ಹಾಸನ | ಬಿಜೆಪಿ ರ‍್ಯಾಲಿ ವೇಳೆ ಬಂದವರೆಲ್ಲ, ತಂದ ಜನ; ಬನವಾಸೆ ರಂಗಸ್ವಾಮಿ ವ್ಯಂಗ್ಯ

Date:

Advertisements
  • ʼಮತದ ಡಬ್ಬಿಗಳನ್ನು ಬಿಚ್ಚಿ ನೋಡಿದ ಬಳಿಕವೇ ವಾಸ್ತವ ಗೊತ್ತಾಗಲಿದೆʼ
  • ʼಬಿಜೆಪಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಅವರ ಭ್ರಮೆʼ

ಬಿಜೆಪಿ ರ‍್ಯಾಲಿ ವೇಳೆ 50 ಸಾವಿರಕ್ಕೂ ಹೆಚ್ಚು ಮಂದಿ ಜನಸಾಗರ ಹರಿದು ಬಂದಿದ್ದಾಗಿ ತೋರ್ಪಡಿಸಿಕೊಂಡಿದ್ದಾರೆ. ʼಅವರೆಲ್ಲರು ಬಂದ ಜನರಲ್ಲ, ತಂದ ಜನʼ ಎಂದು ಹಾಸನ ವಿಧಾನಸಬಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ವ್ಯಂಗ್ಯವಾಡಿದ್ದಾರೆ.

ಹಾಸನ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಪ್ರೀತಂ ಗೌಡ ಅವರು ನಾಮಪತ್ರ ಸಲ್ಲಿಕೆ ವೇಳೆ ಬೇರೆ ಬೇರೆ ಕ್ಷೇತ್ರದ ಜನರನ್ನು ಕರೆತಂದಿದ್ದಾರೆ. ಈ ಬಾರಿ ಸೋಲುತ್ತೇವೆಂದು ಖಾತ್ರಿಗೊಂಡ ಅವರು ಇತರೆ ಕ್ಷೇತ್ರಗಳ ಜನರನ್ನು ಕರೆತಂದು ನಗೆಪಾಟಲಿಗೀಡಾಗಿದ್ದಾರೆ” ಎಂದು ಟೀಕಿಸಿದರು.

ಹಾಸನ ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಅವರ ಭ್ರಮೆಯಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೆಲವು ಸಣ್ಣ ವ್ಯತ್ಯಾಸಗಳು ಇದ್ದುದರಿಂದ ಪ್ರೀತಂ ಗೌಡ ಪುಕ್ಕಟೆಯಾಗಿ ಮತ ಪಡೆದುಕೊಂಡರು. ಈ ಬಾರಿ ತುಂಬಾ ಕಷ್ಟವಿದೆ. ಜನರು ನಿರ್ಣಾಯಕರು. ಮತದ ಡಬ್ಬಿಗಳನ್ನು ಬಿಚ್ಚಿ ನೋಡಿದ ಬಳಿಕವೇ ವಾಸ್ತವ ಗೊತ್ತಾಗಲಿದೆ.ಕ್ಷೇತ್ರದ ತ್ರಿಕೋನ ಸ್ಪರ್ಧೆಯಲ್ಲಿ ಈ ಬಾರಿ ಎರಡರಿಂದ ಮೂರು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿದೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಶೆಟ್ಟರ್‌ ರಾಜೀನಾಮೆ ಹಿಂದೆ ಆ ‘ಡಿಎನ್‌ಎ’ ಕೈವಾಡ ಇರಬಹುದು: ಎಚ್‌ ಡಿ ಕುಮಾರಸ್ವಾಮಿ

ಒಂದು ಲಕ್ಷ ಮತಗಳಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಪ್ರೀತಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬನವಾಸೆ ರಂಗಸ್ವಾಮಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೆಲವು ಸಣ್ಣ ವ್ಯತ್ಯಾಸಗಳಿಂದ ಪುಕ್ಕಟೆಯಾಗಿ ಜಯಗಳಿಸಿದ ಪ್ರೀತಂ ಗೌಡ ಹುಲುಸಾದ ಹುಲ್ಲುಗಾವಲಿನಲ್ಲಿ ಮೇಯ್ದು, ಮದ ಬಂದ ಕುದುರೆಯಂತೆ ಆಡುತ್ತಿದ್ದಾರೆ. ಆದರೆ, ಮತದಾರರು ಲಗಾಮು ಹಾಕುತ್ತಾರೆ” ಎಂದು ಹೇಳಿದರು.

ಬನವಾಸೆ ರಂಗಸ್ವಾಮಿ ಅವರು ಏಪ್ರಿಲ್‌ 19 ಅಥವಾ 20ರಂದು ನಾಮಪತ್ರ ಸಲ್ಲಿಸುವುದಾಗಿ ಸೂಚನೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X