ದಾವಣಗೆರೆ | ʼಬೆಣ್ಣೆʼ ಹಚ್ಚುವುದಕ್ಕೆ ಮಾತ್ರ ಜಿಲ್ಲೆ ಸೀಮಿತವಾ? ಬಜೆಟ್‌ನಲ್ಲಿ ಜಿಲ್ಲೆ ಮರೆತ ಸಿಎಂ, ಜನರ ಬೇಸರ

Date:

Advertisements

ಸಿದ್ದರಾಮೋತ್ಸವ ಮಾಡಿದ್ದ ದಾವಣಗೆರೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್‌ನಲ್ಲಿ ಮರೆತಿದ್ದಾರೆಯೇ ಎಂದು ದಾವಣಗೆರೆ ಜನತೆ ಕೇಳುತ್ತಿದ್ದಾರೆ. ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಕೇವಲ ರಾಜಕೀಯ ಸಮಾವೇಶ ಮೂಲಕ ಜನರಿಗೆ ʼಬೆಣ್ಣೆʼ ಹಚ್ಚುವುದಕ್ಕೆ ಮಾತ್ರ ಸೀಮಿತವಾ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಜಿಲ್ಲೆಯ ಜನರ ಯಾವ ಬೇಡಿಕೆಗೂ ಮನ್ನಣೆಯನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿಲ್ಲ. ದಾವಣಗೆರೆ ಜಿಲ್ಲೆಯ ಜನರದ್ದು ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದರೂ, ಈ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ಸ್ಥಾಪನೆ, ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿ, ಹೆದ್ದಾರಿ ಅಭಿವೃದ್ಧಿ, ನೀರಾವರಿಗೆ ಸೇರಿ ವಿವಿಧ ಯೋಜನೆಯ ನಿರೀಕ್ಷೆ ಹುಸಿಯಾಗಿದೆ. ನೆರೆಯ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದ್ದರೂ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅನುದಾನ ತರುವಲ್ಲಿ ಜಿಲ್ಲಾ ಜನಪ್ರತಿನಿಧಿಗಳು ವಿಫಲವಾಗಿರುವುದು ಸ್ಪಷ್ಟ ವೈಫಲ್ಯವೆನಿಸಿದೆ.

ದಾವಣಗೆರೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಲಕ್ಷಾಂತರ ಜನರು ತನು ಮನ ಧನವೂ ಸೇರಿದಂತೆ ಸಹಕಾರ ಕೊಟ್ಟು ಸಿದ್ಧರಾಮೋತ್ಸವವನ್ನು ಯಶಸ್ಸು ಮಾಡಿ ಆ ಮೂಲಕ ಎರಡನೇ ಇನ್ನಿಂಗ್ಸ್‌ಗೆ ಸಿದ್ಧರಾಮಯ್ಯ ಅವರಿಗೆ ದಾರಿ ಮಾಡಿಕೊಟ್ಟ ಮಧ್ಯ ಕರ್ನಾಟಕ ಜಿಲ್ಲೆ ದಾವಣಗೆರೆಗೆ ಬಜೆಟ್‌ನಲ್ಲಿ ಮಹತ್ವದ್ದು ಏನೂ ಸಿಕ್ಕಿಲ್ಲ. ಸಿದ್ಧರಾಮೋತ್ಸವದ ನೆನಪಿಗಾದರೂ ಜಿಲ್ಲೆಗೆ ಏನಾದರೂ ಭರ್ಜರಿ ಕೊಡುಗೆ ನೀಡಬಹುದೆಂಬ ಲೆಕ್ಕಾಚಾರ ಹುಸಿಯಾಗಿದೆ. ಬಜೆಟ್‌ನಲ್ಲಿ ಇತರೆ ಜಿಲ್ಲೆಗಳ ಜತೆ ದಾವಣಗೆರೆ ಹೆಸರು ಒಂದೆರಡು ಕಡೆ ಕಾಣಿಸಿಕೊಂಡಿದ್ದು ಬಿಟ್ಟರೇ ಬೇರೆ ಯಾವುದೇ ಯೋಜನೆಯನ್ನು ಜಿಲ್ಲೆಗೆ ನೀಡಿಲ್ಲ.

