ತಮಿಳುನಾಡಿನಲ್ಲಿ ಎಂ ಕೆ ಸ್ಟಾಲಿನ್ ಸರ್ಕಾರ ಹಾಗೂ ರಾಜ್ಯಪಾಲ ಆರ್ ಎನ್ ರವಿ ನಡುವಿನ ವಾಗ್ವಾದ ತಾರಕಕ್ಕೇರಿದ್ದು, ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣ ಓದದೆ ಸಭಾತ್ಯಾಗ ಮಾಡಿದ್ದಾರೆ.
ಸದನ ಆರಂಭವಾಗುವ ಪ್ರತಿ ವರ್ಷದ ಆರಂಭಿಕ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ಸಂಪ್ರಾದಾಯ. ಆದರೆ ರಾಜ್ಯಪಾಲ ಆರ್ ಎನ್ ರವಿ ಸರ್ಕಾರದ ಭಾಷಣ ಓದದೆ ತಿರಸ್ಕರಿಸಿದ್ದಾರೆ. ಕಳೆದ ವರ್ಷವೂ ಕೂಡ ರಾಜ್ಯಪಾಲರು ಡಿಎಂಕೆ ಸರ್ಕಾರದ ಭಾಷಣದ ಕೆಲವು ಭಾಗಗಳನ್ನು ಓದಿರಲಿಲ್ಲ.
“ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಗೆ ಹಾಡುವುದರೊಂದಿಗೆ ಗೌರವ ಸಲ್ಲಿಸುವ ಮನವಿ ಹಾಗೂ ಸಲಹೆಯನ್ನು ಪದೇಪದೇ ತಿರಸ್ಕರಿಸಲಾಗಿದೆ. ಈ ಭಾಷಣವು ಹಲವು ಭಾಗಗಳನ್ನು ನಾನು ವಾಸ್ತವಿಕ ಮತ್ತು ನೈತಿಕ ಆಧಾರದ ಮೇಲೆ ಒಪ್ಪುವುದಿಲ್ಲ. ನಾನು ಅವರಿಗೆ ನನ್ನ ಮಾತನ್ನು ನೀಡುವುದು ಸಾಂವಿಧಾನಿಕ ಅಪಹಾಸ್ಯವನ್ನು ರೂಪಿಸಬಹುದು. ಆದ್ದರಿಂದ ಸದನಕ್ಕೆ ಸಂಬಂಧಿಸಿದಂತೆ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ಈ ಸದನವು ಜನರ ಒಳಿತಿಗಾಗಿ ಆರೋಗ್ಯಕರ ಚರ್ಚೆಯನ್ನು ಬಯಸುತ್ತದೆ” ಎಂದು ರಾಜ್ಯಪಾಲ ಆರ್ ಎನ್ ರವಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