ಬೆಂಗಳೂರು | ಫೆ.25 ರಂದು ಸಂಚಾರ ಮಾರ್ಗ ಬದಲಾವಣೆ: ಎಲ್ಲೆಲ್ಲಿ? ಇಲ್ಲಿದೆ ನೋಡಿ

Date:

Advertisements

ಭಾರತ ಸಂವಿಧಾನ ಅಂಗೀಕರಣದ 75ನೇ ವರ್ಷದ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.25 ರಂದು ರಾಜ್ಯ ಸರ್ಕಾರವು ‘ಸಂವಿಧಾನ ಜಾಗೃತಿ ಸಮಾವೇಶ’ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಸಾರ್ವಜನಿಕರು ಭಾಗವಹಿಸ ಸಾಧ್ಯತೆ ಇದೆ. ಹಾಗಾಗಿ, ಅರಮನೆ ಮೈದಾನ ಸೇರಿದಂತೆ ಬಳ್ಳಾರಿ ರಸ್ತೆಯಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸಂಚಾರ ಬಂದೋಬಸ್ತ್ ಮಾಡಿದೆ.

ಬಸ್ಗಳಲ್ಲಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಕೃಷ್ಣ ವಿಹಾರ್ ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗದ ಪಟ್ಟಿ

ಬೆಂಗಳೂರಿನ ಒಳಭಾಗದಿಂದ ಕಾರ್ಯಕ್ರಮಕ್ಕೆ ಬಸ್‌ಗಳಲ್ಲಿ ಬರುವವರು ವಿಂಡ್ಲರ್‌ಮ್ಯಾನರ್ ಜಂಕ್ಷನ್ – ಬಿಡಿಎ ಅಪ್‌ ಲ್ಯಾಂಪ್ – ರಮಣ ಮಹರ್ಷಿ ರಸ್ತೆಯ ಪಿ.ಜಿ ಹಳ್ಳಿ ಬಸ್ ನಿಲ್ದಾಣ – ಕಾವೇರಿ ಜಂಕ್ಷನ್ – ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ – ಮೇಕ್ರಿ ಸರ್ಕಲ್ ಬಲತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

Advertisements

ಹಿಂತಿರುಗಿ ವಾಪಾಸ್‌ ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡ ತಿರುವು ಪಡೆದುಕೊಂಡು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ಹಿಂತಿರುಗಿ ವಾಪಾಸ್‌ ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ಹೋಗಬಹುದಾಗಿದೆ.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿಹೆಚ್‌ಇಎಲ್ ಸರ್ಕಲ್ – ಸದಾಶಿವನಗರ ಪಿ.ಎಸ್ ಜಂಕ್ಷನ್ – ಮೇಕ್ರಿ ಸರ್ಕಲ್ ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ಹಿಂತಿರುಗಿ ವಾಪಾಸ್‌ ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಬಹುದು.

ಹಿಂತಿರುಗಿ ವಾಪಾಸ್‌ ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗ

ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ನರ್ ಮ್ಯಾನರ್ ಜಂಕ್ಷನ್ – ಬಿಡಿಎ ಅಪ್‌ ಲ್ಯಾಂಪ್ – ರಮಣಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ಬಸ್ ನಿಲ್ದಾಣ – ಕಾವೇರಿ ಜಂಕ್ಷನ್ – ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ – ಮೇಕ್ರಿ ಸರ್ಕಲ್ ಬಲಕ್ಕೆ ಹೂರ ತಿರುವು ಪಡೆದು – ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-2 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪುವುದು.

ಹಿಂತಿರುಗಿ ವಾಪಾಸ್ ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್)ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ಹೋಗಬಹುದಾಗಿದೆ.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಬಂದು – ಗೇಟ್ ನಂ-2 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪುವುದು.

ಹಿಂತಿರುಗಿ ವಾಪಾಸ್ ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್)ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್ – ಸದಾಶಿವನಗರ ಪಿ.ಎಸ್ ಜಂಕ್ಷನ್ – ಮೇಕ್ರಿ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ – ಗೇಟ್ ನಂ-02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪುವುದು.

ಹಿಂತಿರುಗಿ ವಾಪಾಸ್‌ ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್)ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್ -ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ – ಗೇಟ್ ನಂ – 02 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪುವುದು.

