ರಾಜ್ಯ ಕುರಿಗಾರರು ಮತ್ತು ಪಶು ಪಾಲಕರ ರಕ್ಷಣೆ-ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಬೇಕು ಎಂದು ರಾಜ್ಯ ಕುರಿಗಾರರ ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿ ಬಾಗಲಕೋಟೆ ಜಿಲ್ಲಾ ಘಟಕ ಸರ್ಕಾರಕ್ಕೆ ಆಗ್ರಹಿಸಿದೆ.
ಸಮಿತಿಯ ಜಿಲ್ಲಾ ಸಂಚಾಲಕ ಯಲ್ಲಪ್ಪ ಹೆಗಡೆ ಸೋಮವಾರ(ಫೆ.12) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕುರಿಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಅವರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಅತ್ಯಾಚಾರಗಳು ಸಹಿತ ನಡೆಯುತ್ತಿವೆ. ಈ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕಾಯ್ದೆಯನ್ನು ಜಾರಿಗೆ ತರವ ಅವಶ್ಯಕತೆ ಇದೆ ಎಂದರು.
ಕುರಿ ಮೇಯಿಸುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು. ಸರ್ಕಾರವು ಎಲ್ಲಾ ವರ್ಗದ ಮಹಿಳೆಯರ, ಮಕ್ಕಳ, ಶೋಷಿತ ವರ್ಗದವರ ಹಿತ ರಕ್ಷಣೆಗೆ ವಿಶೇಷ ಕಾಯೆ ಗಳು ಜಾರಿ ಮಾಡಿದಂತೆ ಅದೇ ರೀತಿಯಾಗಿ ಕುರಿಗಾರರ ರಕ್ಷಣೆಗೆ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕುರಿಗಾರರಿಕೆ ಮತ್ತು ಪಶು ಸಂಗೋಪನೆ ಮೇಲೆ ಜೀವನ ಸಾಗಿಸುತ್ತಿರುವ ಕುರಿಗಾರರು ಪಶುಪಾಲಕರ ಮೇಲೆ ಆಗುತ್ತಿ ರುವ ದೌರ್ಜನ್ಯ, ನಿಂದನೆ, ಕಳ ತನ, ಪ್ರಾಣಪಾಯ, ಅತ್ಯಾಚಾರ ಇತ್ಯಾದಿ ಕಡಿವಾಣಕ್ಕಾಗಿ ದೌರ್ಜನ್ಯ ತಡೆ ಕಾಯ್ದೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸಿದ್ದಪ್ಪ ಬಳಗಾನೂರ, ಪರ ಶುರಾಮ ಮಂಟೂರ, ಹುಸೇನಸಾಬ ಮಾಲಾದಾರ, ತಿಪ್ಪಣ್ಣ ಡಿ.ಕೆ, ಶಂಕ್ರಪ್ಪ ಶಾಸನ್ನವರ್, ಬಸಪ್ಪ ಆಡಗಲ್ ಹಾಜರಿದ್ದರು.