ಮಧ್ಯರಾತ್ರಿ ಕಸ ಎಸೆಯಲು ಹೋಗಿದ್ದ ಯುವತಿಗೆ ಕಾಮುಕರ ಗುಂಪೊಂದು ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿದ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೆಬ್ರುವರಿ 18ರಂದು ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತನೊಂದಿಗೆ ಕಸ ಎಸೆಯಲು ತೆರಳಿದ್ದ ಯುವತಿಗೆ ಕಾಮುಕರ ಗುಂಪು ಯುವತಿಯ ಖಾಸಗಿ ಭಾಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ. ಸದ್ಯ ಈ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪಿಯುಸಿ-ಸಿಇಟಿ/ನೀಟ್ ಪರೀಕ್ಷೆಗಳಿಗೆ 30 ದಿನಗಳ ತರಬೇತಿ
ಏನಿದು ಪ್ರಕರಣ?
ಫೆಬ್ರುವರಿ 18ರ ಮಧ್ಯರಾತ್ರಿ ಯುವತಿ ತನ್ನ ಸ್ನೇಹಿತನ ಜತೆಗೆ ಕಸ ಎಸೆಯಲು ತೆರಳಿದ್ದಳು. ಕೋರಮಂಗಲದ ಆಟೋ ಸ್ಟಾಪ್ ಬಳಿ ಕಾಮಕರ ಗುಂಪೊಂದು ಬಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದೆ.
ಯುವತಿ ಮೇಲೆ ಬಿದ್ದು ಆಕೆಯ ಖಾಸಗಿ ಭಾಗವನ್ನು ಸ್ಪರ್ಶಿಸಿದ್ದಾರೆ. ಅಲ್ಲದೇ, ಯುವತಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಯುವತಿ ಸ್ನೇಹಿತನಿಗೂ ಥಳಿಸಿ ಪರಾರಿಯಾಗಿದ್ದಾರೆ.