ಹಿಂತಿರುಗಿ ವಾಪಾಸ್‌ ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್) ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಕಂಟೋನ್ಮೆಂಟ್ ಕಡೆಗೆ ಹೋಗಬಹುದಾಗಿದೆ.

ಕಾರ್ಯಕ್ರಮವನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಬಳಸಬೇಕಾದ ಬದಲಿ ಮಾರ್ಗ

ಅರಮನೆ ರಸ್ತೆ : ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಅಂಡರ್‌ಪಾಸ್‌ವರೆಗೆ ವಸಂತನಗರ ಅಂಡರ್‌ಪಾಸ್‌ ವರೆಗೆ

ಎಂ.ವಿ.ಜಯರಾಮರಸ್ತೆ : ಅರಮನೆ ರಸ್ತೆ, ಬಿಡಿಎ ಜಂಕ್ಷನ್‌ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್‌ಪಾಸ್‌ನಿಂದ ಹಳೆ ಉದಯ ಟಿ.ವಿ. ಜಂಕ್ಷನ್ ವರೆಗೆ. (ಎರಡು ದಿಕ್ಕಿನಲ್ಲಿ)

ಬಳ್ಳಾರಿ ರಸ್ತೆ : ಎಲ್.ಆರ್.ಡಿ.ಇ ಯಿಂದ ಹೆಬ್ಬಾಳವರೆಗೆ

ಕನ್ನಿಂಗ್ ಹ್ಯಾಂ ರಸ್ತೆ : ಬಾಳೇಕುಂದ್ರಿ ಸರ್ಕಲ್‌ನಿಂದ ಲಿ ಮೆರಿಡಿಯನ್ ಅಂಡರ್ ಪಾಸ್‌ವರೆಗೆ

ಮಿಲ್ಲರ್ಸ್ ರಸ್ತೆ : ಹಳೆ ಉದಯ ಟಿವಿ ಜಂಕ್ಷನ್‌ನಿಂದ ಎಲ್‌ಆ‌ರ್‌ಡಿಇ ಜಂಕ್ಷನ್‌ ವರೆಗೆ

ಜಯಮಹಲ್‌ ರಸ್ತೆ : ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆಯ ಸುತ್ತಮುತ್ತಲ ರಸ್ತೆಗಳು

ಯಶವಂತಪುರ ಮತ್ತು ಮೇಖ್ರಿ ಸರ್ಕಲ್ ರಸ್ತೆ : ಯಶವಂತಪುರ-ಟಾಟಾ ವಿಜ್ಞಾನ ಸಂಸ್ಥೆ-ಮೇಖ್ರಿ ಸರ್ಕಲ್‌ವರೆಗೆ

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಅವಶ್ಯಕತೆ ಇರುವ ಕಡೆ ಕೊಳವೆ ಬಾವಿ ಕೊರೆಯಲು ಸೂಚನೆ: ತುಷಾರ್ ಗಿರಿನಾಥ್

ವಾಹನ ನಿಲುಗಡೆ ನಿಷೇಧ ಮಾಡಿರುವ ರಸ್ತೆಗಳು

  • ಪ್ಯಾಲೇಸ್‌ ರಸ್ತೆ.
  • ಎಂ.ವಿ. ಜಯರಾಮ್‌ ರಸ್ತೆ
  • ವಸಂತನಗರ ರಸ್ತೆ
  • ಜಯಮಹಲ್ ರಸ್ತೆ
  • ಸಿ.ವಿ. ರಾಮನ್ ರಸ್ತೆ
  • ಬಳ್ಳಾರಿ ರಸ್ತೆ
  • ರಮಣ ಮಹರ್ಷಿ ರಸ್ತೆ
  • ನಂದಿದುರ್ಗ ರಸ್ತೆ
  • ಮೌಂಟ್‌ ಕಾರ್ಮೆಲ್ ಕಾಲೇಜ್ ರಸ್ತೆ
  • ಮೇಖ್ರಿ ಸರ್ಕಲ್‌ನಿಂದ ಯಶವಂತಪುರ ರಸ್ತೆವರೆಗೆ
  •  ತರಳಬಾಳು ರಸ್ತೆ

ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದೊಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X