ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಕಟ್ಟಡದ ಕಾಮಗಾರಿ ಅಪೂರ್ಣವಾಗಿದ್ದರೂ, ತರಾತುರಿಯಲ್ಲಿ ಫೆ.17ರಂದು ಉದ್ಘಾಟನೆ ಮಾಡಲಾಗುತ್ತಿದೆ. ಉದ್ಘಾಟನೆಯನ್ನು ಮುಂದಕ್ಕೆ ಹಾಕಿ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರಸಲ್ಲಿಸಿ ಮಾತನಾಡಿದ ಮರೆಪ್ಪ ಚಟ್ಟೇರಕರ್, ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಸಂಕಿರ್ಣವನ್ನು ಇದೆ ತಿಂಗಳು ಫೆಬ್ರವರಿ 17ರಂದು ಉದ್ಘಾಟನೆ ಮಾಡುವುದಕ್ಕೆ. ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ದಿನೇಶಕುಮಾರ ರವರು ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ.
ಜಿಲ್ಲಾ ನ್ಯಾಯಾಲಯದ ಕಟ್ಟಡವನ್ನು ಪೂರ್ಣ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ತರಾತುರಿಯಾಗಿ ಉದ್ಘಾಟನೆ ಮಾಡಲು ಮುಂದಾಗಿದ್ದು, ಸೂಕ್ತವಲ್ಲ. ಕಟ್ಟಡ ಉದ್ಘಾಟನೆಗಾಗಿ ಜಿಲ್ಲೆಯ ಜನ ಶಾಸಕರು, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡಿದ್ದಾರೆ. ಆದರೆ, ಈ ಜಿಲ್ಲಾ ನ್ಯಾಯಾಲಯಕ್ಕೆ ಸ್ಥಳ ಗುರುತಿಸಿಕೊಟ್ಟು ಖರ್ಗೆಜಿಯವರನ್ನು ಆಹ್ವಾನ ನೀಡದೇ ಉದ್ಘಾಟನೆ ದಿನಾಂಕ ಪ್ರಕಟಿಸಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಗಳಿಗೂ ಸಹ ಆಹ್ವಾನ ಇಲ್ಲ ಎಂದು ಆರೋಪಿಸಿದರು.
ಒಟ್ಟಾರೆ, ನ್ಯಾಯಮೂರ್ತಿಗಳಾದ ದಿನೇಶಕುಮಾರವರು ತಮ್ಮ ಅಧಿಕಾರವಧಿ ಮುಗಿಯುವುದರೊಳಗಾಗಿ ಈ ಜಿಲ್ಲಾ ನ್ಯಾಯಾಲಯ ಸಂಕಿರ್ಣ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡುತ್ತಿದ್ದಾರೆ. ಈ ಉದ್ಘಾಟನೆಯು ರಾಜಕೀಯದಿಂದ ಕೂಡಿದೆ. ವಿನಃ ಜನ ಸಾಮಾನ್ಯರ ಹಿತದೃಷ್ಟಿಯಿಂದ ಕೂಡಿಲ್ಲ. ಅಲ್ಲದೇ ಇಲ್ಲಿನ ಹಿರಿಯ ನ್ಯಾಯವಾದಿಗಳು ನ್ಯಾಯಾಲಯಕ್ಕೆ ಖರ್ಗೆಯವರ ಯಾವುದೇ ಕೊಡುಗೆ ಇರುವುದಿಲ್ಲವೆಂದು ಹೇಳುತ್ತಿದ್ದಾರೆ.
ಇಲ್ಲಿರುವಂತಹ ವಕೀಲರು ಎ.ಜಿ.ಪಿ ಮತ್ತು ಡಿ.ಜಿ.ಪಿ ಮತ್ತು ಇತರೆ ಹುದ್ದೆಗಳನ್ನು ಪಡೆದುಕೊಳ್ಳಲು ಖರ್ಗೆಯವರೇ ಬೇಕು ಆದರೆ, ಉದ್ಘಾಟನೆಗೆ ಅವರು ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ.
ಸಚಿವರಾದ ಪ್ರಿಯಾಂಕ ಖರ್ಗೆಯವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಇಲ್ಲಿನ ಸ್ಥಳೀಯ ನ್ಯಾಯವಾದಿಗಳು ಅವರ ಶವಯಾತ್ರೆ ಮಾಡಿ ಅವಮಾನ ಮಾಡಿ ಪ್ರತಿಭಟನೆ ಮಾಡಿದ್ದರು, ಅದನ್ನು ಅವರು ಲೆಕ್ಕಿಸದೇ ಕೂಡಲೇ ಜಿಲ್ಲಾ ಸಂಕಿರ್ಣಕ್ಕಾಗಿ ನಿವೇಶನ ಒದಗಿಸಿ ಕೊಟ್ಟಿದ್ದಾರೆ.
