ಬೆಳಗಾವಿ | ಭೀಕರ ಅಪಘಾತ; ಆರು ಮಂದಿ, ನಾಲ್ವರ ಸ್ಥಿತಿ ಗಂಭೀರ

Date:

Advertisements

ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇನ್ನೂ ನಾಲ್ವರಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.

ನಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೇನಕೊಪ್ಪದ ಹದ್ದಿನಲ್ಲಿ ಗುರುವಾರ ಅಪಘಾತವಾದ ಕಾರಿನಲ್ಲಿ ಧಾರವಾಡ ಹಾಗೂ ಹಾವೇರಿಯ ಎರಡು ಕುಟುಂಬದವರು ಇದ್ದರು.

ಧಾರವಾಡದವರಾದ ಕಾರ್‌ ಚಾಲಕ ಶಾರೂಖ್‌ ಪೆಂಡಾರಿ (30), ಇಕ್ಬಾಲ್‌ ಜಮಾದಾರ (50), ಹಾವೇರಿಯವರಾದ ಸಾನಿಯಾ ಲಂಗೋಟಿ (37), ಉಮ್ರಾ ಬೇಗಮ್‌ ಲಂಗೋಟಿ (17), ಶಬನಮ್‌ ಲಂಗೋಟಿ (37), ಫರಾನ್‌ ಲಂಗೋಟಿ (13) ಮೃತಪಟ್ಟವರು.

Advertisements

ಧಾರವಾಡದ ಫರ್ಹಾತ್‌ ಬೆಟಗೇರಿ (18), ಸಾನಿಯಾ ಇಕ್ಬಾಲ್‌ ಜಮಾದಾರ (36), ಹಾವೇರಿಯ ಸೋಫಿಯಾ ಲಂಗೋಟಿ (22) ಹಾಗೂ ಮಹಿನ್‌ ಲಂಗೋಟಿ (7) ಗಾಯಗೊಂಡಿದ್ದಾರೆ.

ಖಾನಾಪುರ ತಾಲೂಕಿನ ಗೋಲ್ಯಾಳ ಗ್ರಾಮದಲ್ಲಿ ಗುರುವಾರ ಸಂಬಂಧಿಕರ ಮದುವೆ ಇತ್ತು. ಆ ಮದುವೆಯ ಕೆಲ ಸಾಮಗ್ರಿಗಳು ಇವರ ಕಾರಿನಲ್ಲಿದ್ದವು. ಮದುವೆ ಕಾರ್ಯಕ್ಕೆ ತಡವಾದ ಕಾರಣ ಬೇಗ ಬರುವಂತೆ ಸಂಬಂಧಿಕರು ಫೋನ್‌ ಮಾಡುತ್ತಿದ್ದರು. ಇದರಿಂದ ಕಾರ್‌ ಚಾಲಕ ವೇಗವಾಗಿ ಓಡಿಸುತ್ತಿದ್ದ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಪ್ರಾಪ್ತ ಬಾಲಕಿಯ ಕತ್ತು ಕೊಯ್ದು ಪರಾರಿಯಾದ ಬಾಲಕರು

ಚನ್ನಮ್ಮನ ಕಿತ್ತೂರು ಕಡೆಯಿಂದ ಬೀಡಿ ಗ್ರಾಮದ ಕಡೆಗೆ ಹೊರಟಿದ್ದ ಕಾರಿನಲ್ಲಿ ಮೂವರು ಮಕ್ಕಳೂ ಸೇರಿದಂತೆ 10 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಮಂಗೇನಕೊಪ್ಪ ಗ್ರಾಮದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಗೂ ಪೊಲೀಸ್‌ ತಂಡ ಸ್ಥಳಕ್ಕೆ ದೌಢಾಯಿಸಿದ್ದು, ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅವರೆಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 6,635 ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲು: ಸಿಎಂ ಸಿದ್ದರಾಮಯ್ಯ

ಮೂರು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 6,635 ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿದ್ದು,...

ಹಾಸನ | ʼದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ನನಗೆ ಖುಷಿʼ ಎಂದ ಬಾನು ಮುಷ್ತಾಕ್

ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಖಂಡಿತಾ ನನಗೆ ಖುಷಿಯ ವಿಚಾರ...

ಬೀದರ್‌ | ಕನ್ನಡ ಉಳಿಯಬೇಕಾದರೆ ಎಸ್‌ಇಪಿ ಜಾರಿಯಾಗಲಿ : ಪುರುಷೋತ್ತಮ ಬಿಳಿಮಲೆ

ʼಶಿಕ್ಷಣಕ್ಕೆ ಭದ್ರತೆ, ಜೀವನ, ಬದುಕು, ಅನ್ನ, ನೆಮ್ಮದಿ ಸೇರಿದಂತೆ ನಾನಾ ಅರ್ಥಗಳಿವೆ....

ರಾಯಚೂರು | ಬಾಣಂತಿ, ಮಗು ಸಾವು

ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ...

Download Eedina App Android / iOS

X