ಹಿಂದಿನಿಂದಲೂ ಅನ್ಯಾಯದ ವಿರುದ್ಧ ಮತ್ತು ಬಡವರ, ದಿನ ದಲಿತರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಕೂಡ ನನ್ನ ಹೋರಾಟ ಅದೇ ರೀತಿಯಲ್ಲಿ ಮುಂದುವರೆತ್ತದೆ. ನಾವೆಲ್ಲರೂ ಸಂವಿಧಾನದಡಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸುರೇಶ ನಂದೆಣ್ಣವರ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಭೂ ನ್ಯಾಯಮಂಡಳಿಯ ಸದಸ್ಯರಾಗಿ ನೇಮಕವಾದ ಬಳಿಕ ಮಾತನಾಡಿದರು.
ಇನ್ನೋರ್ವ ಭೂ ನ್ಯಾಯಮಂಡಳಿಯ ಸದಸ್ಯರಾಗಿರುವ ನಜೀರ್ ಅಹ್ಮದ್ ಗದಗ ಮಾತನಾಡಿ, “ಸಂವಿಧಾನವೇ ನಮಗೆ ರಕ್ಷಣಾ ಕವಚ ಇದ್ದಂತೆ. ಹಾಗಾಗಿ ನಾವು ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಕೆಲಸ ಮಾಡುವುದರ ಜತೆಗೆ ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ” ಎಂದು ಹೇಳಿದರು.
“ಲಕ್ಷೇಶ್ವರದಲ್ಲಿ ಮುಸ್ಲಿಂ ಸಮುದಾಯ ಮತ್ತು ದಲಿತ ಸಮುದಾಯಗಳು ಸಹೋದರರ ಸಂಬಂಧವನ್ನು ಹೊಂದಿದ್ದು, ಅದು ಯಾವಾಗಲೂ ಹೀಗೆ ಮುಂದುವರೆಯಲಿ” ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ, ಹಿರಿಯ ಹೋರಾಟಗಾರ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸುರೇಶ ನಂದೆಣ್ಣವರ ಮತ್ತು ಇನ್ನೋರ್ವ ಭೂ ನ್ಯಾಯ ಮಂಡಳಿಯ ಸದಸ್ಯ, ಕಾಂಗ್ರೆಸ್ ಪಕ್ಷದ ನಾಯಕ, ವಕೀಲರೂ ಆಗಿರುವ ನಜೀರ್ ಅಹ್ಮದ್ ಗದಗ ಅವರಿಗೆ ಲಕ್ಷ್ಮೇಶ್ವರ ಪ್ರವಾಸಿ ಮಂದಿರದಲ್ಲಿ ವಕೀಲ ಮೈಲಾರಪ್ಪ ಡಿ ಎಚ್ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಶುಭ ಹಾರೈಸಿ ಸಿಹಿ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ವಾಧಿಕಾರಿ ಧೋರಣೆ ಅಂತ್ಯಗೊಳಿಸಲು ಮತದಾರರು ಮುಂದಾಗಬೇಕು: ಎಸ್ ಆರ್ ಹೀರೆಮಠ
ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸದಾನಂದ ಸಂದೆಣ್ಣವರ, ಯುವ ನಾಯಕ ಅನಿಲ ನಂದೆಣ್ಣವರ, ಮಾರುತಿ ಗೋವನಕೊಪ್ಪ, ಮುತ್ತು ಸೂರಣಗಿ, ಬಸವರಾಜ ಸೂರಣಗಿ ಸೇರಿದಂತೆ ಇತರರು ಇದ್ದರು.
