ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಣಕಾಲ ಪಂಚಾಯತಿಯ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಕಾನ್ನಾಳ ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದು, ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಮೊದಲೇ ಇದೆ. ಕಾನ್ನಾಳದಿಂದ 1ಕಿಲೋ ಮೀಟರ್ ದೂರದಲ್ಲಿರುವ ಮುಳವಾಡ ಏತನೀರಾವರಿ ಕಾಲುವೆಯಿಂದ ಈ ಕೆರೆ ಮತ್ತು ಬಾಂದಾರಿಗೆ ನೀರಿನ್ನು ಹರಿಸಿದರೆ, ಜಾನುವಾರುಗಳಿಗೆ ಜನರಿಗೆ ಕುಡಿಯಲು ಸಮಸ್ಯೆಯಾಗುವುದಿಲ್ಲ.
ನಮ್ಮ ಗ್ರಾಮಕ್ಕೆ ಕೆರೆಗೆ ಮತ್ತು ಬಂದಾರಗಳಿಗೆ ನೀರನ್ನು ತುಂಬಿಸಿ ಕೋಡಬೇಕು ಎಂದು ಗ್ರಾಮಸ್ಥರು ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡ ಗುರು, ಎಸ್.ಎಂ. ಸಜ್ಜನ, ಆರ್.ಎಂ. ಮೇಲಿನಮನಿ, ಶಿವಪ್ಪ ಹೂಗಾರ ಇತರರು ಉಪಸ್ಥಿತರಿದ್ದರು.