ಭಾರತದಿಂದ ಬ್ರಿಟಿಷರನ್ನು ಓಡಿಸುವ ಹೋರಾಟದಲ್ಲಿ ಮುಸ್ಲಿಂ ಸಮುದಾಯದವರೂ ಹೆಚ್ಚಾಗಿ ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಮುಸ್ಲಿಂ ಸಮುದಾಯದವರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದಲ್ಲಿ ಸಂತೋಷ್ ಲಾಡ್ ಪೌಂಡೇಶನ್ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. “ನಮ್ಮ ಭಾರತ ದೇಶದಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ದೇಶ ಕಟ್ಟುವ ಕೆಲಸಕ್ಕೆ ಮುಸಲ್ಮಾನರು ಮುಂದೆ ಬರಬೇಕು. ಎಲ್ಲಿಯವರೆಗೆ ಹಿಂದೂ ಮುಸ್ಲಿಂ ಸಮಾಜದವರು ಅಣ್ಣ ತಮ್ಮಂದಿರಾಗಿ ಇರುತ್ತಾರೋ ಅಲ್ಲಿಯವರೆಗೆ ಈ ದೇಶ ಒಡೆಯಲು ಸಾಧ್ಯವಿಲ್ಲ” ಎಂದರು
ನಮ್ಮ ದೇಶ ಭಾರತಕ್ಕೆ ಗಂಡಾಂತರ ಎದುರಾಗಿದೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿಯೇ ರಾಜಕೀಯ ಮಾಡುವುದನ್ನು ನಿಲ್ಲಿಸಲು ನಾವು ನೀವೆಲ್ಲರೂ ಜವಾಬ್ದಾರರು ಎಂದು ಹೇಳಿದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಂತೋಷ್ ಲಾಡ್ ಪೌಂಡೇಶನ್ ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತಿಳಿಸಿದರು.
ಅಂಜುಮನ್ ಕಾರ್ಯದರ್ಶಿ ಖಾದೀರ್ ನಜೀಮ ಸರಗಿರೋ ಅವರು ಪರಿಚಯಿಸಿದರು. ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ ಚಾನೆಲ್‌ನ ಸಂಪಾದಕ ಎಂ.ಕೆ.ನದಾಫ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಮುಸ್ಲಿಂರನ್ನು ಸಂತೋಷ್ ಲಾಡ್ ಸನ್ಮಾನಿಸಿದರು. ಡಾ.ಖೈರುದ್ದೀನ ಶೇಖ ಕಾರ್ಯಕ್ರಮ ನಿರೂಪಿಸಿದರು, ಸಾವಿರಾರು ಮುಸಲ್ಮಾನರು ಭಾಗವಹಿಸಿದ್ದರು.