ಸಿಪಿಐ(ಎಂಎಲ್) ಮಾಸ್ ಲೈನ್ ಸಮಿತಿಯಿಂದ ಮಾ.3ರಿಂದ 5ರವರೆಗೆ ತೆಲಂಗಾಣ ಖಮ್ಮಂನಲ್ಲಿ ರಾಷ್ಟ್ರೀಯ ಐಕ್ಯತಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಡಿ.ಎಚ್ ಪೂಜಾರ ಹೇಳಿದರು.
ಅವರಿಂದು ರಾಯಚೂರಿನಲ್ಲಿ ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿಪಿಐ(ಎಂಎಲ್) ಪ್ರಜಾಪಂಥ, ಪಿಸಿಸಿ-ಸಿಪಿಐ(ಎಂಎಲ್), ಸಿಪಿಐ(ಎಂಎಲ್) ಆರ್‌ಯ ಕಮುನಿಷ್ಯ ಸಂಘಟನೆಗಳು ಐಕ್ಯಗೊಳ್ಳಲಿದ್ದು ಕೋಮುವಾದಿ, ಕಾರ್ಪೋರೇಟ್ ಶಕ್ತಿಗಳ ವಿರುದ್ದ ಐಕ್ಯ ಹೋರಾಟಕ್ಕೆ ವೇದಿಕೆ ಸಿದ್ದಗೊಳ್ಳಲಿದೆ ಎಂದರು.
ದೇಶ ಗಂಡಾಂತರಕ್ಕೆ ಸಿಲುಕಿದೆ. ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದನಂತರ ಕೋಮುಭಾವನೆಗಳನ್ನು ಕೆರಳಿಸಿ ಜನರನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ ಕುರಿತು ಜನರು ಗಮನ ನೀಡದಂತೆ ಧರ್ಮ ಧರ್ಮಗಳ, ಜಾತಿಗಳ ಮಧ್ಯೆ ಸಂಘರ್ಷ ನಡೆಯುವಂತೆ ಮಾಡಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲು ಪುಲ್ವಾಮ ದುರ್ಘಟನೆಗಳ ಹೆಸರಿನಲ್ಲಿ ಬಿಜೆಪಿ ಅಧಿಕಾರ ಹಿಡಿದರೆ, ಈಬಾರಿ ರಾಮ ಹೆಸರಿನಲ್ಲಿ ಅಧಿಕಾರ ಹಿಡಿಯುವ ಹುನ್ನಾರ ಪ್ರಾರಂಭಿಸಿದೆ. ಅಯೋಧ್ಯಯ ಶ್ರೀರಾಮ ಮಂದಿರ ನಿರ್ಮಾಣದಿಂದ ದೇಶದ ಜನರ ಸಮಸ್ಯೆಗಳು ಪರಿಹಾರವಾಗುತ್ತಿವೆ ಎಂದು ಬಿಂಬಿಸಲಾಗುತ್ತಿದೆ ಎಂದರು.
2014ರಲ್ಲಿ 53ಲಕ್ಷ ಕೋಟಿ ದೇಶದ ಸಾಲವಿತ್ತು. ಈಗ ಒಂದು ಲಕ್ಷ 95 ಸಾವಿರ ಲಕ್ಷ ಕೋಟಿ ಸಾಲ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಲು ಆರ್ಥಿಕ ಹೊರೆ ಎಂದು ಹೇಳುವವರು ಆದಾನಿಯವರ 15 ಲಕ್ಷ ಕೋಟಿ ಆದಾಯ ಪಡೆದಿದ್ದಾರೆ. ಕಾರ್ಪೋರೇಟ್ ಕಂಪನಿಗಳ 10ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೆ 11 ಲಕ್ಷ ಕೋಟಿ ಬಡ್ಡಿ ಪಾವತಿಸಿದೆ. ಸರ್ಕಾರ ಸಾಲದಿದ್ದರೂ ಆದಾನಿ, ಅಂಬಾನಿಗಳ ಆದಾಯ ಕುಸಿದಿಲ್ಲ. ಜಿಎಸ್‌ಟಿ ಸೇರಿದಂತೆ ಅನೇಕ ರೀತಿ ಕರಗಳನ್ನು ಜನರ ಮೇಲೆ ಹಾಕಿ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರವೂ ಸಹ ಅಬಕಾರಿ ಆದಾಯ ಮೇಲೆ ಅವಲಂಬಿತವಾಗಿ ಜನರಿಗೆ ಕುಡಿಯುಲು ಹೇಳುತ್ತಿದೆ ಎಂದು ಕಿಡಿಯಾದರು.
ಹನುಮ ಧ್ವಜ, ಕುವೆಂಪು ಘೋಷ ವಾಕ್ಯ ಬದಲಾವಣೆ, ನಾಡಗೀತೆ ಕುರಿತು ಚರ್ಚಿಸುವ ಶಾಸಕರು ಜನರಿಗೆ ಕೆಲಸ, ಕುಡಿಯುವ ನೀರು, ಆರೋಗ್ಯ ಕುರಿತು ಚರ್ಚೆ ಮಾಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ, ರೈತ, ಕಾರ್ಮಿಕ ನೀತಿ ವಿರೋಧಿಸಿ ಕಮುನಿಷ್ಯ ಪಕ್ಷಗಳು ಒಂದೇ ವೇದಿಕೆ ಮೂಲಕ ಬಲಿಷ್ಠ ಹೋರಾಟಕ್ಕೆ ಸಿದ್ದವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಮೇಶ ಪಾಟೀಲ್, ಬಸವರಾಜ ಯರದಿಹಾಳ, ಅಶೋಕ ನಿಲೋಗಲ್, ಸುರೇಶ, ಸ್ವಾಮಿದಾಸ ಉಪಸ್ಥಿತರಿದ್ದರು.