ಬೀದರ್‌ | ವೈಚಾರಿಕ ಪರಂಪರೆಯೊಂದು ಕಲ್ಯಾಣದಲ್ಲಿ ಇತ್ತೆಂಬುದೇ ಬೆರಗಿನ ಸಂಗತಿ : ಪ್ರೊ.ಅರುಣ ಕಮಲ

Date:

Advertisements

12ನೇ ಶತಮಾನದಲ್ಲಿ ವಚನಕಾರರು ನಡೆಸಿದ ಚರ್ಚೆ ಚಿಂತನೆಗಳು  ಜ್ಞಾನ ಪರಂಪರೆ, ದರ್ಶನಗಳಾಗಿವೆ.  ಜಾಗತಿಕ ತತ್ವಶಾಸ್ತ್ರದ ಭಾಗವಾಗಿವೆ ಎಂದು ಬಿಹಾರದ ಪಟ್ನಾ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಹಿಂದಿ ಕವಿ ಪ್ರೊ. ಅರುಣ್ ಕಮಲ್ ಅಭಿಪ್ರಾಯಪಟ್ಟರು.

ಬಸವಕಲ್ಯಾಣ ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ.  ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ  ಶನಿವಾರ ಹಮ್ಮಿಕೊಂಡಿದ್ದ ‘ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ’ ಕುರಿತ  ಪ್ರತಿಷ್ಠಾನದ 77ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಬಸವಣ್ಣನವರ ನೆಲದಲ್ಲಿ ಮಾನವೀಯತೆ ಮತ್ತು ಜ್ಞಾನ ಪರಂಪರೆ ಎರಡೂ ಚಲನಶೀಲವಾಗಿದ್ದವು. ಲೋಕಜ್ಞಾನದ ಅಂತರಂಗ ಕಟ್ಟಿಕೊಡುವ ಸಾಮರ್ಥ್ಯ ಭಾಷೆಗಿದೆ. ಭಾಷೆಗೆ ಯಾವ ಹಂಗು ಇಲ್ಲ. ಆಡಿದವರಿಗೆ ದಕ್ಕುವ ಗುಣ ಭಾಷೆಗಿದೆ. ಭಾಷೆ ಯಾವುದಾದರೂ ಅದರಲ್ಲೊಂದು ಜ್ಞಾನ ಪರಂಪರೆ ಇದ್ದೇ ಇರುತ್ತದೆ . ಹೆಚ್ಚು ಭಾಷೆ ತಿಳಿದಷ್ಟು ಹೆಚ್ಚು ಜ್ಞಾನ ಪರಂಪರೆ ಅರಿಯುತ್ತೇವೆ. ಭಾಷಾ ಜ್ಞಾನ ಇರುವವರು ವ್ಯವಹಾರಿಕ ಜ್ಞಾನವೂ ಹೊಂದಿರಬೇಕು. ಲೋಕಜ್ಞಾನದ ಆಂತರ್ಯವನ್ನು ಭಾಷೆ ದಟ್ಟವಾಗಿ ಕಟ್ಟಿಕೊಡುತ್ತದೆ. ಎಲ್ಲರ ಜಪ್ತಿಗೂ ಸಿಗುವ ಗುಣ ಎಲ್ಲಾ ನುಡಿಗಳಿಗಿದೆ. ಕಲಿಕೆಯ ಪ್ರಯತ್ನ ಮುಖ್ಯ” ಎಂದರು.

Advertisements

“ಕಲ್ಯಾಣ ಎಂಬುದು ಬಹುದೊಡ್ಡ ಅನುಭವ ಲೋಕವಾಗಿದೆ. ಇಲ್ಲಿ ಬಸವ, ಅಲ್ಲಮ, ಅಕ್ಕ ಸೇರಿ ಹಲವರು ನಡೆಸಿದ ಚರ್ಚೆ, ಚಿಂತನೆಗಳು ಜಗತ್ತಿನ ಚಲನಶೀಲತೆಗೆ ಚಾಲಕ ಶಕ್ತಿಗಳಾಗಿವೆ. ವೈಚಾರಿಕ ಪರಂಪರೆಯೊಂದು ಕಲ್ಯಾಣದಲ್ಲಿ ಇತ್ತೆಂಬುದೇ ಬೆರಗಿನ ಸಂಗತಿ. ಕಲ್ಯಾಣ ಎರಡು ನೆಲೆಗಳಲ್ಲಿ ಕಾಣುತ್ತೇವೆ. ಒಂದು ತೀರ್ಥಯಾತ್ರೆಯ ನೆಲೆ. ಮತ್ತೊಂದು ಅಧ್ಯಯನದ ನೆಲೆ. ಅನುಸಂಧಾನದ ನೆಲೆಯಲ್ಲಿ ಕಲ್ಯಾಣ ಅನುಭವಲೋಕ ಹಾಗೂ ತಾತ್ವಿಕ ಲೋಕ ಕಾಣುತ್ತದೆ” ಎಂದರು.

