ಸಿವಿಲ್ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆ ಪ್ರೋತ್ಸಾಹಕ್ಕಾಗಿ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಎಸ್‌ಎಫ್‌ಐ ಸಂಘಟನಾಕಾರರು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್‌ಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ವಿದ್ಯಾರ್ಥಿ ಮುಖಂಡ ವಿನಾಯಕ ಟಿ ಪಿ ಮಾತನಾಡಿ, “ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳ ಸೆಮಿಸ್ಟರ್ ಪರೀಕ್ಷೆಗಳು ಇದೇ ತಿಂಗಳು ಪ್ರಾರಂಭವಾಗುತ್ತಿವೆ. ಆದರೆ, ಸಿವಿಲ್ ಪೊಲೀಸ್ ಅಭ್ಯರ್ಥಿಗಳಿಗೆ ಫೆಬ್ರವರಿ 25ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆ ಬರೆಯಲು ಸುಮಾರು 500ರಿಂದ 300 ಕಿಮೀ ದೂರದ ಊರುಗಳಿಗೆ ಹೋಗಬೇಕಾಗಿದೆ. ಆದ್ದರಿಂದ, ಫೆಬ್ರವರಿ 24 ಮತ್ತು 26ರಂದು ನಡೆಯುವ ಪದವಿ ಪರೀಕ್ಷೆಗಳನ್ನು ಮುಂದೂಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟಾಪ್ ವಿತರಿಸಿದ ಸಚಿವ ಎಚ್ ಕೆ ಪಾಟಿಲ್
ಈ ಸಂದರ್ಭದಲ್ಲಿ ಸತೀಶ ಬಿ ಟಿ, ಜಗದೀಶ ಸಿ ಎಂ, ಕಿರಣ್ ಡಿ ಎಸ್, ಪ್ರವೀಣ್, ನವೀನ್, ಆಕಾಶ ಸೇರಿದಂತೆ ಇತರರು ಇದ್ದರು.