ವಿಜಯಪುರ ಜಿಲ್ಲೆ ಇಂಡಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚರಿಸುವ ಆಟೋಗಳಿಗೆ ಬಸ್ ಸ್ಟಾಪ್ ಸುತ್ತಮುತ್ತ ಪಾರ್ಕಿಂಗ್ ಸ್ಥಳಾವಕಾ ಕಲ್ಪಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಆಟೋಚಾಲಕರ ಪರವಾಗಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಇಂಡಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಸುಮಾರು 118 ಆಟೋಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸಂಚರಿಸುತ್ತಿದ್ದು, ಈ ಆಟೋಗಳಿಗೆ ಬಸ್ ಸ್ಟಾಪ್ ಹತ್ತಿರ ನಿಲ್ಲಲು ಆರಕ್ಷಕ ಇಲಾಖೆಯವರು ಅವಕಾಶ ಕೊಡದಿರುವ ಕಾರಣ, ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯ ಇರುವ ಖಾಲಿ ಜಾಗೆ ಹಾಗೂ ಬಸ್ ಸ್ಟಾಪ್ ಸುತ್ತಮುತ್ತ ಆಟೋಗಳನ್ನು ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಕರವೇ ಸ್ವಾಭಿಮಾನ ಬಳಗದ ಸಂಘಟನೆ ಅಧ್ಯಕ್ಷ ಶಿವು ಬಡಿಗೇರ್, ಶಿವು ಕೋಳಿ, ಕಿರಣ್ ಇಂಗಳೆ, ಸಚಿನ್ ಹಿರೇಮಠ್, ಶಶಿ ವಾಲಿಕಾರ್, ನಬಿಲಾಲ್ ಭಗವಾನ್, ಪ್ರದೀಪ್ ಪವಾರ್, ಮಹೇಶ್ ಅಗಸರ, ಮತ್ತು ಖಾಜೆ ಸಾಬ್ ಬಗವಾನ್, ಇಸಬಾ ಮಕಲುಮದರಖಂಡಿ, ಮುತ್ತು ಹೊಸಮನಿ, ಸಮೀರ್ ಪಾಟೀಲ, ರಾಕೇಶ್ ಜಾಧವ ಇತರರು ಇದ್ದರು.