ಅಯೋಧ್ಯೆಗೆ ಮೆಮು ರೈಲು ರವಾನೆ; ಕೋಲಾರ ಜನರ ಪರದಾಟ

Date:

Advertisements

ಕೋಲಾರ – ಬೆಂಗಳೂರು – ಯಲಹಂಕ ನಡುವೆ ಪ್ರಯಾಣಿಸುವ ಪ್ರಯಾಣಿಕರು ಎಲೆಕ್ಟ್ರಿಕ್ ರೈಲು (ಮೆಮು) ಸಂಚಾರವಿಲ್ಲದೆ ಹತಾಶರಾಗಿದ್ದಾರೆ. ಕೋಲಾರದವರೆಗೆ ಮೆಮು ರೈಲು ಓಡಿಸಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ, ಮೆಮು ರೈಲುಗಳ ಕೊರತೆಯಿಂದ ಈ ಬೇಡಿಕೆ ಈಡೇರಿಸಲು ರೈಲ್ವೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಆದರೂ, ಇತ್ತೀಚೆಗೆ, ವಿನಂತಿಯ ಮೇಲೆ ಬೆಂಗಳೂರು ವಿಭಾಗವು ಅಯೋಧ್ಯೆಗೆ ಮೆಮು ರೈಲೊಂದನ್ನು ಕಳಿಹಿಸಿದೆ ಎಂದು ತಿಳಿದುಬಂದಿದೆ.

ಚಿಂತಾಮಣಿ ಮೂಲದ ಆರ್‌ಟಿಐ ಕಾರ್ಯಕರ್ತ ಅಮೃತಗೌಡ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೈಋತ್ಯ ರೈಲ್ವೇ ಉತ್ತರಿಸಿದೆ. “ವಿನಂತಿಯ ಮೇರೆಗೆ ಅಯೋಧ್ಯೆಗೆ ಒಂದು ಮೆಮು ರೈಲನ್ನು ಕಳುಹಿಸಲಾಗಿದೆ. ಅದನ್ನು ಇನ್ನೂ ಹಿಂದಿರುಗಿಸಲಾಗಿಲ್ಲ. ಅಲ್ಲದೆ, ಕೋಲಾರ ರೈಲು ನಿಲ್ದಾಣದಲ್ಲಿ ಮೆಮು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ” ಎಂದು ಹೇಳಿದೆ.

ಏಳು ತಿಂಗಳ ಹಿಂದೆ ಕೋಲಾರ ಮೂಲಕ ಯಲಹಂಕ ಮತ್ತು ಬಂಗಾರಪೇಟೆ ನಡುವಿನ 149 ಕಿ.ಮೀ ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೀಸೆಲ್ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಬದಲಾಯಿಸಬೇಕು. ಮೆಮು ರೈಲುಗಳನ್ನು ಓಡಿಸಬೇಕು. ಈ ರೈಲುಗಳು ಹೆಚ್ಚಿನ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುತ್ತವೆ. ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Advertisements

ಪ್ರಸ್ತುತ ಮೆಮು ರೈಲುಗಳು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಮಾತ್ರ ಚಲಿಸುತ್ತಿವೆ. ಅವುಗಳನ್ನು ಕೋಲಾರದವರೆಗೆ ವಿಸ್ತರಿಸಲು ರೈಲ್ವೇ ಮುಂದಾಗಿಲ್ಲ.

“ಕೋಲಾರದವರೆಗೆ ಮೆಮು ಓಡಿಸಲು ನಮ್ಮಲ್ಲಿ ಸಾಕಷ್ಟು ಮೆಮು ರೈಲುಗಳು ಇಲ್ಲ. ಇದಲ್ಲದೆ, ಇತ್ತೀಚೆಗೆ, ಅಯೋಧ್ಯೆಗೆ ಮೆಮು ರೈಲನ್ನು ಕಳುಹಿಸಲಾಗಿದೆ. ಆದರೆ, ಅದು ಮರಳಿಬಂದಿಲ್ಲ. ನಾವು ಅದನ್ನು ಬಳಸಬಹುದಿತ್ತು. ಆ ಮೆಮು ಬಳಕೆಯಿಂದ ದಿನಕ್ಕೆ ಕನಿಷ್ಠ 2-3 ಟ್ರಿಪ್‌ ಓಡಿಸಬಹುದು. ಈಗ ಅದೂ ಸಾಧ್ಯವಿಲ್ಲ” ಎಂದು ರೈಲ್ವೆ ಮೂಲಗಳು ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.