“ತಂತ್ರಜ್ಞಾನ, ವೈದ್ಯಕೀಯ, ಸಾಹಿತ್ಯ ಯಾವುದೇ ವಲಯವಾದರೂ ಅದರ ನಿರೂಪಣೆಗೆ, ಕಥನಕ್ಕೆ, ಅಭಿವ್ಯಕ್ತಿಗೆ ನುಡಿಯೇ ದಾರಿಯಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ  ಅದರ ನಿಯಂತ್ರಣಕ್ಕೆ ಮತ್ತು ಬಳಕೆಗೆ ಮನುಷ್ಯನ ಅಗತ್ಯವಿದೆ. ಮಾನವೀಯತೆ ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು. ಮಾನವೀಯತೆ ಬದುಕಿನ ಸತ್ವವಾಗಿದೆ. ಬಸವಣ್ಣನವರ ನೆಲದಲ್ಲಿ ಮಾನವೀಯತೆ ಮತ್ತು ಜ್ಞಾನ ಪರಂಪರೆ ಎರಡೂ ಚಲನಶೀಲವಾಗಿದ್ದವು” ಎಂದು ಹೇಳಿದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ  ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ ಮಾತನಾಡಿ, “ಬಹಳ ದೊಡ್ಡ ದೊಡ್ಡ ವ್ಯಕ್ತಿತ್ವಗಳ ಬರಹಗಾರರ, ವಿಜ್ಞಾನಿಗಳ  ಮಾತನ್ನು ಕೇಳಿಸಿಕೊಳ್ಳುವದೂ ಶಿಕ್ಷಣದ ಭಾಗವಾಗಿದೆ.  ದೊಡ್ಡವರ  ಮಾತು ಮತ್ತು ಆಲೋಚನೆಗಳು ಅನೇಕ ಹೊಸ ದಾರಿ, ಹೊಸ ಹೊಳಹು ತೋರಿಸುತ್ತವೆ.  ಸಾಹಿತ್ಯದಲ್ಲಿ ಬದುಕಿನ ಸಮಾಜದ ಹಲವು ಮುಖಗಳು ಅಡಕವಾಗಿರುತ್ತವೆ. ಅದನ್ನು ಅರಿಯುವ ಸೂಕ್ಷ್ಮತೆ ಗಂಭೀರ ಓದಿನಿಂದ ಸಾಧ್ಯ” ಎಂದರು.

“ಓದುವುದೆಂದರೆ ಒಂದು ಪಠ್ಯ ಇಲ್ಲವೆ ಪದ್ಯ ನಮ್ಮ ಅನುಭವಕ್ಕೆ ತಂದುಕೊಳ್ಳುವುದು. ನಮ್ಮ ಓದು ನಮ್ಮ ವ್ಯಕ್ತಿತ್ವದ ಭಾಗವಾಗಬೇಕು. ಜೀವನ, ಲೋಕವನ್ನು ಕಾಣುವ ದೃಷ್ಟಿಕೋನವನ್ನು, ಆಯಾಮವನ್ನು ರೂಪಿಸುವಂತಹ ಓದು ನಿಜವಾದ ಓದು ಆಗುತ್ತದೆ. ಹಲವು ಶ್ರೇಷ್ಠ ಕೃತಿಗಳು ಓದುವ ಮೂಲಕ ಲೋಕವನ್ನು ಭಿನ್ನವಾಗಿ ಕಾಣಲು ಸಾಧ್ಯ”ಎಂದರು.

ಸಿಯುಕೆ ಪ್ರಾಧ್ಯಾಪಕ ಪ್ರೊ. ಬಿ.ಬಿ.ಪೂಜಾರಿ ಮಾತನಾಡಿ, “ಆಲೋಚಿಸುವ, ಮಾತನಾಡುವ, ಬರೆಯುವ ಸಾಮರ್ಥ್ಯ ಕೇವಲ ಮನುಷ್ಯನಿಗೆ ಮಾತ್ರ ಒದಗಿದ ವರ. ಒಳ್ಳೆಯದನ್ನು ಆಲೋಚಿಸಿ ಬರೆದು, ಮಾತನಾಡುತ್ತ ತನ್ನ ಸೃಜನಶೀಲತೆಯನ್ನು ಬೆಳೆಸಿಕೊಂಡವರು ಉತ್ತಮ ಬರಹಗಾರರಾಗುತ್ತಾರೆ. ಮನುಷ್ಯನ ವ್ಯಕ್ತಿತ್ವ ಅವನ ಸೃಜನಶೀಲ ಕೆಲಸಗಳಿಂದ ರೂಪುಗೊಳ್ಳುತ್ತದೆ” ಎಂದು ನುಡಿದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ,”ಸಾಹಿತ್ಯ ತನ್ನ ಕಾಲದ ಹಲವು ತಲ್ಲಣಗಳಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಹೊಂದಿದೆ.  ಜಾಗತಿಕ, ಭಾರತೀಯ ಮತ್ತು ಕನ್ನಡ ಸಾಹಿತ್ಯದ ಮೂಲ ಸತ್ವ ಮಾನವೀಯತೆಯಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ: ಸಿಎಂ ಸಿದ್ದರಾಮಯ್ಯ

ಕಾಲೇಜು ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೀರೆ ಅಧ್ಯಕ್ಷತೆ ವಹಿಸಿದರು.  ಡಾ.ಎನ್.ಆರ್.ಕೋಡ್ಲೆ, ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಫತೆಪುರದ ವಿಮಲ್ ಕುಮಾರ ಸೇರಿದಂತೆ ಹಲವರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಉಪ ಪ್ರಾಚಾರ್ಯಡಾ. ಅರುಣ್ ಕುಮಾರ್ ಯಲಾಲ್ ಸ್ವಾಗತಿಸಿದರು. ಬಿಇಸಿ ರಿಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

Download Eedina App Android / iOS

X