Advertisements

ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯೂ ಕೂಡ ಒಂದು ಕೈಗಾರಿಕಾ ನಗರವಾಗಿ ಹತ್ತಿ ಗಿರಣಿಗಳಿಂದ ಮ್ಯಾಂಚೆಸ್ಟರ್ ಎಂದು ಹೆಸರಾಗಿದ್ದು, ಎರಡು ದಶಕಗಳಿಂದ ಇವು ಮುಚ್ಚಿ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದು ಕೊಂಡಿದ್ದರು. ಪ್ರತೀ ಬಜೆಟ್‌ನಲ್ಲಿ ಮತ್ತೆ ಅದರ ಮೂರು ಪುನರುತ್ಥಾನಕ್ಕೆ ಯತ್ನವಾಗಬಹುದು ಎನ್ನುವ ನಿರೀಕ್ಷೆ ಈಬಾರಿಯೂ ಹುಸಿಯಾಗಿದೆ.

ಶುರುವಾಗಿರುವ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಒಮ್ಮೆ ಸಿಎಂ ಪ್ರಸ್ತಾಪಿಸಿದರು. ಅದಕ್ಕೆ ಅನುದಾನವನ್ನೂ ಪ್ರಸ್ತಾಪ ಮಾಡಲಿಲ್ಲ. ಸರ್ಕಾರಿ ಮೆಡಿಕಲ್‌ ಕಾಲೇಜು ಮತ್ತು ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಈ ಬಾರಿ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗಬಹುದು ಎಂದೆಣಿಸಲಾಗಿತ್ತು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಿರುವುದರಿಂದ ಭೂಮಿ ಖರೀದಿ, ಇನ್ನಿತರೆ ಪ್ರಕ್ರಿಯೆಗಳ ಬಗ್ಗೆ ಸರ್ಕಾರ ಹೆಜ್ಜೆ ಇಟ್ಟು ಅನುದಾನ ಕೊಡಬಹುದು ಎಂಬ ಲೆಕ್ಕಾಚಾರವಿತ್ತು. ಅದು ಸಾಧ್ಯವಾಗಿಲ್ಲ. ಜಿಲ್ಲೆಯ 7 ಮಂದಿ ಪೈಕಿ 6 ಜನ ಕಾಂಗ್ರೆಸ್‌ ಶಾಸಕರಿದ್ದರೂ ಜನರ ನಿರೀಕ್ಷೆಗಳು ಹುಸಿಯಾಗಿವೆ. ಆಡಳಿತಾರೂಢ ಪಕ್ಷದ ಆರು ಮಂದಿ ಶಾಸಕರಿದ್ದಾರೆ, ಸಿಎಂ ಸಿದ್ಧರಾಮಯ್ಯರ ಹಿಂದೆ, ಮುಂದೆ ಕಾಣಿಸಿಕೊಳ್ಳುವ ಶಾಸಕರೂ ಜಿಲ್ಲೆಯಲ್ಲಿ ಇದ್ದಾರೆ. ಹಾಗಾದರೆ, ನಮ್ಮ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ಸರ್ಕಾರ ಮಟ್ಟದಲ್ಲಿ ವ್ಯವಹರಿಸಿ ಘೋಷಣೆ ಮಾಡುವಲ್ಲಿ ಎಡವಿದ್ದಾರೆ. ಶಾಸಕರು ತಮ್ಮ ವೈಯಕ್ತಿಕ, ತಮ್ಮ ಜಾತಿ ಸಮುದಾಯದ ಬೇಡಿಕೆಗಳನ್ನು ಮಂಡಿಸುವುದಕ್ಕೆ ತೋರಿಸಿದ ಆಸಕ್ತಿಯನ್ನು ಜಿಲ್ಲೆಯ ಅಭಿವೃದ್ಧಿಗೆ ತೋರಿಸಲಿಲ್ಲ ಎಂಬ ಅಸಮಾಧಾನವೂ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.