“ಮೆಮು ರೈಲಿನ ಕೊರತೆಯೊಂದೇ ಕಾರಣವಲ್ಲ. ಸಿಬ್ಬಂದಿ ಕೊರತೆಯಿಂದ ನಾವೂ ಬಳಲುತ್ತಿದ್ದೇವೆ. ನಾವು ಕೋಲಾರದವರೆಗೆ ಮೆಮು ರೈಲುಗಳನ್ನು ಪ್ರಾರಂಭಿಸಿದರೆ, ಅವುಗಳನ್ನು ನಿರ್ವಹಿಸಲು ಮತ್ತು ವಿದ್ಯುತ್ ಉಪಕರಣಗಳನ್ನು ಸಹ ರಕ್ಷಿಸಲು ಕೋಲಾರ ರೈಲು ನಿಲ್ದಾಣದಲ್ಲಿ ನಮಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಸದ್ಯಕ್ಕೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ,” ಎಂದು ರೈಲ್ವೇ ವಿಭಾಗ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಹಾಸನ | ಅಲೆಮಾರಿ ಸಮುದಾಯದ ಜನರ ಮೇಲೆ ಸವರ್ಣೀಯರ ದೌರ್ಜನ್ಯ; ಪ್ರಕರಣ ದಾಖಲು

ಕೋಲಾರದಿಂದ ಯಲಹಂಕಕ್ಕೆ ಪ್ರಯಾಣಿಸುವವರಲ್ಲಿ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಸೇರಿದ್ದಾರೆ. ಮೆಮು ರೈಲು ಓಡಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ-ಕೋಲಾರ ರೈಲು ಬಳಕೆದಾರರ ಸಂಘದ ಸದಸ್ಯ ಯು ಯಧುಕೃಷ್ಣ ಹೇಳಿದ್ದಾರೆ.

“ನಾಲ್ಕು ಡೆಮು ರೈಲುಗಳು ಬೆಂಗಳೂರು-ಕೋಲಾರ ನಡುವೆ ಓಡುತ್ತಿವೆ. ಅವು ಕೆಎಸ್‌ಆರ್ ಬೆಂಗಳೂರು – ಯಲಹಂಕ – ಕೋಲಾರಕ್ಕೆ ಸಂಪರ್ಕಿಸುತ್ತವೆ. ಅಲ್ಲದೆ, ಒಂದು ರೈಲು ಹಾಸನದವರೆಗೆ ಸಹ ಚಲಿಸುತ್ತದೆ. ಡೆಮು ರೈಲುಗಳಲ್ಲಿ ಕೋಲಾರದಿಂದ ಬೆಂಗಳೂರಿಗೆ 3 ಗಂಟೆಗಳ ಕಾಲ ಪ್ರಯಾಣ. ಡೆಮು ರೈಲುಗಳಲ್ಲಿ ಅನೇಕ ಪ್ರಯಾಣಿಕರಿಗೆ ಸೀಟುಗಳೇ ಇರುವುದಿಲ್ಲ. ಅವರು ತಮ್ಮ ಕೆಲಸದ ಸ್ಥಳವನ್ನು ತಲುಪುವ ಹೊತ್ತಿಗೆ ದಣಿದುಹೋಗುತ್ತಾರೆ. ಒಂದು ಡೆಮು ರೈಲಿನಲ್ಲಿ ಎಂಟು ಕೋಚ್‌ಗಳು ಇರುತ್ತವೆ ಮತ್ತು ಗರಿಷ್ಠ 800 ಪ್ರಯಾಣಿಕರಿಗೆ ಮಾತ್ರ ಕುಳಿತುಕೊಳ್ಳಲು ಆಸನಗಳು ಇರುತ್ತವೆ. ಆದರೆ, 16 ಬೋಗಿಗಳ ಮೆಮು ರೈಲಿನಲ್ಲಿ ಆರಾಮದಾಯಕವಾಗಿ 1,000 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. ಅಲ್ಲದೆ, ಮೆಮು ವೇಗವಾಗಿ ಚಲಿಸುವುದರಿಮದ ಪ್ರಯಾಣದ ಸಮಯವೂ ಉಳಿಯುತ್ತದೆ” ಎಂದು ಯಧುಕೃಷ್ಣ ವಿವರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X