ಅಂಥವರನ್ನು ಉದ್ಘಾಟನೆಗೆ ಕೈ ಬಿಟ್ಟು ಇನ್ನೂ 50 ರಷ್ಟು ಬಾಕಿಯಲ್ಲಿರುವ ಕಾಮಗಾರಿಯನ್ನು ಬದಿಗೊತ್ತಿ ಉದ್ಘಾಟನೆ ಮಾಡುತ್ತಿರುವುದು ಸಮಂಜಸವಲ್ಲ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ʼComplition Certificateʼ ಪಡೆದುಕೊಂಡ ನಂತರ ಉದ್ಘಾಟನೆ ಮಾಡುವುದು ಅಲ್ಲಿಯವರೆಗೆ ಉದ್ಘಾಟನೆ ಮಾಡಕೂಡದು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸದರಿ ಕಟ್ಟಡ ಕಾಮಗಾರಿಗಾಗಿ 9 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುತ್ತಾರೆ. ಆದರೆ ಅವರಿಗೂ ಸಹ ಆಹ್ವಾನ ಮಾಡದೇ ಉದ್ಘಾಟನೆ ಮಾಡುವುದು ಸಮಂಜಸವಲ್ಲ. ಜಿಲ್ಲಾ ನ್ಯಾಯಾಲಯದ ಮುಖ್ಯದ್ವಾರ ಸರಿಯಿಲ್ಲ, ಅದನ್ನು ಬದಲಾವಣೆ ಮಾಡಬೇಕು. ಇಂತಹ ಇನ್ನೂ ಅನೇಕ ಕಾಮಗಾರಿಗಳಾದ ರಸ್ತೆ, ಚರಂಡಿ, ಕಾಂಪೌಂಡ್ ಬಾಕಿ ಇದೆ.
ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಪ್ರಥಮ ದರ್ಜೆ 676/2018 ಪ್ರಕರಣ ಬಾಕಿ ಇರುತ್ತದೆ. ಅವರನ್ನು ವೇದಿಕೆಯಲ್ಲಿ ಕೂಡಿಬಾರದು ಎಂದು ಹೈಕೋರ್ಟ ನಿರ್ದೇಶನವನ್ನು ಗಾಳಿಗೆ ತೂರಿದಂತಿದೆ. ಆದ್ದರಿಂದ, ತರಾತುರಿಯಲ್ಲಿ ಫೆ.17ರಂದು ಉದ್ಘಾಟನೆ ಮಾಡುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕಿರ್ಣದ ಉದ್ಘಾಟನೆಯನ್ನು ತಾವುಗಳು ದಯಮಾಡಿ ಮುಂದಕ್ಕೆ ಹಾಕಬೇಕೆಂದು ಎಂದು ಮನವಿ ಮಾಡಿದರು.
ಒಂದು ವೇಳೆ ಮುಂದಕ್ಕೆ ಹಾಕದೇ ಹೋದಲ್ಲಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಪರವಾಗಿ ದಾವೆ ಹೂಡಲಾಗುವುದೆಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ನಾಗಣ್ಣ ಬಡಿಗೇರ, ಮರೆಪ್ಪ ಚಟ್ಟೇರಕರ್, ಶಿವಪುತ್ರ ಜವಳಿ, ಶರಣು ನಟೇಕರ್, ಪ್ರಭು ಬುಕ್ಕಲ್, ಚಂದಪ್ಪ ಮುನಿಯಪ್ರನೋರ್, ಕಾಶೀನಾಥ್ ನಟೇಕರ, ರಾಹುಲ್ ಕೊಲ್ಲೂರಕರ್, ನಿಂಗಣ್ಣ ಬೀರನಾಳ, ಸಂಪತ್ ಚಿನ್ನಾಕಾರ, ಮಲ್ಲಿನಾಥ್ ಸುಂಗಲಕರ್, ಅಚೀಜಸಾಬ್ ಐಕೂರ, ಮಲ್ಲಿಕಾರ್ಜುನ ಕುರಕುಂದಿ, ಸೈದಪ್ಪ ಕೋಲೂರ್, ತಾಯಪ್ಪ ಬಂಡಾರಿ, ಹಣಮಂತ್ರಾಯ ಮಿಲ್ಟ್ರಿ, ಭೀಮರಾಯ ಸುಂಗಲಕರ್, ಆನಂದ ಗೋಪಾಲಪೂರ್, ಗೌತಮ್ ಅರಿಕೇರಿ ಉಪಸ್ಥಿತರಿದ್ದರು.