಜನ ತೀವ್ರವಾಗಿ ಖಂಡಿಸುತ್ತಾ ಮತ್ತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರವನ್ನು ಹಾಕಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಮಕ್ಕಳ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ಅಪರ ಜಿಲ್ಲಾಧಿಕಾರಿ
“ಫೆಬ್ರುವರಿ 7ರಂದು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಸಂಸತ್ ಮುಂದೆ ಧರಣಿ ಮಾಡುತ್ತಿದ್ದಾರೆ. ಕರ್ನಾಟಕದ ಎಲ್ಲ ಸಂಸದರು ಮತ್ತು ಜಾತ್ಯತೀತವಾದ ಎಲ್ಲ ಪಕ್ಷದ ನಾಯಕರುಗಳು ಈ ಧರಣಿಯಲ್ಲಿ ರಾಜ್ಯದ ಪರವಾಗಿ ಭಾಗವಹಿಸಬೇಕಾಗಿದೆ. ಧರಣಿ ಮಾಡಬೇಕಾಗಿದೆ. ಎಲ್ಲ ನಾಯಕರು ಪಕ್ಷಭೇದವನ್ನು ಬಿಟ್ಟು ಅಂದು ರಾಜ್ಯದ ಜನರ ಪರವಾಗಿ ಮತ್ತು ನಮ್ಮ ಅನುದಾನದ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡಿ ಪಡೆಯಬೇಕಾಗಿದೆ” ಎಂದು ಹೇಳಿದರು.