ಆರ್ಥಿಕ ಅಸಮಾನತೆ, ಹೆಚ್ಚುತ್ತಿರು ಬೆಲೆಯೆರಿಕೆ, ಗ್ರಾಮೀಣ ಪ್ರದೇಶದಲ್ಲಿ ತೀವ್ರವಾದ ಕೃಷಿ ಬಿಕ್ಕಟ್ಟು, ರಾಷ್ಟ್ರೀಯ ಸಂಪತ್ತು ಲೂಟಿ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪ್ರಶ್ನಿಸಿ, ಫೆ. 16ರಂದು ರೈತ, ಕೂಲಿಕಾರ, ಕಾರ್ಮಿಕರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.
ಬಿಕೆಎ, ಸಿಐಟಿಯು, ಲೆಪಿಆರ್‌ಎಸ್, ಎಐಎಡಬ್ಲೂಯು, ಸ್ವಾಭಿಮಾನಿ ಸೇತಕರಿ ಸಂಘ, ಕಾಯಕಮಿತ್ರ, ಗ್ರಾಮ ಪಂಚಾಯತ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿಯ ಪ್ರತಿಭಟನೆ ನಡೆಯಲಿದೆ.
ಈ ಕುರಿತು ಸಭೆ ನಡೆಸಿದ ಸಂಘಟನೆಗಳು, ಜನವಿರೋಧಿ ನೀತಿಗಳಿಗೆ ಅಂಟಿಕೊಂಡಿರುವ, ಕಾರ್ಪೂರೇಟ ಕಂಪನಿಗಳ ಪರವಾಗಿರುವ ರಾಜಕೀಯ ಪಕ್ಷಗಳ ಧೋರಣೆಗಳನ್ನು ಉಗ್ರವಾಗಿ ಪ್ರತಿರೋಧಿಸಬೇಕಾಗಿದೆ.ಇದರ ಭಾಗವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಅಕ್ರಮ ಮೈತ್ರಿಕೂಟವನ್ನು ಸೋಲಿಸಬೇಕಿದೆ.
ಆರ್ಥಿಕ ಅಸಮಾನತೆ, ಹೆಚ್ಚುತ್ತಿರು ಬೆಲೆಯೆರಿಕೆ, ಗ್ರಾಮೀಣ ಪ್ರದೇಶದಲ್ಲಿ ತೀವ್ರವಾದ ಕೃಷಿ ಬಿಕ್ಕಟ್ಟು,ರಾಷ್ಟ್ರೀಯ ಸಂಪತ್ತು ಲೂಟಿ,ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪ್ರಶ್ನಿಸುವುದು ಮತ್ತು ನಮ್ಮ ಹಕ್ಕನ್ನು ಪಡೆಯುವುದು ಸಲುವಾಗಿ ಫೆ.16ರಂದು ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಣನೆ ಹಮ್ಮಿಕೊಳದಲಾಗಿದೆ.ಇದರ ಭಾಗವಾಗಿ ಬೆಳಗಾವಿಯ ಜಿಲ್ಲಾ ಕೇಂದ್ರ ಚನ್ನಮ್ಮಾ ಸರ್ಕಲ್ ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದಿವೆ.
ದಯವಿಟ್ಟು ರೈತಪರ, ಕಾರ್ಮಿಕ, ಕೃಷಿ ಕೂಲಿಕಾರರು, ದಲಿತ, ಮಹಿಳಾ, ಯುವಜನ, ವಿಧ್ಯಾರ್ಥಿ ಹಾಗೂ ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಯಾಗಲು ಸಹಕರೀಸಬೇಕೆಂದು ಸಂಘಟನೆ ಕರೆನೀಡಿದೆ.
ಫೆ.16ರಂದು ಅಂಬೇಡ್ಕರ್ ಗಾರ್ಡನ್‌ನಲ್ಲಿ ಸೇರಿ, ನಂತರ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಲಿವೆ.
ಸಭೆಯಲ್ಲಿ ಸಿದ್ದಗೌಡ ಮೋದಗಿ, ಮಂದಾ ನೇವಗಿ, ಶಿವಲೀಲಾ ಮಿಸಾಳೆ, ಮೀನಾಕ್ಷಿ ದಪಡೆ, ಸರೋಜಾ ಕಾಂಬಳೆ ಹಾಗೂ ಇತರರು ಭಾಗವಹಿಸಿದ್ದರು.