2023-24ನೇ ಸಾಲಿನ ಬರ ಪೀಡಿತ ಜಿಲ್ಲಾ ಹಾಗೂ ತಾಲೂಕುಗಳು ಎಂದು ಘೋಷಿಸಿ ಸರ್ಕಾರ ಹಣ ಮಂಜೂರು ಮಾಡಿದರೂ, ರೈತರ ಖಾತೆಗಳಿಗೆ ಹಣ ಜಮಾ ಆಗದೆ ವಿಳಂಬವಾಗಿರುವುದು ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ. ಯಾದಗಿರಿ ಜಿಲ್ಲೆಯ ಗುರುಮಿಟಕಲ್ ತಹಸೀಲ್ದಾರ್‌ಗೆ ಪ್ರತಿಭಟನಾಕಾರರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಲಾಲಪ್ಪ ತಲಾರಿ, “ಕರ್ನಾಟಕ ಸರ್ಕಾರ 2023-24ನೇ ಸಾಲಿನ ಬರಪಿಡಿತ ಜಿಲ್ಲೆ ಹಾಗೂ ತಾಲೂಕುಗಳೆಂದು ಘೋಷಿಸಿ ಹಣ ಬಿಡುಗಡೆಮಾಡಿದೆ. ಆದರೆ, ಈ ಹಣ ಮಂಜೂರಾಗಿ ತಿಂಗಳುಗಳು ಕಳೆದರೂ ಯಾದಗಿರಿ ಜಿಲ್ಲೆಯಾ ಗುರುಮಿಠಕಲ್ ತಾಲೂಕಿನ ರೈತರ ಖಾತೆಗಳಿಗೆ ಒಂದು ರೂಪಾಯಿ ಹಣ ಕೂಡಾ ಜಮಾ ಆಗಿಲ್ಲ ಮತ್ತು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂಸಿಗದೆ ರೈತರು ಕಂಗಲಾಗಿದ್ದಾರೆ” ಎಂದು ಹೇಳಿದ್ದಾರೆ.
ಕೂಲಿ-ನಾಲಿ ಮಾಡಿಕೊಂಡು ಜೀವನಮಾಡಬೇಕೆಂದರೆ, ಕಲ್ಯಾಣ ಕರ್ನಾಟಕ ಗಡಿಭಾಗದ ಅತೀ ಹಿಂದುಳಿದ ಯಾದಗಿರಿ ಜಿಲ್ಲೆಯ ನೂತನವಾಗಿ ಘೋಷಣೆಯಾದ ಗುರಮಿಠಕಲ್ ತಾಲೂಕಿನಲ್ಲಿ ಯಾವುದೇ ಅಭೀವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಈ ಭಾಗದ ರೈತರು ಏನುಮಾಡಬೇಕೆಂದು ದಿಕ್ಕುತೊಚದೆ ಕುಟುಂಬಸಹಿತ ಬೆಂಗಳೂರು, ಮುಂಬೈ ಹಾಗೂ ಹೈದ್ರಾಬಾದಿನಂತ ಮಹಾನಗರಗಳಿಗೆ ಕೆಲಸಕ್ಕಾಗಿ ಗುಳೆಹೊಗುತ್ತಿದ್ದಾರೆ ಎಂದು ತಿಳಿಸಿದರು.
ಇದರಿಂದ ರೈತರ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಪ್ರಯುಕ್ತ ಸಂಬಂಧ ಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ರೈತರ ಖಾತೆಗಳಿಗೆ ಸರ್ಕಾರದಿಂದ ಮಂಜೂರಾದ ಹಣವನು ಶೀಘ್ರವಾಗಿ ಜಮಾಮಾಡಿ ರೈತರನ್ನು ಗುಳೆಹೊಗುವ ಮನಸಿಕ ಮನಃಸ್ಥಿತಿಯಿಂದ ತಪ್ಪಿಸಬೇಕು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಾರ್ಯಲಯ ಮುಂದು ಹೋರಾಟಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ.ಎಸ್. ತಲಾರಿ, ಗುರುನಾಥ ಕುಂಬರ್, ಶ್ರೀಕಾಂತ್ ತಲಾರಿ, ಲಾಲಪ್ಪ ತಲಾರಿ ಇನ್ನಿತರರು ಉಪಸ್ಥಿತರಿದ್ದರು.