ತನ್ನ ತಂಗಿಯ ವಿವಾಹ ನಿಶ್ಚಯ ಕಾರ್ಯಕ್ರಮಕ್ಕೆ (ಎಂಗೇಜ್ಮೆಂಟ್) ಬರಲಿಲ್ಲವೆಂದು ದುಷ್ಟನೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಸುಂಕದಕಟ್ಟೆ ಬಳಿಯ ಸೋಲ್ಲಾಪುರಮ್ಮ ದೇವಾಲಯದ ಬಳಿ ಎಂಗೇಜ್ಮೆಂಟ್‌ಗೆ ಬಾರದ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಗಲಾಟೆ ತಾರಕ್ಕೆ ಹೋಗಿದ್ದು, ಪತ್ಮಿ ದಿವ್ಯಶ್ರಿಗೆ ಆಕೆಯ ಪತಿ ಜಯಪ್ರಕಾಶ್ ಚಾಕುವಿನಲ್ಲಿ ಇರಿದಿದ್ದಾನೆ.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಜಯಪ್ರಕಾಶ್ ಮತ್ತು ದಿವ್ಯಶ್ರೀ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅವರ ವಿವಾಹಕ್ಕೆ ಪೋಷಕರು ಒಪ್ಪದ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ಆದರೆ, ಜಯಪ್ರಕಾಶ್ ಪದೇ ಪದೇ ದಿವ್ಯಶ್ರೀ ಜೊತೆಗೆ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.