ಒಂದೂವರೆ ತಿಂಗಳ ಹಸುಗೂಸು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಬಿಲ್ಲುಕೇರಿ ಆಲಂದೂರು ಎಂಬಲ್ಲಿ ನಡೆದಿದೆ.
ಆಲಂದೂರು ನಿವಾಸಿ ಅನಿತಾ ಎಂಬವವರ ಮಗು ಸಂಕೇತ ಮೃತ ಕಂದಮ್ಮ. ಅನಿತಾ ಅವರಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಮಗು ಆರೋಗ್ಯವಾಗಿತ್ತು ಎನ್ನಲಾಗಿದೆ.
ಮನೆಯಲ್ಲಿ ಮಗುವಿಗೆ ಎದೆಹಾಲು ಕುಡಿಸಿ ಮಲಗಿಸಲಾಗಿತ್ತು. ಬಳಿಕ ಮಗುವಿನ ಮೈ ತಣ್ಣಗಾಗಿ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ. ಕೂಡಲೇ ಮಗುವನ್ನು ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಕೀಯ ಅಜೆಂಡಾ ಬೇಯಿಸಿಕೊಳ್ಳಲು ವಿದ್ಯಾರ್ಥಿಗಳ ದುರುಪಯೋಗ ಆಘಾತಕಾರಿ: ಎಸ್‌ಐಓ ದಕ್ಷಿಣ ಕನ್ನಡ ಖಂಡನೆ
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.