ಬುಡಕಟ್ಟು ಸಮುದಾಯದ 23 ವರ್ಷದ ಮಹಿಳೆಯೊಬ್ಬರು ತಮಿಳುನಾಡಿನ ಸಿವಿಲ್ ನ್ಯಾಯಾಧೀಶೆಯಾಗಿ ನೇಮಕವಾಗಿದ್ದಾರೆ.
ತಮಿಳುನಾಡು ಲೋಕಸೇವಾ ಆಯೋಗ ಹಮ್ಮಿಕೊಂಡ ಪರೀಕ್ಷೆಯಲ್ಲಿ ಬುಡಕಟ್ಟು ಸಮುದಾಯದ 23 ವರ್ಷದ ಮಹಿಳೆ ಶ್ರೀಪತಿ ಈ ಮಹತ್ವದ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಯಾವುದೇ ಹೆಚ್ಚು ಸೌಕರ್ಯವಿಲ್ಲದ ಗಿರಿಧಾಮದ ಗ್ರಾಮದ ಬುಡಕಟ್ಟು ಸಮುದಾಯದ ಯುವ ಮಹಿಳೆಯೊಬ್ಬರು ಈ ಸಾಧನೆ ಮಾಡಿರುವುದಕ್ಕೆ ಸಂತಸವಾಗಿದೆ. ಈ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಹಾಗೂ ಮಹಿಳೆಯ ಸಾಧನೆಗೆ ಬೆನ್ನುಲುಬಾಗಿ ನಿಂತ ಆಕೆಯ ತಾಯಿ ಮತ್ತು ಪತಿಗೂ ಕೂಡ ಧನ್ಯವಾದ ತಿಳಿಸುತ್ತೇನೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ಹಿಂಜರಿಕೆಪಡುವ ತಮಿಳುನಾಡಿನವರಿಗೆ ಶ್ರೀಪತಿಯವರ ಸಾಧನೆ ನಿಜಕ್ಕೂ ಮಾದರಿಯಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?
“ದ್ರಾವಿಡ ಮಾದರಿಯ ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಇತ್ತೀಚಿಗೆ ತಮಿಳು ಮಾಧ್ಯಮ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನೀತಿಯನ್ನು ಜಾರಿಗೊಳಿಸಿತ್ತು.ಇದರಿಂದಾಗಿಯೇ ಶ್ರೀಪತಿಯಂಥವರು ನ್ಯಾಯಾಧೀಶರಾಗಲು ಸಾಧ್ಯವಾಗಿದೆ” ಎಂದು ಸ್ಟಾಲಿನ್ ತಿಳಿಸಿದ್ದಾರೆ.
ತಿರುವಣ್ಣಮಲೈ ಜಿಲ್ಲೆಯ ಜವುಧು ಗಿರಿಧಾಮದ ಪುಲಿಯೂರು ಗ್ರಾಮದವರಾದ ಶ್ರೀಪತಿ ಅವರು ನವೆಂಬರ್ 2023ರಲ್ಲಿ 200 ಕಿ.ಮೀ ದೂರದ ಚೆನ್ನೈಗೆ ಆಗಮಿಸಿ ಸಿವಿಲ್ ನ್ಯಾಯಾಧೀಶೆಯ ಪರೀಕ್ಷೆ ಬರೆದಿದ್ದರು.
ಪರೀಕ್ಷೆ ಇರುವ ಎರಡು ದಿನದ ಹಿಂದಷ್ಟೆ ಶ್ರೀಪತಿ ಮಗುವಿಗೆ ಜನ್ಮ ನೀಡಿದ್ದರು. ಆರೋಗ್ಯದ ಕಠಿಣ ಸಂದರ್ಭದಲ್ಲಿ ದೃಢ ನಿರ್ಣಯ ತೆಗೆದುಕೊಂಡು ಚೆನ್ನೈಗೆ ಆಗಮಿಸಿ ಪರೀಕ್ಷೆ ಬರೆದಿದ್ದರು.