ಆಲಮಟ್ಟಿ ಉದ್ಯಾನದ ನಿರ್ವಹಣೆ ಕಾಮಗಾರಿಗೆ ಇ-ಟೆಂಡರ್ ನೀಡುವ ಪ್ರಕ್ರಿಯೆನ್ನು ಬಂದ್ ಮಾಡಿದೆ. ಫೆಬ್ರವರಿ ತಿಂಗಳ 24ರಂದು ಅಧಿವೇಶನ ಮುಗಿದ ನಂತರ ಸಂಭಂದಪಟ್ಟ ಅಧಿಕಾರಿಗಳ ಜತೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಶಾಶ್ವತ, ಸೂಕ್ತವಾದ ತೀರ್ಮಾನ ತೆಗೆದುಕೂಳ್ಳಲಾಗುವುದು ಎಂದು ಸಚಿವ ಶಿವಾನಂದ ಪಾಟಿಲ್ ಅವರು ಭರವಸೆ ನೀಡಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿ ಗಾರ್ಡನ್ ಡಿ ಗ್ರೂಪ್ ನೌಕರರ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಶುಕ್ರವಾರ 4ನೇ ದಿನದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರು ಆಲಮಟ್ಟಿ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಕರೆ ಮೂಲಕ ತಿಳಿಸಿದರು.
ಸೂಪರ್ಡೆಂಟ್ ಎಂಜಿನಿಯರ್ ಡಿ ಬಸವರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಾಗಶೆಟ್ಟಿ, ವಲಯ ಅರಣ್ಯ ಅಧಿಕಾರಿ ಮಹೇಶ್ ಪಾಟಿಲ್ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಸಚಿವರ ಭರವಸೆ ಮೇರೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮೂಂದೂಡಿದ್ದಾರೆ.
ಎಐಯುಟಿಯುಸಿ ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಚ್ ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ “ಆಲಮಟ್ಟಿ ಉದ್ಯಾನದ ನಿರ್ವಹಣೆ ಕಾಮಗಾರಿಗೆ ಟೆಂಡರ್ ಕರೆದಿದ್ದರಿಂದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಆಲಮಟ್ಟಿ ಗಾರ್ಡನ್ ಡಿ ಗ್ರೂಪ್ ನೌಕರರ ಸಂಘಟನೆಯಿಂದ ಫೆಬ್ರವರಿ 12ರಿಂದ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆಯಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ರಾಮನಗರ | ಜಾತಿ ನಿಂದನೆ ಆರೋಪ; 11 ಮಂದಿ ವಕೀಲರ ವಿರುದ್ಧ ಕ್ರಮಕ್ಕೆ ಆಗ್ರಹ
ದ್ಯಾಮಣ್ಣ ಬಿರಾದಾರ, ಬಾಸು ವಾಲಿಕಾರ, ಸಂಗಣ್ಣ ಯರನಾಳ, ಅನಿತಾ ಜಾದವ ಮೀನಾಕ್ಷಿ ರಾಠೋಡ, ಯಲ್ಲವ್ವ ಮೇಟಿ ಇದ್ದರು.