ಆದಾಯ ತೆರಿಗೆ ಇಲಾಖೆಯಿಂದ ರದ್ದಾಗಿದ್ದ ಕಾಂಗ್ರೆಸ್ ಪಕ್ಷದ ಹಲವು ಖಾತೆಗಳು ಒಂದು ಗಂಟೆಯ ನಂತರ ಮರಳಿ ಚಾಲ್ತಿಗೊಂಡಿವೆ. ಪಕ್ಷವು ದೆಹಲಿಯ ಆದಾಯ ತೆರಿಗೆ ಇಲಾಖೆಯ ಮೇಲ್ಮನವಿ ಮಂಡಳಿಗೆ ಮನವಿ ಸಲ್ಲಿಸಿದ ನಂತರ ಕಾರ್ಯಗತಗೊಂಡಿವೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಖಜಾಂಜಿ ಅಜಯ್ ಮಕೇನ್ “ ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅಡ್ಡಿಪಡಿಸುವ ಪೆಟ್ಟಾಗಿದೆ. ಇದು ಒಂದು ಪಕ್ಷದ ಆಡಳಿತವಾಗಿದೆ. ಪ್ರಮುಖ ವಿರೋಧ ಪಕ್ಷವನ್ನು ಅಪೋಷಣ ತೆಗೆದುಕೊಳ್ಳಲು ಹೊರಟಿದ್ದಾರೆ. ನ್ಯಾಯಾಂಗ, ಮಾಧ್ಯಮ ಹಾಗೂ ಜನರಿಂದ ನಾವು ನ್ಯಾಯವನ್ನು ಕೇಳುತ್ತಿದ್ದೇವೆ”ಎಂದು ಹೇಳಿದರು.
“ಮನ್‌ಮೋಹನ್ ಸಿಂಗ್ ಸಮಿತಿ ವರದಿಯ ಆಧಾರದ ಮೇಲೆ ನಾವು ನಮಗೆ ಕೊಡುಗೆ ನೀಡಿರುವ ಎಲ್ಲ ಶಾಸಕ, ಸಂಸದರ ಹೆಸರನ್ನು ನೀಡಿದ್ದೇವೆ. ಪ್ರಸ್ತುತ ನಮ್ಮ ಬಳಿ ಖರ್ಚು ಮಾಡಲು ಹಣವಿಲ್ಲ. ಇದರಿಂದ ವಿದ್ಯುತ್ ಶುಲ್ಕ, ಸಿಬ್ಬಂದಿ ವೇತನ, ನಮ್ಮ ನ್ಯಾಯ ಯಾತ್ರೆ ಪ್ರತಿಯೊಂದರ ಮೇಲೆ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಇದು ಷ್ಪಷ್ಟವಾಗಿದೆ. ನಾವುಒಂದು ಪಾನ್ ಹಾಗೂ ನಾಲ್ಕು ಖಾತೆಯೊಂದಿಗೆ ಎಲ್ಲವನ್ನು ಸಂಪರ್ಕಗೊಳಿಸಿದ್ದೇವೆ” ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
ಖಾತೆ ರದ್ದುಗೊಳಿಸಿದ್ದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, “ಅಸಂವಿದಾನಿಕ ಹಣವನ್ನು ಸಂಗ್ರಹಿಸಿ ಬಿಜೆಪಿ ಅದನ್ನು ಚುನಾವಣೆಗೆ ಬಳಸಿಕೊಂಡಿದೆ. ಆದರೆ ನಾವು ಕ್ರೌಡ್‌ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸಿದ್ದೇವೆ. ಭವಿಷ್ಯದಲ್ಲಿ ಚುನಾವಣೆ ಇಲ್ಲದ ರೀತಿಯಲ್ಲಿ ಮಾಡುತ್ತಿವೆ ಎಂಬುದನ್ನು ನಾವು ಈ ಮೊದಲೇ ಹೇಳಿದ್ದೇವೆ. ಬಹು ಪಕ್ಷ ಪದ್ಧತಿಯನ್ನು ಕಾಪಾಡಿ ಎಂದು ನಾವು ನ್ಯಾಯಾಂಗಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ನಾವು ಅನ್ಯಾಯ ಹಾಗೂ ಸರ್ವಾಧಿಕಾರದ ವಿರುದ್ಧ ಬೀದಿಗಳಲ್ಲಿ ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ.
“ಅಧಿಕಾರದ ಅಮಲಿನಲ್ಲಿ ಮೋದಿ ಸರ್ಕಾರ ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವ ಮುನ್ನ ದೇಶದ ಅತ್ಯಂತ ದೊಡ್ಡ ವಿಪಕ್ಷ ಕಾಂಗ್ರೆಸ್‌ನ ಖಾತೆಗಳನ್ನು ರದ್ದುಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು” ಎಂದು ಖರ್ಗೆ ಹೇಳಿದ್ದಾರೆ.
45 ದಿನಗಳ ತಡವಾಗಿ ಆದಾಯ ಇಲಾಖೆ ರಿಟರ್ನ್‌ಅನ್ನು ಸಲ್ಲಿಸಿರುವುದಕ್ಕೆ ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದ್ದು, ಇದು ತೆರಿಗೆ ಇಲಾಖೆಯಿಂದ ಉಂಟಾಗಿರುವ ನಿಯಯದ ಉಲ್ಲಂಘನೆ ಹಾಗೂ ಕೇಂದ್ರದ ಹಸ್ತಕ್ಷೇಪ ಎಂದು ಕಾಂಗ್ರೆಸ್ ಆರೋಪಿಸಿದೆ.