ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸೇಫ್ ಸಿಟಿಯಾಗಿದ್ದ ಬೆಂಗಳೂರು ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಕ್ರೈಮ್ ಸಿಟಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹರಿಹಾಯ್ದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದಕ್ಕೆ ಉದಾಹರಣೆ, ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬಂದಿರುವ ಕೊಲೆ ಬೆದರಿಕೆ. ಎಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರುತ್ತದೋ, ಅಲ್ಲಿಗೆ ಬಂಡವಾಳ ಹರಿದು ಬರುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಹೂಡಿಕೆ ಬರುತ್ತಿತ್ತು, ಆದರೆ ಈಗ ಹೂಡಿಕೆದಾರರ ಸಂಖ್ಯೆ ಕಡಿಮೆಯಾಗಿದೆ” ಎಂದರು.
“ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ಈಗ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಂಬರ್ ಒನ್ ಕ್ರೈಮ್ ಸಿಟಿ ಆಗಿದೆ. ಸೈಬರ್ ವಂಚನೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. 438 ಕೋಟಿ ರೂಪಾಯಿ ಸೈಬರ್ ವಂಚನೆ ಆಗಿದೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುಚ್ಚಿಕೊಂಡಿದ್ದ ಭಯೋತ್ಪಾದಕರು, ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಪಿಎಫ್‌ಐ ಸಂಘಟನೆಯವರ ಕೇಸು ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ರಾಜಾರೋಷವಾಗಿ ಓಡಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?
“ಕೋಲಾರದಲ್ಲಿ ರಾಜಾರೋಷವಾಗಿ ತಲ್ವಾರ್ ಹಾಕಿದ್ದಾರೆ. ಹಿಂದೆಲ್ಲ ಜನ್ಮದಿನ ಕಾರ್ಯಕ್ರಮಕ್ಕೆ ಕಟೌಟ್, ಫ್ಲೆಕ್ಸ್ ಹಾಕುತ್ತಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.
“ಪೊಲೀಸ್ ಇಲಾಖೆಯವರು ಚಿಕ್ಕಮಗಳೂರಿನಲ್ಲಿ ಸ್ಟ್ರೈಕ್ ಮಾಡಿದರೆ ಆ ಮಾಹಿತಿಯೇ ಸರ್ಕಾರಕ್ಕೆ ಗೊತ್ತಿಲ್ಲ. ಸ್ಟ್ರೈಕ್ ಮಾಡಿದವರ ಮೇಲೆ ಸರ್ಕಾರ ಕ್ರಮವನ್ನು ತೆಗೆದುಕೊಂಡಿಲ್ಲ. ಬೆಳಗಾವಿಯಲ್ಲಿ ನಾವು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆವು. ಆದರೆ, ಬೆಳಗಾವಿಯಲ್ಲಿ ಚಳಿ ಜಾಸ್ತಿ ಇತ್ತೇನೋ, ನೀವು ನಮ್ಮ ಕಡೆ ತಿರುಗಿಯೂ ನೋಡಲಿಲ್ಲ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭ್ರಮೆಯಲ್ಲಿ ಇದ್ದಾರೆ ಮಾಜಿಗಳು,,, ಬಿಬಿಎಂಪಿ ರೆಕಾರ್ಡ್ ರೂಂ ಗೆ ಬೆಂಕಿ ಬಿದ್ದಿದ್ದು ಯಾವಾಗ,,ಕಾರಣವೇನಾದರೂ ಬಹಿರಂಗ ಆಯ್ತಾ,, ಅಧಿಕಾರದಿಂದ ಇಳಿದ ತಕ್ಷಣ ಹಾರ್ಡ್ ಡಿಸ್ಕ್ ನಿಂದ ಎಲ್ಲವೂ ಅಳಿಸಿಹೋಗುವುದು ,,, ಅಧಿಕಾರ ಇಲ್ಲದಾಗ ಇರಲಾರದ ತತ್ವಗಳು ನೆನಪಿಗೆ ಬರುವವು,, ಅಧಿಕಾರ ಇದ್ದಾಗ ಬಳಸಿಕೊಳ್ಳುವುದೊಂದೆ ಕೆಲಸ,,, ಎಂ ಎಲ್ ಸಿ ಅಭ್ಯರ್ಥಿ ಆಯ್ಕೆ ರಾಜ್ಯದ ಭಯಂಕರ ನಾಯಕರಿಗೆ ಮಾಹಿತಿ ಇಲ್ಲವಂತೆ,, ರಿಮೋಟ್ ಕಂಟ್ರೋಲ್ ನಲ್ಲಿ,, ಆಗಿದೆಯೆಂದು ಸುದ್ದಿ ಓಡಾಡುತ್ತಿದೆ,,, ಪಕ್ಷದಲ್ಲಿ ನಿಮ್ಮಗಳ ಪಾತ್ರ ಏನು ಜನರಿಗೆ ಬಹಿರಂಗವಾಗಿದೆ