3 ಲಕ್ಷದ 71 ಸಾವಿರ ಕೋಟಿ ದಾಖಲೆಯ ಬಜೆಟ್ ಮಂಡಿಸಿದ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ, ಭಾಗ್ಯಗಳ ಸರದಾರ ಸಿದ್ದರಾಮಯ್ಯನವರ ಬಜೆಟ್ ಅತ್ಯಂತ ಜನಪ್ರಿಯವಾಗಿದೆ. ಬಡವರ, ದೀನದಲಿತರ, ಕಾರ್ಮಿಕರ, ಮಹಿಳೆಯರ ಪರವಾದ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ರವಿಕುಮಾರ ಬಿರಾದಾರ ಬಣ್ಣಿಸಿದರು.
ವಿಜಯಪುರ ನಗರದಲ್ಲಿ ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, “ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗ್ರಹಜ್ಯೋತಿ, ಗ್ರಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿಗಳಿಗೆ ಹಣ ಒದಗಿಸಿ ನುಡಿದಂತೆ ನಡೆದಿದ್ದಾರೆ. ಅಲ್ಲದೇ ನವಕರ್ನಾಟಕ ನಿರ್ಮಾಣ ಮಾಡುವ ಹತ್ತು ಹಲವು ಘೋಷನೆಗಳನ್ನು ಮಾಡಿದ್ದು, ಇಡೀ ನಾಡಿನ ಜನತೆಯ ಬಾಳು ಬಂಗಾರವಾಗುವ ಕಾಲ ಸನ್ನಿಹಿತವಾಗಿದೆ” ಎಂದು ಹೇಳಿದರು.
“ವಿಜಯಪುರದ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್, ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು, ಬಸವನ ಬಾಗೇವಾಡಿ ಅಭಿವೃದ್ಧಿ ಮಂಡಳಿ ರಚನೆ ಹಾಗೂ ವಿಮಾನ ನಿಲ್ದಾಣ ಶೀಘ್ರ ಕಾರ್ಯ ನಿರ್ವಹಿಸುವಂತೆ ಘೋಷಿಸಿದ್ದು, ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣ ಮಾಡುವಲ್ಲಿ ಕ್ರಮ ಕೈಗೊಂಡಿರುವುದು ಜಿಲ್ಲೆ ಜನರಿಗೆ ಬಂಪರ್ ಸಿಕ್ಕಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿ ಹೊಂದಿರುವ ಬಜೆಟ್: ರಮೇಶ್ ಕಾಂಚನ್
“ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ ಮಾಸಾಶನ ಹೆಚ್ಚು ಮಾಡಿದ್ದು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಹಣ ಮಿಸಲಿಟ್ಟಿರುವುದು ಅತೀವ ಸಂತಸ ತಂದಿದೆ. ಜನಸಾಮಾನ್ಯರಿಗೆ ಯಾವುದೇ ಹೆಚ್ಚಿನ ತೆರಿಗೆ ಹೇರದೆ ಆರ್ಥಿಕ ಶಿಸ್ತು ಕಾಪಾಡಿರುವ ಬಜೆಟ್ ಇದಾಗಿದೆ” ಎಂದು ಹೇಳಿದರು.