ಸೂತಕದ ಹೆಸರಲ್ಲಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ಊರಾಚೆ ಇರಿಸಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕುಂಟನಹಟ್ಟಿ ಗ್ರಾಮದ ಬೀದಿಯಲ್ಲಿ ಗುಡಿಸಲು ಹಾಕಿ ಬಾಣಂತಿ 25 ವರ್ಷದ ಬಾಲಮ್ಮ ಹಾಗೂ ತನ್ನ ಒಂದು ತಿಂಗಳ ಹಸುಗೂಸನ್ನು ಬೀದಿಯಲ್ಲಿ ಗುಡಿಸಲು ಹಾಕಿ, ಉರಿಯುವ ಬಿಸಿಲಲ್ಲಿ ಇರಿಸಿದ್ದರು.
ಹೆರಿಗೆ ಬಳಿಕ 25 ವರ್ಷದ ಬಾಣಂತಿ ಬಾಲಮ್ಮ ಹಾಗೂ ಒಂದು ತಿಂಗಳ ಮಗುವನ್ನು ಗ್ರಾಮದ ಹೊರಗಿನ ಗುಡಿಸಲಿನಲ್ಲಿರಿಸಿದ್ದ ದೂರನ್ನು ಆಧರಿಸಿ ಶಿರಾ ಜೆಎಂಎಫ್ಸಿ ಕೋರ್ಟ್ ಜಡ್ಜ್ ಗೀತಾಂಜಲಿ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಗ್ರಾಮದಲ್ಲಿ ಮೌಢ್ಯದ ಬಗ್ಗೆ ಅರಿವು ಮೂಡಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಗೆ ಕಳಿಸಿದ್ದಾರೆ. ಮತ್ತೆ ಘಟನೆ ಮರುಕಳಿಸಿದರೆ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಫೆ.18ರಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನ; ಕರಪತ್ರ ಬಿಡುಗಡೆ
ತುಮಕೂರು ಜಿಲ್ಲೆಯಲ್ಲಿ ಸೂತಕದ ಹೆಸರಿನಲ್ಲಿ ಅಮಾನವೀಯ ಘಟನೆಗಳಿಗೆ ಪೂರ್ಣವಿರಾಮ ಹಾಕಬೇಕಿದೆ. ಜಿಲ್ಲಾಡಳಿತ ಸಮುದಾಯದ ಜನರಲ್ಲಿ ಕಾನೂನು ಮತ್ತು ಆರೋಗ್ಯ, ಸುರಕ್ಷತೆ ಕುರಿತು ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕಿದೆ.
ತಾಲೂಕು ಕಾಡುಗೊಲ್ಲ ಕಾರ್ಯದರ್ಶಿ ಚಂದ್ರಣ್ಣ, ತಾವರೆಕೆರೆ ಪೊಲೀಸ್ ಠಾಣಾ ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.