2017-18ರ ಬಜೆಟ್‌ನಲ್ಲಿ ದಾವಣಗೆರೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿ 25ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು, 2021-22ರ ಬಜೆಟ್‌ನಲ್ಲಿ ದಾವಣಗೆರೆ 50 ಬೆಡ್‌ಗಳ ಜಯದೇವ ಹೃದ್ರೋಗ ಉಪ ವಿಭಾಗಕ್ಕೆ 20 ಕೋಟಿ ಅಂದಾಜು ಘೋಷಿಸಲಾಗಿತ್ತು. ಆದರೆ, ಈವರೆಗೂ ಇವು ಅನುಷ್ಠಾನ ಆಗಿಲ್ಲ. ಹಾಗಾಗಿ ಘೋಷಿಸಿರುವ ಆರೋಗ್ಯ ಕ್ಷೇತ್ರದ ಈ ಯೋಜನೆಗಳು ದಾವಣಗೆರೆ ದಕ್ಕುತ್ತವೋ ಇಲ್ಲವೋ ಎಂಬ ಪ್ರಶ್ನೆಯೂ ಇದೆ.

ಹಿಂದೆ ಘೋಷಿಸಿದಂತೆ ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸುವ ಹಾಗೂ 30 ಕೋಟಿ ರೂ. ಅನುದಾನವನ್ನು ತೆಗೆದಿರಿಸಿ ಆದೇಶ ಹೊರಡಿಸಿದ್ದರು. ನಿಕಟ ಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಾವು ಮಂಡಿಸಿದ ಆಯವ್ಯದಲ್ಲಿ ಹಣವನ್ನು ಕೊಡುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ದಾವಣಗೆರೆಗೆ ಬಂದಾಗ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನ ಮಂಜೂರು ಮಾಡುವಂತೆ ವಿನಂತಿಸಿದರೂ ಅದರ ಪ್ರಸ್ತಾಪ ಇಲ್ಲದೆ ದಾವಣಗೆರೆ ಕನ್ನಡಾಸಕ್ತರ, ಸಾಹಿತ್ಯಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಸೆಝ್, ಫುಡ್ ಪಾರ್ಕ್ (SEZ, FOOD PARK) ಮತ್ತು ಜಿಲ್ಲೆಯಲ್ಲಿ ಜವಳಿ ಪಾರ್ಕ್‌ ಘೋಷಣೆ ಮಾಡಬಹುದಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ ಐಟಿ ಪಾರ್ಕ್‌, ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬಹುದಿತ್ತು. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್ ಬ್ಯಾಂಕ್ ಮಂಜೂರು ಮಾಡಬಹುದಾಗಿತ್ತು, ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್ ಪಾರ್ಕ್ ಮಂಜೂರು ಮಾಡಬಹುದಾಗಿತ್ತು. ಬಹು ದಿನಗಳ ಬೇಡಿಕೆಯಾದ ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ 200 ಕೋಟಿ ಅನುದಾನ, ಸರ್ಕಾರಿ ಮೆಡಿಕಲ್‌ ಕಾಲೇಜು ಮಂಜೂರು, ರೈತರ ಬಹುನಿರೀಕ್ಷೆಯ ನೀರು ಪೋಲು ತಡೆಯಲು ಹಾಳಾಗಿರುವ ಭದ್ರಾ ನಾಲೆಗಳ ಆಧುನೀಕರಣಕ್ಕೆ ಅನುದಾನ, ದಾವಣಗೆರೆ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಇಲ್ಲವೇ ಕೃಷಿ ವಿವಿ, ಕೈಗಾರಿಕಾ ಕಾರಿಡಾರ್‌ ಮತ್ತು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳು ಜನರ ನಿರೀಕ್ಷೆಗಳಾಗಿದ್ದವು.

ಕೆಲವಕ್ಕಾದರೂ ಅನುದಾನದ ನಿರೀಕ್ಷೆಯಿತ್ತು. ಆದರೆ, ಯಾವ ಬೇಡಿಕೆಗಳು ಈಡೇರದೆ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಅಧಿಕಾರ ನೀಡುವಲ್ಲಿ ಮೈಲಿಗಲ್ಲಾಗಿದ್ದ, ಸಿದ್ದರಾಮೋತ್ಸವಕ್ಕೆ ನೆಲೆ ಮತ್ತು ಯಶಸ್ಸು ತಂದುಕೊಟ್ಟ ದಾವಣಗೆರೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಜನ ಸಾಮಾನ್ಯರು, ರಾಜಕಾರಣಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X